ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಕೆಲವು ಜಲಾಯಶಗಳ ಮಟ್ಟ ಏರಿಕೆಯಾಗಿದೆ.
ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಪೂರ್ವ ವಿದರ್ಭ ಮತ್ತು ಪಕ್ಕದ ಪಶ್ಚಿಮ-ಮಧ್ಯ ಛತ್ತೀಸ್ಗಢದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಕಳೆದ 6 ಗಂಟೆಗಳಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯುವ್ಯಕ್ಕೆ ಚಲಿಸಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆʻ
ಪಶ್ಚಿಮ ವಿದರ್ಭ ಮತ್ತು ಪಕ್ಕದ ದಕ್ಷಿಣ ಮಧ್ಯಪ್ರದೇಶದ ಮೇಲೆ ಕೇಂದ್ರೀಕೃತವಾಗಿದ್ದು, ಸರಾಸರಿ ಸಮುದ್ರಮಟ್ಟದಲ್ಲಿ ಇರುವ ಮಾನ್ಸೂನ್ ಟ್ರಫ್ ಪ್ರಸ್ತುತ ಜೈಸಲ್ಮರ್, ಉದಯಪುರ, ಇಂದೋರ್ ಮೂಲಕ ಸಾಗುತ್ತಿದ್ದು, ಪಶ್ಚಿಮ ವಿದರ್ಭ ಹಾಗೂ ಹೊಂದಿಕೊಂಡಿರುವ ದಕ್ಷಿಣ ಮಧ್ಯಪ್ರದೇಶದ ಮೇಲಿರುವ ವಾಯುಭಾರ ಕುಸಿತ ಕೇಂದ್ರವನ್ನು ಹಾದು, ಅಲ್ಲಿಂದ ಗೋಪಾಲಪುರ ಮೂಲಕ ಆಗೇಯ ದಿಕ್ಕಿನಲ್ಲಿ ಮಧ್ಯ ಬಂಗಾಳ ಕೊಲ್ಲಿಯವರೆಗೆ ಹಾದುಹೋಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಮುಂದಿನ ಎರಡು ದಿನಗಳ ಅವಧಿಯಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಈ ನಡುವೆ ಆಗಸ್ಟ್ ರಲ್ಲಿ ಕರ್ನಾಟಕದ ಪ್ರಮುಖ 13 ಜಲಾಯಶಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿ ಹೀಗಿದೆ ನೋಡಿ
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,609.74
ಒಳಹರಿವು: 16,050
ಹೊರಹರಿವು: 3,648
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.5
ಇಂದಿನ ಮಟ್ಟ: 2,058.70
ಒಳಹರಿವು: 3,416
ಹೊರಹರಿವು: 1,194
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,151
ಒಳಹರಿವು: 10,878
ಹೊರಹರಿವು: 1,556
ಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 156
ಒಳಹರಿವು: 9,349
ಹೊರಹರಿವು: 181
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 519.10
ಒಳಹರಿವು: 82,743
ಹೊರಹರಿವು: 1,11,308
ನಾರಾಯಣಪುರ ಜಲಾಶಯ
ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 491.49
ಒಳಹರಿವು: 1,10,000
ಹೊರಹರಿವು: 1,15,474
ಕೆಆರ್ಎಸ್ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 92.85
ಒಳಹರಿವು: 7,058
ಹೊರಹರಿವು: 1,706 ಕ್ಯೂಸೆಕ್ಸ್ಗಳಲ್ಲಿ
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,857.95
ಒಳಹರಿವು: 13,000
ಹೊರಹರಿವು: 13,000 ಕ್ಯೂಸೆಕ್ಸ್ಗಳಲ್ಲಿ
ಕಬಿನಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00
ಇಂದಿನ ಮಟ್ಟ: 2278.38
ಒಳಹರಿವು: 9133
ಹೊರಹರಿವು: 500 ಕ್ಯೂಸೆಕ್ಸ್ಗಳಲ್ಲಿ
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2907.75
ಒಳಹರಿವು: 5,445
ಹೊರಹರಿವು: 500 ಕ್ಯೂಸೆಕ್ಸ್ಗಳಲ್ಲಿ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,776.20
ಒಳಹರಿವು: 20,003
ಹೊರಹರಿವು: 2,015 ಕ್ಯೂಸೆಕ್ಸ್ಗಳಲ್ಲಿ
ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 537.12
ಒಳಹರಿವು: 12,769
ಹೊರಹರಿವು: 0 ಕ್ಯೂಸೆಕ್ಸ್ಗಳಲ್ಲಿ
ಮಾಣಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 580.72
ಒಳಹರಿವು: 922
ಹೊರಹರಿವು: 0





