ದೆಹಲಿಯಲ್ಲಿ ಸಿಜೆಪಿ ಧರಣಿ ವಿನ್ ನಂತರ ಪರ ವಿರೋಧ ಹೇಳಿಕೆಗಳು ಬೆಳಕಿಗೆ ಬರುತ್ತಿವೆ. ಯುವ ಜನತೆ ಬುದ್ದಿ ಸರಿ ಇಲ್ಲ ಎಂದು ಕೆಲವರು ಹೇಳಿದ್ರೆ ಇನ್ನು ಕೆಲವರು ಯುವಕರ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.
ಇತ್ತ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ )ಅವರು Gen-Z ಪ್ರತಿಭಟನಾಕಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು ಇವರ ಹೇಳಿಕೆಗಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯುವಜನತೆಯಿಂದಲೇ ನಾವು ಸ್ಟಾರ್ ಆಗಿರೋದು, ಅವರನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು ಸೂದ್, ಮೊದಲಿಗೆ ಕಂಗನಾ ಹೇಳಿಕೆಯನ್ನು ಕೇಳಿಲ್ಲ ಎಂದು ತಿಳಿಸಿದ್ದರು ನಂತರ, ಯುವಜನರ ಬಗ್ಗೆ ಮಾತನಾಡುತ್ತಾ, ಈ ಯುವಕರೇ ನಟರನ್ನು ಸ್ಟಾರ್ ಮಾಡುತ್ತಾರೆ. ಈ ಸ್ಥಾನಕ್ಕೆ ತಲುಪಲು ಅವರೇ ಕಾರಣ. ಅವರು ನಮ್ಮ ಜೊತೆ ಇರುವವರೆಗೂ ನಾವು ಬೆಳೆಯುತ್ತೇವೆ ಎಂದಿದ್ದಾರೆ.
ನೀವು ನಟರಾಗಿರಲಿ, ವೈದ್ಯರಾಗಿರಲಿ ಅಥವಾ ಬೇರೆ ಯಾವುದೇ ವೃತ್ತಿಯಲ್ಲಿರಲಿ, ಜನರು ನಿಮ್ಮನ್ನು ಬೆಂಬಲಿಸುವವರೆಗೂ ಮಾತ್ರ ನಿಮ್ಮ ಅಸ್ತಿತ್ವಕ್ಕೆ ಅರ್ಥ ಇರುತ್ತದೆ ಎಂದು ಅಭಿಪ್ರಾಯಪಟ್ಟರುಯುವಕರು ನಮ್ಮಿಂದ ದೂರವಾದರೆ ಅದು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು ಎಂದರು.
ಇತ್ತೀಚೆಗೆ ಕಂಗನಾ ರನೌತ್ ಇನ್ಸ್ಟಾಗ್ರಾಮ್ನಲ್ಲಿ Gen-Z ಪ್ರತಿಭಟನಾಕಾರರನ್ನು ಟೀಕಿಸಿ ಪೋಸ್ಟ್ ಮಾಡಿದ್ದರು. ಪ್ರತಿಭಟನೆಯಲ್ಲಿ ಬಳಸಿದ ಭಾಷೆ ಮತ್ತು ವರ್ತನೆಯನ್ನು ʼವಾಂತಿ ಬರಿಸುವಂತಿದೆʼ ಎಂದು ವಾಗ್ದಾಳಿ ನಡೆಸಿದ್ದರು.
ಪ್ರತಿಭಟನಾಕಾರರು ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ಕಂಗನಾ, ಅವರನ್ನು ʼಜನರೇಷನ್ ಗಟರ್ʼ ಎಂದು ಉಲ್ಲೇಖಿಸಿದ್ದರು. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪರ-ವಿರೋಧದ ಅಭಿಪ್ರಾಯಗಳು ಹುಟ್ಟಿಕೊಳ್ಳುತ್ತಿವೆ.
ಕಂಗನಾ ಪ್ರತಿಭಟನಾಕಾರರನ್ನು ‘ಜನರೇಷನ್ ಗಟರ್’ ಎಂದು ಕರೆದಿರುವ ಬಗ್ಗೆ ಪ್ರಶ್ನಿಸಿದಾಗ, ಅವರು ಹಾಗೆ ಹೇಳಿದ್ದರೆ, ಅದು ಸರಿಯಲ್ಲ. ಅಂತಹ ಮಾತು ಹೇಳಬಾರದಿತ್ತು ಸಾರ್ವಜನಿಕರೇ ದೇವರ ಮತ್ತೊಂದು ರೂಪ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದು ಸೋನು ಸೂದ್ ಹೇಳಿದರು.
ನಾವು ಎಷ್ಟೇ ದೊಡ್ಡ ಮಟ್ಟದಲ್ಲಿ ಹೋದರ ನಮ್ಮನ್ನು ಬೆಳೆಸಿದವರನ್ನು ಯಾವತ್ತು ಮರೆಯಬಾರದು,ದೇಶದ ಶಕ್ತಿ ನಮ್ಮ ಯುವಕರಾಗಿದ್ದಾರೆ ಅವರಿಗೆ ಬೆಂಬಲ ನೀಡೋಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





