ರಾಷ್ಟ್ರಧ್ವಜದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು: ಕೆ ಎಸ್ ಜಯಶಂಕರ್

ಶ್ರೀರಂಗಪಟ್ಟಣ- ನಮ್ಮ ರಾಷ್ಟ್ರಧ್ವಜ ತ್ರಿರಂಗದಲ್ಲಿ ಕೇಸರಿ ಬಣ್ಣ – ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಗಡಿಯಲ್ಲಿ ನಿಂತಿರುವ ಯೋಧರ ತ್ಯಾಗ, ಶೌರ್ಯವನ್ನು ನೆನಪಿಸುತ್ತದೆ. ಬಿಳಿ ಬಣ್ಣ- ಸತ್ಯ, ಶಾಂತಿ, ಮತ್ತು ಶುದ್ಧತೆಯ ಸಂಕೇತವಾಗಿದೆ ಹಸಿರು ಬಣ್ಣ – ನಮ್ಮ ರೈತರ ಪರಿಶ್ರಮ, ಭೂಮಿಯ ಫಲವತ್ತತೆ ಮತ್ತು ಪ್ರಗತಿಯ ಸಂಕೇತವಾಗಿದೆ ಎಂದು ಎಂದು ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.

ಪಾಂಡವಪುರ ತಾಲೂಕು ಹುಲಿಕೆರೆ ಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಮರ್ಪಣಾ ಟ್ರಸ್ಟ್ ಆಯೋಜಿಸಿದ್ದರಾಷ್ಟ್ರಿಯ ಧ್ವಜ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧ್ಯದಲ್ಲಿರುವ 24 ಆರುಗಳ ಅಶೋಕ ಚಕ್ರ – ಇದು ನಮಗೆ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡಿ, ಸಂವಿಧಾನದ ಆಶಯದಂತೆ ದೇಶವನ್ನು ಮುನ್ನಡೆಸು ಎಂದು ಕರೆಯುತ್ತದೆ ಎಂದರು.

ನಮ್ಮ ಶಾಲೆ ಈ ಧ್ವಜದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಶಿಸ್ತು, ಪ್ರಾಮಾಣಿಕತೆ, ದೇಶಭಕ್ತಿ – ಇವೇ ನಿಜವಾದ ಗೌರವ. ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆಯಲ್ಲಿ ಧ್ವಜಕ್ಕೆ ಗೌರವ ಸಲ್ಲಿಸಿ, ರಾಷ್ಟ್ರಗೀತೆ ಹಾಡುವಾಗ ಎದ್ದು ನಿಂತು ಗೌರವ ತೋರಿಸುವುದು ನಮ್ಮೆಲ್ಲರ ಕರ್ತವ್ಯ. ಎಂದು ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್ ಹೇಳಿದ್ದಾರೆ.

“ಕೇಸರಿ, ಬಿಳಿ, ಹಸಿರು ಮತ್ತು ನಡುವಿನ ಅಶೋಕ ಚಕ್ರ ನಮ್ಮ ಏಕತೆ ಮತ್ತು ತ್ಯಾಗದ ಸಂಕೇತ. ಈ ಧ್ವಜಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ನಾವು ಸ್ಮರಿಸಬೇಕು. ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ದೇಶ ಕಟ್ಟುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು” ಎಂದು ಕರೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಸಿ ಪಿ ನಾಗರಾಜ್ ಮಾತನಾಡಿ,ನಮ್ಮ ಶಾಲೆ ಈ ಧ್ವಜದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಶಿಸ್ತು, ಪ್ರಾಮಾಣಿಕತೆ, ದೇಶಭಕ್ತಿ ಇವೇ ನಿಜವಾದ ಗೌರವ. ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆಯಲ್ಲಿ ಧ್ವಜಕ್ಕೆ ಗೌರವ ಸಲ್ಲಿಸಿ, ರಾಷ್ಟ್ರಗೀತೆ ಹಾಡುವಾಗ ಎದ್ದು ನಿಂತು ಗೌರವ ತೋರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಇಂದಿನ ದಿನ ನಾವು ಪ್ರತಿಜ್ಞೆ ಮಾಡೋಣ. ಓದಿನಲ್ಲಿ, ಆಟದಲ್ಲಿ, ನಡತೆಯಲ್ಲಿ ನಾವು ಉತ್ತಮ ಪ್ರಜೆಗಳಾಗಿ ನಮ್ಮ ದೇಶಕ್ಕೆ ಕೀರ್ತಿ ತರೋಣ. ಶಿಕ್ಷಕರು ಕೊಡುವ ಜ್ಞಾನವನ್ನು ಸರಿಯಾಗಿ ಬಳಸಿ, ಮುಂದೆ ದೊಡ್ಡವರಾಗಿ ಈ ದೇಶವನ್ನು ಕಟ್ಟೋಣ ಎಂದು ಹೇಳಿದರು. ಶಾಲೆಯ ಸಹ ಶಿಕ್ಷಕ ರಾಮಕೃಷ್ಣ ಮಕ್ಕಳಿಗೆ ರಾಷ್ಟ್ರಿಯ ಧ್ವಜ ದಿನದ ಜಯಘೋಷ ಹೇಳಿಕೊಟ್ಟರು.ರಾಷ್ಟ್ರಿಯ ಧ್ವಜದ ಮಹತ್ವವನ್ನು ಸಾರಿದರು.

Share it :

Leave a Reply

Your email address will not be published. Required fields are marked *