ಭೂಮಿ ಕೊಡಿ ಅಂತ ರೈತರಿಗೆ ಬಲವಂತ ಮಾಡುವಂತಿಲ್ಲ : ಪ್ರಿಯಾಂಕ್ ಖರ್ಗೆ

Priyank Kharge

ಬೆಂಗಳೂರು: ಭೂಮಿ ಕೊಡಿ ಅಂತ ರೈತರಿಗೆ ಯಾವತ್ತೂ ಬಲವಂತ ಮಾಡುವಂತಿಲ್ಲ. ನಾವು ಆ ರೀತಿ ಬಲವಂತವಾಗಿ ಭೂಮಿಯನ್ನು ಪಡೆದಿಲ್ಲ, ಪಡೆಯುವುದು ಇಲ್ಲ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬಿಡದಿ ಟೌನ್‌ಶಿಪ್ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ರೈತರು ಸ್ವ ಇಚ್ಛೆಯಿಂದ ಎಲ್ಲಿ ಕೊಡುತ್ತಾರೆ ಅದನ್ನು ಪರಿಗಣನೆ ಮಾಡ್ತೀವಿ. ಯಾರು ಸ್ವ ಇಚ್ಛೆಯಿಂದ ಭೂಮಿ ಕೊಡುವುದಿಲ್ಲವೋ ಅಲ್ಲಿ ಯೋಜನೆ ಆಗಲ್ಲ. ಭೂಸ್ವಾಧೀನ ನಿಯಮಗಳು ಬಹಳ ಸ್ಪಷ್ಟವಾಗಿವೆ. ಯಾರು ಕೂಡ ಒತ್ತಾಯಪೂರ್ವಕವಾಗಿ ಭೂಮಿ ತೆಗೆದುಕೊಳ್ಳಲು ಆಗಲ್ಲ. 90 ರಿಂದ 95% ವಿರೋಧ ಆಗಿದ್ರೆ ಈ ನಿಯಮ ಅನ್ವಯ ಆಗುತ್ತೆ ಎಂದು ಹೇಳಿದರು.

ಕೃಷಿ ವಲಯ ಅಂತಾನೇ ಘೋಷಣೆ ಮಾಡಿದ್ದೇವೆ. ಕೆಲವರು ಇಂಡಸ್ಟ್ರಿ ಮಾಡಬೇಕು ಅಂತ ಈಗ ಬಂದಿದ್ದರು. ಅದನ್ನು ಪರಿಶೀಲನೆ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ. ದೇವನಹಳ್ಳಿ, ಚನ್ನರಾಯಪಟ್ಟಣದ ಬಳಿ ನಾವು ಭೂಸ್ವಾಧೀನ ಕೈಬಿಟ್ಟಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ನಾಳೆಯಿಂದ ಎಸ್‌ಐಆರ್ ನಡೆಯಲಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರ ಕೊಟ್ಟು ಎಸ್‌ಐಆರ್ ಮಾಡಲಿ ಎಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ನಾಳೆಯಿಂದ ಎಸ್‌ಐಆರ್ ನಡೆಯಲಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಯಾವ ಆಧಾರದಲ್ಲಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡ್ತಾರೆ? ಇದರ ಹಿಂದಿನ ತರ್ಕ ಏನು ಅಂತ ಆಯೋಗಕ್ಕೆ ಕೇಳಿದ್ದೇವೆ. ಈ ಬಗ್ಗೆ ನಾವು ಕ್ಯಾಬಿನೆಟ್‌ನಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಮುಖ್ಯ ಚುನಾವಣಾಧಿಕಾರಿಗೂ ಆಕ್ಷೇಪ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಶ್ಚಿಮ ಬಂಗಾಳದಲ್ಲಿ 89 ಲಕ್ಷ ಜನರನ್ನು ಪಟ್ಟಿಯಿಂದ ಕೈಬಿಡ್ತಾರೆ. ನ್ಯಾಯಮಂಡಳಿಯಲ್ಲಿ ಕೇಳಲು ಅವಕಾಶ ಕೊಡಲ್ಲ. ಅವಕಾಶ ಕೇಳಿದ್ರೆ ಇದು ಮಾಡಲು ಆಗಲ್ಲ, ನಾಲ್ಕು ವರ್ಷಬೇಕು ಎಂದು ನ್ಯಾಯಮಂಡಳಿಯ ಜಡ್ಜ್ ರಾಜೀನಾಮೆ ಕೊಡ್ತಾರೆ
ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಡವರ ಹಕ್ಕು ಕಿತ್ತುಕೊಳ್ಳಲಾಗಿದೆ. ನಾವು ಜಾಗೃತಿ ಅಭಿಯಾನ ಮಾಡ್ತಿದ್ದೇವೆ. ಕಾನೂನಾತ್ಮಕವಾಗಿ ಇದನ್ನು ಪರಿಗಣಿಸಬೇಕಾಗುತ್ತೆ ಎಂದು ತಿಳಿಸಿದರು.

ನಾವು ಎಸ್‌ಐಆರ್ ಮಾಡಬೇಡಿ ಎಂದು ಹೇಳಿಲ್ಲ. ಉತ್ತಮವಾದ ವೋಟರ್ ಲಿಸ್ಟ್ ಕೊಡಲಿ. ಪಾರದರ್ಶಕವಾಗಿ ಮಾಡಲಿ
ಗೊಂದಲ ಇದ್ದರೆ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲು ಅವಕಾಶ ಮಾಡಿಕೊಡಬೇಕು. ದಾಖಲೆಗಳಲ್ಲಿ ಸ್ಪೆಲ್ಲಿಂಗ್ ತಪ್ಪಾದ ಮಾತ್ರಕ್ಕೆ ಅವರ ಹಕ್ಕು ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಕ್ಷೇಪಕ್ಕೆ ಆಯೋಗದಿಂದ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಹೇಳಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post