ಓದುಗರ ಗಮನಕ್ಕೆ : ದೇಶಾದ್ಯಂತ ಟೆಲಿಗ್ರಾಂ ಆಪ್‌ ತಾತ್ಕಾಲಿಕ ನಿಷೇಧ, ಕಾರಣ ಇಲ್ಲಿದೆ ನೋಡಿ

ನವದೆಹಲಿ : ಇಂದು, ದೇಶಾದ್ಯಂತ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಮೇಲೆ ಅಧಿಕೃತವಾಗಿ ನಿಷೇಧಿಸಲಾಗಿದೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲಿ, ವಂಚನೆ ಜಾಲಗಳಿಗೆ ಬ್ರೇಕ್ ಹಾಕಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೇರ ಶಿಫಾರಸ್ಸಿ ನಂತರ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಟೆಲಿಗ್ರಾಂ ಆ್ಯಪ್‌ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಜೂನ್ 21 ರಂದು ನಡೆಯಲಿರುವ NEET-UG 2026 ಮರುಪರೀಕ್ಷೆಯಲ್ಲಿ ಪೇಪರ್ ಸೋರಿಕೆ ಮತ್ತು ವಂಚನೆ ನಿಲ್ಲಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ನಿಷೇಧಕ್ಕೆ ಕಾರಣ ಮತ್ತು ಪ್ರಮುಖ ವಿವರಗಳು: ಹಲವು ಜಾಲತಾಣ ವಂಚಕ ಗುಂಪುಗಳು ಟೆಲಿಗ್ರಾಂ ಮೂಲಕ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ನಕಲಿ ಪೇಪರ್‌ಗಳನ್ನು ಮಾರಾಟ ಮಾಡಿ ಹಣ ಲೂಟಿ ಮಾಡಲು ಪ್ರಯತ್ನಿಸುತ್ತಿದ್ದವು ಇದನ್ನು ಗಮನಿಸಿ ಕೇಂದ್ರ ಸರ್ಕಾರ ಮಹತ್ತರ ನಿರ್ಧಾರ ತೆಗೆದುಕೊಂಡಿದೆ. ಹೌದು ಜಾಲತಾಣ ವಂಚಕ ಗುಂಪುಗಳನ್ನು ತಡೆಯಲು ಐಟಿ ಕಾಯ್ದೆ 2000 ರ ಸೆಕ್ಷನ್ 69A ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ.

ಸಮಯ: ಭಾರತದಲ್ಲಿ ಟೆಲಿಗ್ರಾಂ ಸೇವೆಯನ್ನು ಜೂನ್ 22, 2026 ರವರೆಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಮೆಸೇಜ್ ಎಡಿಟಿಂಗ್: ಪರೀಕ್ಷಾ ಸಮಯದಲ್ಲಿ ಹಳೆಯ ಸಂದೇಶಗಳನ್ನು ತಿರುಚಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು, ಟೆಲಿಗ್ರಾಂ ಆಯಪ್‌ನಲ್ಲಿ ಜೂನ್ 30 ರವರೆಗೆ ಮೆಸೇಜ್ ಎಡಿಟ್ ಮಾಡುವ ಆಯ್ಕೆಯನ್ನು ಸಹ ನಿಷ್ಕ್ರಿಯಗೊಳಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ ಬಂದಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others