ವಯಸ್ಸು ಹೆಣ್ಣಿಗೆ ಮಾತ್ರನಾ? ಗಂಡಿಗೆ ವಯಸ್ಸೇ ಆಗಲ್ವಾ? ನೈಜ್ಯ ಕಾರಣ ಇಲ್ಲಿದೆ ನೋಡಿ..

ಸಮಾನತೆ ಬಗ್ಗೆ ಸರಳವಾಗಿಯೇ ಕಂಡ ಕಂಡವರ ಮುಂದೆ ಸಾರುತ್ತಿದ್ದು, ಇದರ ಬಗ್ಗೆ ಪ್ರಚಾರವೂ ಭರ್ಜರಿಯಾಗಿ ಮಾಡುತ್ತೇವೆ. ಆದರೇ, ನಿಜವಾಗಿಯೂ ನಮ್ಮಲ್ಲಿ ಸಮಾನತೆ ನೆಲೆಸಿದೆಯೇ? ನಾವೆಲ್ಲಾ ಒಂದೇ ಎನ್ನುವ ರೀತಿಯಲ್ಲಿ ಬದುಕುತ್ತಿದ್ದಿವಾ? ಇಲ್ಲವೇ ಇಲ್ಲ ಈ ಸಮಾನತೆ ಮಾತಿಗೆ ಮಾತ್ರ ಜೀವಂತವಿದೆ ಆದರೆ, ಇದು ಲೈವ್​ಲ್ಲಿ ಯಾವಾಗಲೂ ಮರೆಯಾಗಿರುತ್ತದೆ.

ಜಾತಿ ಹೆಸರಿನಲ್ಲಿ,ಸಿರಿತನ-ಬಡತನ ಕೊನೆಗೆ ಬಟ್ಟೆಯಲ್ಲಿಯೂ ಭೇದ-ಭಾವ ಮಾಡುತ್ತೇವೆ. ಈ ವಿಚಾರವನ್ನೆಲ್ಲಾ ಪಕ್ಕಕ್ಕೆ ಸರಿಸೋಣ ಸದ್ಯಕ್ಕೆ ನಮ್ಮ ಗಮನ ಸಿನಿ ರಂಗದತ್ತವಿರಲಿ, ಹೌದು ಸಿನಿರಂಗದಲ್ಲಿ ಕೆಲ ವಿಚಾರಗಳು ನಮ್ಮ ಕಣ್ಣು ಮುಂದೆ ಪಾಸ್​ ಆಗುತ್ತಿದ್ದು, ವಿಷಯ ಗೊತ್ತಿದ್ದರೂ ಪುರುಷ ಸಮಾಜದಲ್ಲಿ ಇದೆಲ್ಲಾ ಸರ್ವೆ ಸಮಾನ್ಯ ಎಂದು ಸುಮ್ನೆಯಾಗುತ್ತೇವೆ. ಅಯ್ಯೋ ಏನಪ್ಪಾ ಈ ಟಾಪಿಕ್​ ಅಂತೀರಾ ಇಲ್ಲಿದೆ ನೋಡಿ ಪರಿಪೂರ್ಣ ಮಾಹಿತಿ

ಹೌದು ಚಿತ್ರ ರಂಗದಲ್ಲಿ ನಾಯಕಿಯರಿಗೆ 30ರ ಮೇಲೆ ವಯಸ್ಸು ಆದರೆ ಸಾಕು ಅವರಿಗೆ ಅವಕಾಶಗಳು ಸದ್ದೆ ಇಲ್ಲದೆ ಕಣ್ಮರೆಯಾಗುತ್ತವೆ, ಇಲ್ಲವೇ ಆಂಟಿ ಪಾತ್ರಕ್ಕೆ, ಒಂದೊಮ್ಮೆ ಅಜ್ಜಿಯ ಪಾತ್ರಕ್ಕೂ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಾರೆ. ಆದರೇ ಇದೇ ವಿಷಯದ ಬಗ್ಗೆ ಪುರುಷರನ್ನು ತೆಗೆದುಕೊಳ್ಳಣ, ಅವರಿಗೆ 70 ಆದರೂ ನಾಯಕ ಪಾತ್ರದಲ್ಲಿ ಕಾರ್ಯನಿರತರಾಗಿರುತ್ತಾರೆ. ಚಿತ್ರರಂಗದಲ್ಲಿ ಮಿರಿ ಮಿರಿ ಮಿಂಚುತ್ತಾರೆ. ಅವರು ಒಂದೇ ಒಂದು ಸಿನಿಮಾದಲ್ಲಿ ಫೇಮಸ್​​ ಆದ್ರೆ ಸಾಕು ಅವಕಾಶಗಳು ಹಾರಿಕೊಂಡು ಬರುತ್ತವೆ.

ಸೌಂದರ್ಯವಿದ್ದರೆ ಮಾತ್ರ ಪ್ರತಿಯೊಂದು ಕ್ಷೇತ್ರದಲ್ಲಿ ಎಂಟ್ರಿ, ಆ ಬ್ಯೂಟಿ ಮಾಸಿಹೋಗುತ್ತದೆ ಎನ್ನುವುದು ಗೊತ್ತಾದರೆ, ಸಾಕು ಸೌಂಡ್​ ಮಾಡದೆ ಅವರನ್ನು ಸೈಡ್​ಗೆ ಸರಿಸುತ್ತಾರೆ. 30ರ ಮಹಿಳೆಗೆ ಸಿಗದ ಭಾಗ್ಯ 60ರ ಅಜ್ಜರಿಗೆ ದೊರಕುತ್ತದೆ. ವಾಸ್ತವ ಒಪ್ಪಿಕೊಳ್ಳುವದಕ್ಕೆ ಕೆಲವರಿಗೆ ಕಷ್ಟವಾಗಬಹುದಿದ್ದು, ಇನ್ನು ಕೆಲವರಿಗೆ ವಾಕರಿಕೆಯೂ ಬರಬಹುದು. ಇದೆಲ್ಲಾ ಕಂಡ ನಾವು ಹೆಣ್ಣ ದೇವರು, ತಾಯಿಗಿಂತ ಮಿಗಿಲಿಲ್ಲ, ಹೆಣ್ಣು ಸೃಷ್ಟಿಯ ಮೂಲ ಎಂದು ಹೇಳುತ್ತೇವೆ. ಇದೆಲ್ಲಾ ಬದಲಾಗಬೇಕಿದೆ ಅಲ್ಲವೇ ? ಮತ್ತೊಂದು ಕಡೆ ವೃತ್ತಿ ಜೀವನ ನೋಡುವುದಾದರೇ, ಅಲ್ಲಿಯೂ ಅತೀ ಹೆಚ್ಚು ವಯಸ್ಸಾದ ಪುರುಷರು ಇರುತ್ತಾರೆ. ಮಹಿಳೆಯರ ಸಂಖ್ಯೆ ತೀರಾ ಬೆರೆಳೆಣಿಕೆಯಷ್ಟು ಇದ್ದು, ಇತ್ತ ರಾಜಕೀಯ ಕ್ಷೇತ್ರ ನೋಡಿದ್ರೆ ಅಲ್ಲಿಯೂ ನಮ್ಮ 60-70ರ ಯುವ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿಗೆ ಕುಕ್ಕುತ್ತಾರೆ.

ಒಂದು ಕಡೆ 25-30ರ ಅಜ್ಜಂದಿರು ಕೆಲಸಕ್ಕಾಗಿ ,ತಮ್ಮ ಓದಿರುವ ಮಾರ್ಸ್​ ಕಾರ್ಡ್​ ತೆಗೆದುಕೊಂಡು ಬೀದಿ-ಬೀದಿ ಸುತ್ತುತ್ತಾ ಇರುತ್ತಾರೆ. ವೃತ್ತಿಯಲ್ಲಿ ಯುವಕರಿಗೂ ಅವಕಾಶ ಕಡಿಮೆ ಇದ್ದು, ಸ್ಪಲ್ಪ ವಯಸ್ಸಾದ ಮಹಿಳೆಯರಿಗೂ ಅನುಮತಿ ಇರುವುದಿಲ್ಲ ಹಾಗಾದ್ರೆ ಅವಕಾಶ ಇರುವುದು ಯಾರಿಗೆ? ಯಂಗ್​​ ಯುವಕಿಯರಿಗೆ ಮತ್ತು 50-60-70 ವಯಸ್ಸಿನ ಯುವಕರಿಗೆ ಮಾತ್ರ, ಈ ಸತ್ಯ ಒಪ್ಪಿಕೊಳ್ಳುವುದಕ್ಕೆ ವಿಷ ಎನಿಸಬಹುದು ಆದ್ರೆ ಇದೆ ಅಮೃತವಾಗಿದೆ ಎನ್ನುವುದು ನಾವೆಲ್ಲ ಮರೆಯಬಾರದು ಅಲ್ಲವೇ? ಮೊದಲು ಸಮಾನತೆಗಾಗಿ ನಾವೆಲ್ಲಾ ಪ್ರಶ್ನೆ ಮಾಡಬೇಕಿದ್ದು, ಸತ್ಯವನ್ನು ಒಪ್ಪಿಕೊಳ್ಳಬೇಕಿದೆ. ಕಾರಣ ಅವಕಾಶಗಳಿಂದ ಯಾರ ದೂರ ಸರಿಯಬಾರದು ಎಲ್ಲರಿಗೂ ದೊರಬೇಕು ಎನ್ನುವುದು ಈ ಲೇಖನದ ಉದ್ದೇಶವಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post