ಬೆಂಗಳೂರು: ಕುಡಿಯುವ ನೀರಿಗಾಗಿ 224 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ,ನೀರು ಸಿಗದಿದ್ರೆ, ಖಾಸಗಿ ಕೊಳವೆ, ಬಾವಿ ಮೂಲಕ ನೀರು ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಅನೇಕ ಬೆಳೆ ಹಾಳಾಗಿದ್ದು, ನೀರಿನ ಸಮಸ್ಯೆ ಇರೋದು ಕಂಡುಬಂದಿದೆ. ಹೀಗಾಗಿ ಮೊದಲು ಬರದ ಬಗ್ಗೆ ಆದ್ಯತೆ ಕೊಡಲಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಸಿಗದಿದ್ರೆ ಹೊಸದಾಗಿ ಬೋರ್ ಕೊರೆಸಿ ನೀರು ಕೊಡಬೇಕು. ರೈತರ ಹೊಲ, ಗದ್ದೆಗಳಿಗೆ ಭೇಟಿ ನೀಡಿದ್ದೆವು. ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಧೈರ್ಯ ಕೊಡ್ತಿದ್ದೇವೆ. ಹೆಚ್ಚು ಅನುದಾನ ಕೊಟ್ಟಿದ್ದೇವೆ. ಅಲ್ಲದೇ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇ-ಸ್ವರಾಜ್ ತಂತ್ರಾಂಶ ಇದೆ. ವರ್ಗಾವಣೆ ಪ್ರಮಾಣಪತ್ರ ಆಗಬೇಕಿದೆ. 15ನೇ ಹಣಕಾಸು ಬರಬೇಕಾದ ಹಣ ತಡೆ ಹಿಡಿಯಲಾಗಿದೆ. ಇನ್ನೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ 2,186 ಕೋಟಿ ರೂ. ಹಣ ಬಿಡುಗಡೆ ಆಗಬೇಕು. 5,900 ಗ್ರಾಮ ಪಂಚಾಯತಿಗಳಿಗೆ ಹಣಕಾಸು ಕೊರತೆಯಾಗಿದೆ. ಈ ಸಂಬಂಧ ಅಲೋಕೇಟ್ ಆಗಲಿದೆ. ಪಂಚಾಯತಿ ವಿದ್ಯುತ್ ದುರಸ್ತಿ ಕೂಡ ಆಗಬೇಕಿದೆ. ಈಗಾಗಲೇ ಅನೇಕ ಸಚಿವರನ್ನ ಭೇಟಿಯಾಗಿದ್ದು, ಇಂದು ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಹಣ ಬಿಡುಗಡೆ ಮಾಡಿಸುವಂತೆ ಮನವಿ ಮಾಡ್ತೇನೆ ಎಂದು ಹೇಳಿದ್ದಾರೆ.
ಈ ಬಾರಿ 224 ಕ್ಷೇತ್ರಕ್ಕೆ 224 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ನೀರಿಗಾಗಿ ನಮ್ಮಲ್ಲಿ ಹಣಕಾಸು ಕೊರತೆ ಇಲ್ಲರಾಜ್ಯದಲ್ಲಿ ಭೀಕರ ಬರಗಾಲವಿದೆ. ಸಿಎಂ ಅಧ್ಯಕ್ಷತೆಯಲ್ಲಿ, ವಿಭಾಗೀಯ ಮಟ್ಟದ ಪ್ರಕೃತಿ ವಿಕೋಪದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಈ ಹಿಂದೆ ಕುಡಿಯುವ ನೀರಿಗಾಗಿ 117 ಕೋಟಿ ರೂ. ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಎಂದು ಹೇಳಿದ್ದಾರೆ.
ಬಿಜೆಪಿಯವರಿಂದು ಬರ ಅಧ್ಯಯನ ಮಾಡುತ್ತಿರುವ ವಿಚಾರವಾಗಿ ಮಾತನಾಡಿ,ಮಹದಾಯಿ ಯೋಜನೆ, ಕಳಸ ಬಂಡೂರಿ ತಿರಸ್ಕಾರ ಮಾಡಿದ್ದಾರೆ. ಯೋಜನೆ ನೆನೆಗುದಿಗೆ ಬಿದ್ದಿರೋದು ಬಿಜೆಪಿಗೆ ಕಾಣ್ತಿಲ್ವಾ? ಇವರಿಗೆ ರಾಜ್ಯದ ಬಗ್ಗೆ ಕಾಳಜಿ ಇದೆಯಾ? ಬಿಜೆಪಿ ಅವರಿಗೆ ಬರ, ಶಿಕ್ಷಣ, ಯುವಕರ ಬಗ್ಗೆ ಚಿಂತನೆ ಇಲ್ಲ. ಅಧಿಕಾರಕ್ಕೆ ಬರುವ ಹಪಹಪಿ ಇದೆ. ಬಿಜೆಪಿ ಅವರು ಕೇಂದ್ರಕ್ಕೆ ಹೋಗಿ ಅನುದಾನ ತರಲಿ. ಮೊದಲು ಬಿಜೆಪಿ ಅವರು ಅದರ ಬಗ್ಗೆ ಮಾತಾಡಲಿ. ಕಾಟಾಚಾರಕ್ಕೆ ಬರ ಅಧ್ಯಯನ ಹೋಗೋದಲ್ಲ ಎಂದು ವಾಗ್ದಾಳಿ ನಡೆಸಿದರು.





