ಕೆಇಎಯಿಂದ ಪೊಲೀಸ್ ಕಾನ್ಸ್ ಸ್ಟೇಬಲ್ ನೇಮಕಾತಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ

ಬೆಂಗಳೂರು: ಕೆಎಸ್ ಆರ್ ಪಿ, ಕೆಎಸ್ಐಎಸ್ಎಫ್, ಐಆರ್ ಬಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಸೆ.20ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ. ಆಕ್ಷೇಪಣೆಗಳು ಇದಲ್ಲಿ ಸೆ.27ರೊಳಗೆ ನಿಗದಿತ ಲಿಂಕ್‌ ಮೂಲಕ ಸಲ್ಲಿಸಬಹುದು. ದಾಖಲೆ ಅವಧಿ ಅಂದರೆ ಪರೀಕ್ಷೆ ನಡೆದು ಕೇವಲ ಐದು ದಿನಗಳಲ್ಲಿಯೇ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಉಳಿಕೆ ಮೂಲ ವೃಂದದ 1,13,390 ಹಾಗೂ ಕಲ್ಯಾಣ ಕರ್ನಾಟಕ ವೃಂದದ 33,061 ಅಭ್ಯರ್ಥಿಗಳು ಪರೀಕ್ಷೆ […]

ಇನ್‌ಸ್ಟಾಮಾರ್ಟ್ ಡೆಲಿವರಿ ಪಾಲುದಾರರಿಗೆ ಇವಿ ಸೌಲಭ್ಯ ವಿಸ್ತರಣೆ; ಯುಲು, ಯುಮಾ ಎನರ್ಜಿ ಜೊತೆ ಪಾಲುದಾರಿಕೆ

ಬೆಂಗಳೂರು: ಲಾಸ್ಟ್ ಮೈಲ್ ಡೆಲಿವರಿಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಇನ್‌ಸ್ಟಾಮಾರ್ಟ್, ಯುಲು ಮತ್ತು ಯುಮಾ ಎನರ್ಜಿ ಜೊತೆಗೂಡಿ ಬ್ಯಾಟರಿ ಸ್ವಾಪಿಂಗ್ ಮೂಲಸೌಕರ್ಯ ಹಾಗೂ ಕೈಗೆಟುಕುವ ಇವಿ ಸೌಲಭ್ಯಗಳನ್ನು ವಿಸ್ತರಿಸಿದೆ. ಯುಮಾ ಎನರ್ಜಿ ಜೊತೆಗಿನ ಪಾಲುದಾರಿಕೆಯಡಿ, ಇನ್‌ಸ್ಟಾಮಾರ್ಟ್ ತನ್ನ ಪಿಒಡಿ ಅಥವಾ ಡಾರ್ಕ್ ಸ್ಟೋರ್‌ಗಳಲ್ಲಿ ಬ್ಯಾಟರಿ ಸ್ವಾಪಿಂಗ್ ಸ್ಟೇಷನ್‌ಗಳಿಗೆ ಸ್ಥಳಾವಕಾಶ ಒದಗಿಸುತ್ತಿದೆ. ಈ ತಿಂಗಳ ಆರಂಭದಲ್ಲಿ ಮೊದಲ ಸ್ವಾಪಿಂಗ್ ಸ್ಟೇಷನ್‌ನ್ನು ಇನ್‌ಸ್ಟಾಮಾರ್ಟ್ ಪಿಒಡಿಯಲ್ಲಿ ಆರಂಭಿಸಲಾಗಿದೆ. ಯುಮಾ ಎನರ್ಜಿ ಈಗಾಗಲೇ 2,000ಕ್ಕೂ ಹೆಚ್ಚು ಬ್ಯಾಟರಿ ಸ್ವಾಪಿಂಗ್ ಘಟಕಗಳನ್ನು […]

ಬರ ನಿರ್ವಹಣೆಗೆ ಮೊದಲು SDRF ನಿಧಿ ಬಿಡುಗಡೆ ಮಾಡಲಿ ನೋಡೋಣ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರು: “ಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ. ಹಾಗಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಮೊದಲು SDRF ನಿಧಿ ಬಿಡುಗಡೆ ಮಾಡಲಿ ನೋಡೋಣ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡುತ್ತ, ರಾಜ್ಯ ಸರ್ಕಾರ ಮೊದಲು SDRF ಫಂಡ್ ಬಿಡುಗಡೆ ಮಾಡಿ ಬಳಿಕ NDRF ನಿಧಿಗೆ ಕೇಂದ್ರವನ್ನು ಕೇಳಲಿ ಎಂದರು. ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರದಲ್ಲಿ SDRF ಫಂಡ್ ನೀಡಿ ಆಮೇಲೆ ಕೇಂದ್ರವನ್ನು ಕೇಳುತ್ತಿದ್ದರು. ಮುಖ್ಯಮಂತ್ರಿ ಶಿವಕುಮಾರ್ […]

ಪೌರಕಾರ್ಮಿಕರ ಭತ್ಯೆ ಹೆಚ್ಚಳ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಸಿ ಶೀಘ್ರವೇ ಆದೇಶ: ಸಿಎಂ ಡಿ ಕೆ ಶಿವಕುಮಾರ್ 

ಬೆಂಗಳೂರು : “ಶ್ರಮದಲ್ಲೇ ಶಿವನನ್ನು ಕಾಣುವ ನಿತ್ಯ ನೈರ್ಮಲ್ಯಗಾರರು ಪೌರ ಕಾರ್ಮಿಕರು. ಇವರು ನಿಜವಾದ ಕರ್ಮಯೋಗಿ, ಕಾಯಕಜೀವಿಗಳು, ಸ್ವಚ್ಛತೆ ಕ್ರಾಂತಿಯ ಸರದಾರರು. ಪೌರಕಾರ್ಮಿಕರ ಭತ್ಯೆ ಏರಿಕೆ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಕೆ ಮಾಡಿ ಸಧ್ಯದಲ್ಲೇ ಆದೇಶ ಹೋರಡಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. “ನಿಮ್ಮೆಲ್ಲರ ಬದುಕಿನಲ್ಲಿ ನೀವು ಯಾವತ್ತಿಗೂ ಕೀಳರಿಮೆಯಿಂದ […]

ರಾಜ್ಯದಲ್ಲಿ ಶಿಕ್ಷಕರನ್ನು ಅನ್ಯಕಾರ್ಯಗಳಿಗೆ ಬಳಕೆ ತಡೆಗೆ ಮಸೂದೆ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ  ಪರಿಷ್ಕರಣೆ (SIR) ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಕಾರ್ಯ ವಿಳಂಬವಾಗುತ್ತಲೇ ಇದ್ದು, ಶಾಲೆಗಳಲ್ಲಿ ಸರಿಯಾಗಿ ಪಾಠ ನಡೆಯುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಎಸ್‌ಐಆರ್‌ ಸೇರಿದಂತೆ   ಇತರ ಸರ್ವೇ ಕಾರ್ಯಗಳಿಂದ ಹೊರಗಿಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಒತ್ತಾಯಿಸಿದರು. ಬೆಂಗಳೂರಿನ ಗೃಹ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಮ್ಮ ಶಿಕ್ಷಕರನ್ನು ಎಸ್‌ಐಆರ್‌ ಪ್ರಕ್ರಿಯೆಯಿಂದ […]

ಬಾಲಿವುಡ್ ಖ್ಯಾತ ನಟ ಮುಷ್ತಾಕ್ ಖಾನ್ ವಿಧಿವಶ

ಮುಂಬೈ: ‘ವೆಲ್ಕಮ್’ ಮತ್ತು ‘ಗದರ್’ ಸೇರಿದಂತೆ ಹಲವು ಜನಪ್ರಿಯ ಹಿಂದಿ ಚಿತ್ರಗಳಲ್ಲಿ ತಮ್ಮ ಅದ್ಭುತ ಹಾಸ್ಯ ಹಾಗೂ ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಬಾಲಿವುಡ್‌ನ ಹಿರಿಯ ನಟ ಮುಷ್ತಾಕ್ ಖಾನ್ (56) ಗುರುವಾರ ಸಂಜೆ ನಿಧನರಾಗಿದ್ದಾರೆ. ಕಳೆದ ಕೆಲ ಸಮಯದಿಂದ ಯಕೃತ್ತಿನ ಕ್ಯಾನ್ಸರ್‌ನಿಂದ (Liver Cancer) ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಏಕಾಏಕಿ ವಿಷಮಿಸಿದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 24ರ ಗುರುವಾರ ಬೆಳಗ್ಗೆ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಮುಂದುವರಿದಿತ್ತಾದರೂ, ಚಿಕಿತ್ಸೆ […]

ಆರ್ಥಿಕ ಇಲಾಖೆಯು ಹಣಕಾಸಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ: ಡಿಸಿಎಂ ಡಾ.ಜಿ ಪರಮೇಶ್ವರ್

ಬೆಂಗಳೂರು : ಆರ್ಥಿಕ ಇಲಾಖೆಯು ಹಣಕಾಸಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ಮತ್ತು ಎಚ್ಚರಿಕೆಗಳನ್ನು ನೀಡುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ದಿವಾಳಿಯಾಗಿದೆ ಅಥವಾ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು. ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸುವ ವೇಳೆ ಸರ್ಕಾರ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷದವರ ಸುಳ್ಳಾರೋಪದ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ […]

ರಾಜ್ಯದ ನೇಕಾರರ ಆರ್ಥಿಕ ಸಾಮಾಜಿಕ ಭದ್ರತೆಗೆ, ಸ್ಥಿರ ಮಾರುಕಟ್ಟೆ ಕಲ್ಪಿಸಲು ಸರ್ಕಾರ ಬದ್ಧ: ಸಚಿವ ರುದ್ರಪ್ಪ ಲಮಾಣಿ

ಬೆಂಗಳೂರು : ನೇಕಾರರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಸಂವಾದದಲ್ಲಿ ವ್ಯಕ್ತವಾದ ಬೇಡಿಕೆಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದರು. ವಿಕಾಸಸೌಧದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಆಯೋಜಿಸಿದ್ದ *ನೇಕಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ* ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೇಕಾರರು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳ ಅಹವಾಲು […]

ಪತ್ನಿಯ ಶೀಲ ಶಂಕಿಸಿ ಬರ್ಬರ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಶಿವಮೊಗ್ಗ ನ್ಯಾಯಾಲಯ

ಶಿವಮೊಗ್ಗ : ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 2,10,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಶಿವಮೊಗ್ಗದ ಟಿಪ್ಪು ನಗರ 6ನೇ ಕ್ರಾಸ್ ನಿವಾಸಿ ಅಬ್ದುಲ್ ಶೋಹೇಬ್ ಉರ್ಫ್ ಬಿಡಿ ಶಿಕ್ಷೆಗೆ ಗುರಿಯಾದ ಆರೋಪಿ. ಆರೋಪಿ ಅಬ್ದುಲ್ ಶೋಹೇಬ್ ತಾನು ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಕೌಸರ್ ಫಿಸಾಳ ಚಾರಿತ್ರ್ಯದ ಬಗ್ಗೆ ಅನುಮಾನಪಟ್ಟು, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು […]

ಪಿಕಲ್‌ಬಾಲ್ ಲೀಗ್ ಐಕಾನ್ ಆಟಗಾರರ ಪಟ್ಟಿ ಪ್ರಕಟ: ಅಕ್ಟೋಬರ್‌ನಲ್ಲಿ ಹೈವೋಲ್ಟೇಜ್ ಪಂದ್ಯಗಳು

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿರುವ ಪಿಕಲ್‌ಬಾಲ್ ಕ್ರೀಡೆಗೆ ಇದೀಗ ವೃತ್ತಿಪರ ಮೆರುಗು ಸಿಗಲಿದ್ದು, ಬಹುನಿರೀಕ್ಷಿತ ‘ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್’ (KPPL) ನ ಚೊಚ್ಚಲ ಆವೃತ್ತಿಯ ಪಂದ್ಯಾವಳಿಗೆ ಕೌಂಟ್‌ಡೌನ್‌ ಪ್ರಾರಂಭವಾಗಿದೆ. ಇತ್ತೀಚೆಗೆ ಬೆಂಗಳೂರಿನ ಇ-ಝೋನ್‌ನಲ್ಲಿ ಆಯೋಜಿಸಲಾಗಿದ್ದ ಆಟಗಾರರ ಹರಾಜು ಹಾಗೂ ಆಯ್ಕೆ ಪ್ರಕ್ರಿಯೆ (KPPL Draft) ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ಲೀಗ್‌ನ ಏಳು ಪ್ರಮುಖ ಫ್ರಾಂಚೈಸಿಗಳು ತಮ್ಮ ಬಲವಾದ ತಂಡಗಳನ್ನು ಸಜ್ಜುಗೊಳಿಸಿವೆ. ತೀವ್ರ ಕುತೂಹಲ ಮೂಡಿಸಿದ ಡ್ರಾಫ್ಟ್ ಪ್ರಕ್ರಿಯೆ: ಸುಮಾರು ಎರಡು ಗಂಟೆಗಳ ಕಾಲ […]