Mallikarjun Kharge : ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಹಲವು ವಿದ್ಯಾರ್ಥಿಗಳ ಕೈಕಾಲುಗಳು ಮುರಿದಿವೆ – ಖರ್ಗೆ

ನವದೆಹಲಿ: ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಹಲವು ವಿದ್ಯಾರ್ಥಿಗಳ ಕೈಕಾಲುಗಳು ಮುರಿದಿವೆ, ಕಣ್ಣುಗಳಿಗೆ ಪೆಲೆಟ್ ಏಟು ಬಿದ್ದಿದೆ. ಇದನ್ನೆಲ್ಲಾ ನೋಡಿ ನಮಗೆ ನಾಚಿಕೆಯಾಗುತ್ತಿದೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶಗೊಂಡಿದ್ದಾರೆ.

ಒಂದು ದಿನ ನಾವು ಅಮಿತ್‌ ಶಾ ಅವರನ್ನು ಹೊರಗೆ ಎಳೆದು ತಂದು ಜನರ ಮುಂದೆ ನಿಲ್ಲಿಸುತ್ತೇವೆ ಎಂದ್ದಿದ್ದು, ಧರಣಿಯಲ್ಲಿ ಹಲವು ವಿದ್ಯಾರ್ಥಿಗಳ ಕಣ್ಣುಗಳಿಗೆ ಪೆಲೆಟ್ ಏಟು ಬಿದ್ದಿದೆ. ಇದನ್ನೆಲ್ಲಾ ನೋಡಿ ನಮಗೆ ನಾಚಿಕೆಯಾಗುತ್ತಿದೆ. ಈ ಘಟನೆಗೆ ಗೃಹ ಸಚಿವರೇ ಕಾರಣ. ಅವರು ಬಾಗಿಲ ಹಿಂದೆ ಅಡಗಿ ಕುಳಿತಿರಬಹುದು, ಆದರೆ ಹೆಚ್ಚು ಕಾಲ ಅಡಗಿರಲು ಸಾಧ್ಯವಿಲ್ಲ. ಒಂದು ದಿನ ನಾವು ಅವರನ್ನು ಹೊರಗೆ ಎಳೆದು ತಂದು ಜನರ ಮುಂದೆ ನಿಲ್ಲಿಸುತ್ತೇವೆ ಎಂದರು.

ಖರ್ಗೆ ಅವರ ‘ಹೊರಗೆ ಎಳೆದು ತರುತ್ತೇವೆ’ ಎಂಬ ಪದಪ್ರಯೋಗಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹೇಳಿಕೆ ಹಿಂಸಾಚಾರದ ಬೆದರಿಕೆ ಎಂದು ಕರೆದಿದ್ದಾರೆ. ಸದನದ ನಾಯಕ ಜೆ.ಪಿ. ನಡ್ಡಾ ಅವರು ಈ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಸ್ಪೀಕರ್‌ ಅವರನ್ನು ಒತ್ತಾಯಿಸಿದ್ದಾರೆ.

ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ಖರ್ಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಖಂಡನೆ ಎಂದಿದ್ದು, ನಾವು’ ಎಂದರೆ ಈ ದೇಶದ ಜನತೆ ಎಂದರ್ಥ ಎಂದು ವಿವರಿಸಿದರು. ಲಾಠಿಚಾರ್ಜ್‌ಗೆ ಸಂಬಂಧಿಸಿದಂತೆ ಅಮಿತ್ ಶಾ ರಾಜೀನಾಮೆ ನೀಡಬೇಕು, ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಜಾಗೊಳಿಸಬೇಕು ಎಂದು ಹೇಳಿದ್ದಾರೆ.

ಅಧಿಕಾರ ಕಳೆದುಕೊಳ್ಳುವ ಭಯದಿಂದ ಸರ್ಕಾರವು ಈ ಮಸೂದೆಯನ್ನು ತಂದಿದ್ದು, ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ, ಬೀದಿಗಿಳಿದು ಪ್ರತಿಭಟಿಸುತ್ತಿರುವ ಯುವಕರನ್ನು ಶಾಂತಗೊಳಿಸಲು ಮತ್ತು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದರು.

ಈ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ. ಸಂಸತ್ತಿನತ್ತ ಶಾಂತಿಯುತವಾಗಿ ಮೆರವಣಿಗೆ ಹೊರಟಿದ್ದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಅಶ್ರುವಾಯು ಮತ್ತು ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ. ರೈಲ್ವೆ ನಿಲ್ದಾಣಗಳು ಮತ್ತು ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಲಾಗಿತ್ತು ಎಂದು ಖರ್ಗೆ ದೂರಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others