ಕೈ ಪಕ್ಷದ ವಿರುದ್ಧ ಡಿಎಂಕೆ ಸಿಡಿಮಿಡಿ, ರಾಹುಲ್ ಗಾಂಧಿ ಸಮಯ ಸಾಧಕನಾ?

ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಗೆದ್ದ ನಂತರ ಕೈ ಪಕ್ಷ ಡಿಎಂಕೆಯನ್ನು ಬಿಟ್ಟು ಟಿವಿಕೆ ಸರ್ಕಾರವನ್ನು ಸೇರಿದೆ ಈ ಕಾರಣಕ್ಕೆ ಡಿಎಂಕೆ ಪಕ್ಷವು ರಾಹುಲ್ ಗಾಂಧಿ ಅವರ ರಾಜಕೀಯ ಅಪ್ರಬದ್ಧತೆಯನ್ನು ಪ್ರಶ್ನೆಮಾಡಿದೆ.

ಡಿಎಂಕೆ, ರಾಹುಲ್ ಗಾಂಧಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು. ಡಿಎಂಕೆಯ ಐಟಿ ವಿಭಾಗವು ರಾಹುಲ್ ಗಾಂಧಿಯವರನ್ನು ಬಿಗ್ ಜೋಕ್ ಎಂದು ಕರೆದಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಮೈತ್ರಿಕೂಟದ ಭಾಗವಾಗಿ ಐದು ಸ್ಥಾನ ಗೆದ್ದಿತ್ತು. ಚುನಾವಣೆ ಮುಗಿದ ಬೆನ್ನಲ್ಲೇ ಕೈ ಪಕ್ಷ ತನ್ನ ಹಳೆಯ ಗೆಳೆತನವನ್ನ ಕೈಬಿಟ್ಟು, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿ, ಕೈ ಮಿಲಾಯಿಸಿದೆ.

ಕಾಂಗ್ರೆಸ್​ನ ರಾಜಕೀಯ ಬದಲಾವಣೆ ಕಂಡ ಡಿಎಂಕೆ ಪಕ್ಷ ಬೇಸರ ವ್ಯಕ್ತಪಡಿಸಿದೆ. ನೊಂದ ಮನಸ್ಥಿತಿಯಲ್ಲಿರುವ ಡಿಎಂಕೆ ಪಕ್ಷ ಕೈ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ. ನಿಮ್ಮನ್ನು ಹೆಗಲ ಮೇಲೆ ಹೊತ್ತು ಮೆರೆಸಿದ್ದಕ್ಕೆ ಒಳ್ಳೆಯ ಉಡುಗೊರೆ ಕೊಟ್ಟಿದ್ದೀರಿ, ಕೈ ಪಕ್ಷವು ತನ್ನ ರಾಜಕೀಯ ಉಳುವಿಗಾಗಿ ಹೋರಾಡುತ್ತಿದ್ದಾಗ ನಾವು ಅವರಿಗೆ ನಮ್ಮ ಹೆಗಲು ಕೊಟ್ಟಿದ್ದೇವೆ ಆದರೆ ಇದೀಗ ನಮ್ಮನ್ನು ಮರೆತು ಮತ್ತೊಬ್ಬರಿಗೆ ಬೆನ್ನುಗಾವಲಾಗಿದ್ದಾರೆ. ಇಲ್ಲಿ ಗೊತ್ತಾಗುತ್ತದೆ ಕೈ ಪಕ್ಷ ತನ್ನ ಲಾಭವನ್ನು ಬಯಸುತ್ತದೆ ಎಂದು, ಲಾಭಕ್ಕಾಗಿ ನಮಗೆ ಮೋಸ ಮಾಡಿ ಬೇರೆ ಪಕ್ಷಕ್ಕೆ ಜಿಗಿದಿದ್ದಾರೆ ಎಂದು ಟಿಎಂಕೆ ವಾಗ್ದಾಳಿ ನಡೆಸಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post