ಸಲುಗೆ ಕೊಟ್ರೆ ಸರಸಕ್ಕೆ ಕರಿಯುವುದು ಸರಿಯೇ? ಅನಾವಶ್ಯಕ ಹಾಯ್‌, ಹಲೋ ಸಂದೇಶ ಯಾಕೆ? ಇದನ್ನೊಮ್ಮೆ ಓದಿ

ಹೆಣ್ಣನ್ನು ಪ್ರಕೃತಿಗೆ ಹೋಲಿಕೆ ಮಾಡುತ್ತಿದ್ದು, ಕೆಲವೊಮ್ಮೆ ದೇವರ ಸ್ಥಾನದಲ್ಲಿಯೂ ತಂದು ನಿಲ್ಲಿಸುತ್ತಾರೆ. ಈ ಸಲುಗೆ ಎನ್ನುವ ವಿಚಾರ ಈ ಲೇಖನದಲ್ಲಿ ಸ್ತ್ರೀಯರಿಗೆ ಸೇರಿದೆ. ಹೌದು ಹೆಣ್ಣು ಮಕ್ಕಳು ಗೆಳೆಯತನಕ್ಕಾಗಿ ಅತೀ ಹೆಚ್ಚಾಗಿ ಗಂಡು ಮಕ್ಕಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ ಎಲ್ಲ ವಿಷಯಗಳಲ್ಲಿ ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳಿಗೆ ಕೆಲವು ವೇಳೆ ಆಸರೆ ಆಗುವುದಿಲ್ಲ ಎನ್ನುವ ಬಲವಾದ ಮನೋಭಾವ ಹೊಂದಿರುತ್ತಾರೆ.

ಹೌದು ಕೆಲಸಕ್ಕಾಗಿ ಅಥವಾ ಯಾವುದೋ ವಿಚಾರಕ್ಕಾಗಿ ಪುರುಷ ಹತ್ತಿರ ಮಹಿಳೆಯರು ಹೆಲ್ಪ್‌ ಕೇಳುತ್ತಿದ್ದು, ಇದನ್ನೇ ಹಲವು ಯುವಕರು ದುರಪಯೋಗಪಡಿಸಿಕೊಳ್ಳುತ್ತಿದ್ದು, ಗೆಳೆಯತನದ ಹೆಸರಿನಲ್ಲಿ ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತಾರೆ.

ಇಲ್ಲಿ ಈ ವಿಚಾರ ಕೆಲ ಯುವಕರಿಗೆ ಮಾತ್ರ ಸೀಮಿತವಾಗಿದ್ದು, ಸಂದೇಶದ ಮೂಲಕ ಮೊದಲು ಸಲುಗೆ ಬೆಳಿಸಿಕೊಳ್ಳುತ್ತಾರೆ. ತದನಂತರ ಸರಸಕ್ಕೆ ಸೆರೆಯಾಗುತ್ತಾರೆ. ಹಲವು ಮಹಿಳೆಯರ ಪರಿಸ್ಥಿತಿ ಹೇಗೆ ಅಂದರೆ ಮನೆಯಲ್ಲಿ ಅರ್ಥಿಕತೆಯ ಮಟ್ಟ ಸರಿಯಾಗಿ ಇರುವುದಿಲ್ಲ. ಇದೇ ಉದ್ದೇಶಕ್ಕೆ ಕೆಲಸ ಮಾಡಲು ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಕಾಯಕಕ್ಕಾಗಿ ಕಂಡ ಕಂಡವರಲ್ಲಿ ಬೇಡಿಕೊಳ್ಳುತ್ತಾರೆ. ಆದರೂ ಈ ವಿಚಾರಕ್ಕೆ ಯಾರು ಸ್ಪಂದನೆ ನೀಡುವುದಿಲ್ಲ. ಆಗ ಇವರ ನೆನಪಿಗೆ ಬರುವುದು ಹತ್ತಿರದ ಆಪ್ತರು ಇಲ್ಲವೇ, ಸ್ಪಲ್ಪ ಪರಿಚಯಸ್ಥರು ಇವರಿಗೆ ನೇರವಾಗಿ ಸಂದೇಶ ಇಲ್ಲವೇ ಕರೆ ಮಾಡಿ, ತಮ್ಮೆಲ್ಲಾ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಮತ್ತು ಕೆಲಸಕ್ಕಾಗಿ ಕೈ ಚಾಚುತ್ತಾರೆ.

ಇತ್ತ ಆಪ್ತರು ಒಂದೊಳ್ಳೆಯ ಅವಕಾಶಕ್ಕಾಗಿ ಸಂಚು ಹಾಕುತ್ತಿದ್ದು, ಎಲ್ಲದಕ್ಕೂ ಸರಿ ಎಂದು ತಲೆದೂಗುತ್ತಾರೆ. ಕೊನೆಗೆ ಹೇಳುತ್ತಾರೆ ಖಂಡಿತಾ ನಿಮಗೆ ಕೆಲಸ ಕೊಡಿಸುತ್ತೇನೆ ಎಂದು, ಮೆಸೇಜ್‌, ಕಾಲ್‌ ಮಾಡಲು ಪ್ರಾರಂಭಿಸುತ್ತಾರೆ. ಕೆಲಸ ಬೇಕಿರುವ ಕಾರಣಕ್ಕೆ ಯುವತಿಯರು ರಿಪ್ಲೇ ಮಾಡುತ್ತಾರೆ. ನಂತರ ಈ ವಿಚಾರ ಯುವಕಿಯರಿಗೆ ಕಿರಿ ಕಿರಿಯಾಗುತ್ತದೆ ಆದರೂ ಕೆಲಸಕ್ಕಾಗಿ ಇಷ್ಟವಿಲ್ಲದೇ ಇರುವವರ ಹತ್ತಿರ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಇಲ್ಲಿ ಅವರು ಸಂದೇಶಕ್ಕೆ ಪ್ರತಿಕ್ರಿಯೆ ಕೊಡಲಿಲ್ಲ ಅಂದ್ರೆ, ಕೆಲವರು ಅವಳು ಸರಿಯಿಲ್ಲ ಎಂದು ಢಂಗುರ ಸಾರುತ್ತಾರೆ. ಇನ್ನು ಕೆಲವರು ಅಲ್ಲಿಗೆ ಅವಳ ಜತೆ ಮಾತನಾಡುವುದು ನಿಲ್ಲಿಸುತ್ತಾರೆ. ಸ್ಪಲ್ಪ ಸಂದೇಶದಲ್ಲಿ ಸದ್ರ ಕೊಟ್ಟರೆ ಸಾಕು ಏಕ ವಚನದಲ್ಲಿ ಮಾತುಗಳು ಮೂಡಿ ಬರುತ್ತದೆ.

ಇನ್ನು ಈ ಆಫೀಸ್‌, ಕೆಲ ಕಚೇರಿಗಳಲ್ಲಿಯೂ ಪುರುಷರೊಟ್ಟಿಗೆ ಯಾವುದೇ ವಿಚಾರಕ್ಕೆ ಹೆಣ್ಣು ಮಕ್ಕಳು ಸಹಾಯ ಕೇಳಿದ್ರೆ ಸಾಕು, ಅಲ್ಲಿಯೂ ಶುರು ಮಾಡಿಕೊಂಡು ಬಿಡುತ್ತಾರೆ, ಮಹಿಳೆಯರು ಇವರು ಬಯಕೆಗೆ ರಿಯಾಕ್ಟ್‌ ಮಾಡಿಲ್ಲ ಅಂದ್ರೆ, ಇದನ್ನೇ ಸಮಾಜದ ಮುಂದೆ ಹೆಣ್ಣು ಮಕ್ಕಳು ಸರಿ ಇಲ್ಲ ಎನ್ನುತ್ತಾರೆ. ಆದರೆ ಇತ್ತ ಇನ್ನು ಕೆಲ ಯುವಕಿಯರು ಹಣಕ್ಕಾಗಿ ಯುವಕರ ಹೆಣ ಹೂಡುತ್ತಾರೆ ಅಂತಹವರಿಗೆ ಈ ವಿಚಾರ ಸರಿ ಹೊಂದಬಹುದು, ಆದ್ರೆ ಮುಗ್ಧತೆಗೆ ಬೇಜಾರ್‌ ಮಾಡುವುದು ಯಾಕೆ? ಸೋಶಿಯಲ್‌ ಮೀಡಿಯಾಗಳಲ್ಲಿ ಗುರುತು ಪರಿಚಯ ಇಲ್ಲದಿದ್ದರೂ ಹಾಯ್‌ ಹಲೋ ಮೆಸೇಜ್‌ ಯಾಕೆ?

ಕೆಲ ಪರಿಸ್ಥಿತಿ ಹೇಗೆ ಅಂದ್ರೆ ಇನ್ನು ಪರಿಚಯಯವಾಗಿ ೨ ದಿನ ಆಗಿರುವುದಿಲ್ಲ ಏಕವಚನದ ಮಾತುಗಳು ಚಾಲ್ತಿಯಲ್ಲಿರುತ್ತವೆ. ಮೇಲ್ಮಾತಿಗೆ ಹೆಣ್ಣು ಅಂದ್ರೆ ಗೌರವ ಎನ್ನುತ್ತಾರೆ, ಆದ್ರೆ ಒಳ ಮನಸ್ಸು ಮಾತ್ರ ಕೊಳೆತು ನಾರುತ್ತಿರುತ್ತದೆ. ಒಂದು ಕಡೆ ಕೆಲ ಪುರುಷ ನಿಜಕ್ಕೂ ಉತ್ತಮವಾಗಿರುತ್ತಾರೆ ಆದರೇ ಅವರು ಇರುವುದು ಬೆರಳೆಣಿಕೆಯಷ್ಟು ಮಾತ್ರ. ಒಟ್ಟಿನಲ್ಲಿ ಸ್ನೇಹದ ನೆಪದಲ್ಲಿ ಸರಸ ಸರಿಯಲ್ಲ, ಇಲ್ಲಿ ಯಾರಿಗೂ ಬೇಡದ ಆಪ್ತತೆಯನ್ನು ಬೆಳೆಸಿಕೊಳ್ಳುವುದಕ್ಕೆ ಇಷ್ಟವಿರುವುದಿಲ್ಲ. ಪರಿಸ್ಥಿಗೆ ಮನಸೋತು,ದಿಕ್ಕೇ ಇಲ್ಲದೆ ಸ್ನೇಹಕ್ಕೆ ಸೋಲುತ್ತಾರೆ. ಮಾತಿನ ಆಸರೆಗಾಗಿ ಪುರುಷರತ್ತ ಹೆಜ್ಜೆ ಹಾಕುತ್ತಾರೆ. ಈ ಸಮಯದಲ್ಲಿ ಗಂಡು ಜಾತಿಯವರು ಸಮಧಾನ ಮಾಡಿ, ಅದನ್ನೇ ದುರುಪಯೋಗ ತೆಗೆದುಕೊಂಡು ಅವರ ಜೀವನಕ್ಕೆ ಮುಳ್ಳು ಆಗಬೇಡಿ.. ವ್ಯಕ್ತಿತ್ವ ತುಂಬಾ ದೊಡ್ಡದು ನಿಮ್ಮ ಹಾಯ್‌ ಹಲೋ ಮೆಸೇಜ್‌ಯಿಂದ ಅದನ್ನು ಹಾಳುಮಾಡಿಕೊಳ್ಳಬೇಡಿ. ಸ್ವಾತಂತ್ರ್ಯ ದೇಶದಲ್ಲಿ ಸಮಾನತೆಯಿಂದ ಬದುಕುವುದನ್ನು ನಾವೆಲ್ಲಾ ಅಭ್ಯಾಸ ಮಾಡಿಕೊಳ್ಳಣ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post