ಬಾಸ್ ಸಿನೆಮಾ ಇನ್ನೇನು ಬಿಡುಗಡೆಯಾಗತ್ತದೆ ಎಂದು ಕಾಯುವ ದರ್ಶನ್ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ . ಕಾರಣ ಈ ಚಿತ್ರ ಬಿಡುಗಡೆಯಾಗಬಾರದೆಂದು ವಿಜಯಲಕ್ಷ್ಮೀ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರ ತಿಳಿದ ಹಿನ್ನಲೆ, ಬಾಸ್ ಚಿತ್ರದ ನಿರ್ದೇಶಕ ಲವ ಮನವಿ ಮಾಡಿಕೊಂಡಿದ್ದಾರೆ.
ಬಾಸ್’ ಸಿನಿಮಾ ರಿಲಿಸ್ ಗೆ ವಿಜಯಲಕ್ಷ್ಮೀ ದರ್ಶನ್ ಅಡ್ಡಗಾಲು ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡದಂತೆ ಮೊರೆ ಹೋಗಿದ್ದಾರೆ. ಈ ವಿಷಯದಲ್ಲಿ ಯಾವುದೇ ಆದೇಶ ನೀಡಿಲ್ಲ.
ಆದರೆ, ಸದ್ಯದ ಪರಿಸ್ಥಿತಿ ನೋಡಿ ಹಂಚಿಕೆದಾರರು, ಥಿಯೇಟರ್ ಈ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ನಿರ್ದೇಶಕ ಲವ ಮಾತನಾಡಿದ್ದಾರೆ. ‘ದಯವಿಟ್ಟು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನೀವು ಅನೇಕ ಯುವಕರಿಗೆ ಬೆಂಬಲ ನೀಡಿದ್ದೀರಾ. ಅದೇ ರೀತಿ ನಮಗೆ ಬೆಂಬಲ ಕೊಡಿ’ ಎಂದು ಕೇಳಿದ್ದಾರೆ.





