ಹೆಚ್‌ಡಿಕೆ ವಿಡಿಯೋ ರಿಲೀಸ್‌ ಬೆನ್ನಲ್ಲೇ ಡಿಕೆಶಿ ವಾರ್ನಿಂಗ್‌ : ಚೌಟ್ರಿಗಳಲ್ಲಿ SIR ಫಾರಂ ತುಂಬಲು ಅವಕಾಶ ಇಲ್ಲ

ಬೆಂಗಳೂರು:ಕಲ್ಯಾಣ ಮಂಟಪ ಅಥವಾ ಬೇರೆಡೆ ಕುಳಿತು ಅರ್ಜಿ ತುಂಬಲು ಯಾರಿಗೂ ಅವಕಾಶ ಇರಲ್ಲ. ರಾಮನಗರ, ಜಯನಗರ, ಕುಣಿಗಲ್, ಚಾಮರಾಜಪೇಟೆ ಎಲ್ಲಾದರೂ ಸರಿ ಮನೆಗಳಿಗೆ ಹೋಗಿ ಅರ್ಜಿ ತುಂಬಬೇಕು ಎಂದು ಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಕಲ್ಯಾಣ ಮಂಟಪಗಳಲ್ಲಿ SIR ಫಾರಂ ತುಂಬಲು ಅವಕಾಶ ಇಲ್ಲ ಎಂದು ಅವರು ಬಿಎಲ್‌ಓಗಳಿಗೆ BLO) ಎಂದರು. ವಿರೋಧ ಪಕ್ಷದವರು ಆರೋಪ ಮಾಡೋಕೆ ಇರೋದು. ನಾವು ಅಧಿಕಾರದಲ್ಲಿ ಇರೋರು, ನಮ್ಮ ಕರ್ತವ್ಯ ನಾವು ಮಾಡ್ತೀವಿ. ಪ್ರತಿಯೊಬ್ಬ ನಾಗರೀಕನಿಗೂ ಮತದಾನದ ಹಕ್ಕು ಕೊಡಬೇಕಾಗಿರೋದು ಸರ್ಕಾರದ ಕರ್ತವ್ಯ ಎಂದಿದ್ದಾರೆ.

ಆಗಸ್ಟ್ ಎರಡನೇ ವಾರದ ತನಕ ಸೆಷನ್ ಇಲ್ಲ. ಈ ಬಗ್ಗೆ ನಂತರ ತೀರ್ಮಾನ ಮಾಡಲಾಗುತ್ತದೆ. ಈಗ ಎಸ್‌ಐಆರ್ ನಡೆಯುತ್ತಿದೆ. ಆದ್ದರಿಂದ ಸೆಷನ್ ಕರೆಯಲು ಆಗಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕೆಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರು ಕಲ್ಯಾಣ ಮಂಟಪಗಳಲ್ಲಿ ಸಿಬ್ಬಂದಿ SIR ಫಾರಂ ತುಂಬುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್‌ ಕಲ್ಯಾಣ ಮಂಟಪಗಳಲ್ಲಿ SIR ಫಾರಂ ತುಂಬಲು ಅವಕಾಶ ಇಲ್ಲ. ಬಿಎಲ್ಓಗಳೇ ಅರ್ಜಿಗಳನ್ನ ಹಂಚಬೇಕು, ಅವರೇ ಮನೆಗೆ ಹೋಗಿ ಅರ್ಜಿ ಕೊಡಬೇಕು, ಅಲ್ಲಿಯೇ ತುಂಬಬೇಕು ಎಂದು ಎಚ್ಚರಿಸಿದ್ದಾರೆ

ಇನ್ನು ರೈತರ ವಿಚಾರವಾಗಿ ಮಾತನಾಡಿ, ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗ್ತಿದೆ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಹೀಗಾಗಿ ರೈತರು ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬಾರದು ಎಂದು ಕರೆ ನೀಡಿದರು.

ಬರದ ಪರಿಸ್ಥಿತಿ ಎದುರಿಸಲು ಸಚಿವರಿಗೆ 2-3 ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದ್ದು, ನಾನು 4 ವಿಭಾಗಗಳಿಗೆ ತೆರಳಿ ಪರಿಶೀಲನೆ ಮಾಡುತ್ತೇನೆ. ನೀರು ಬಿಡುವ ವಿಚಾರದಲ್ಲಿ ರೈತರು ಒತ್ತಡ ಹಾಕಬೇಡಿ. ಮುಂದಿನ ದಿನಗಳಲ್ಲಿ ಮಳೆ ಗಮನದಲ್ಲಿಟ್ಟುಕೊಂಡು ಬೆಳೆ ಹಾಕಿ. ಮಳೆ ಬಂದರೆ ನಾವು ನೀರನ್ನು ಒದಗಿಸಿಕೊಡುತ್ತೇವೆ ಎಂದು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತುಂಗಭದ್ರಾ ಘಟ್ಟಪ್ರಭಾ, ಮಲಪ್ರಭಾ, ನಾರಾಯಣಪುರ, ವಾಣಿವಿಲಾಸ ಅಣೆಕಟ್ಟೆಗಳ ಒಳಹರಿವಿನ ಪ್ರಮಾಣ ಶೂನ್ಯವಾಗಿದೆ ಎಂದು ತಿಳಿಸಿದರು.

ಕಾವೇರಿ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕುಸಿದಿದೆ. ಕಳೆದ ವರ್ಷ ಈ ಸಮಯದಲ್ಲಿ ಹೇಮಾವತಿಯಲ್ಲಿ 80 ಅಡಿ ನೀರು ಇತ್ತು. ಈ ವರ್ಷ 40 ಅಡಿಗೆ ಕುಸಿದಿದೆ. ಕೆಆರ್‌ಎಸ್‌ನಲ್ಲಿ 100 ಅಡಿ ಇದ್ದ ನೀರಿನ ಪ್ರಮಾಣ ಈಗ 22 ಅಡಿಯಷ್ಟಿದೆ, ಕಬಿನಿಯಲ್ಲಿ 79 ಅಡಿ ಇತ್ತು, ಈಗ 26 ಅಡಿಯಷ್ಟು ನೀರು ಇದೆ. ಈ ಅಣೆಕಟ್ಟೆಗಳಲ್ಲಿ ಒಳಹರಿವಿನ ಪ್ರಮಾಣ 20% ಗೆ ಕುಸಿದಿದೆ. ಹೀಗಾಗಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿವರಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post