ಬಿಟ್ಟು ಕೊಟ್ಟವರಿಗೆ ಬಿಟ್ಟಿರುವುದು ಕಷ್ಟವೇ? ಇದು ವಿಷಕಾರಿ ಲವ್‌ ಸ್ಟೋರಿ- ಒಂದೊಮ್ಮೆ ಓದಿ

ಜೀವನದಲ್ಲಿ ಯೌವನ ಎಂಟ್ರಿಯಾಗುತ್ತಿದ್ದಂತೆ, ಮನಸ್ಸು ಹಿಡಿತಕ್ಕೆ ಸಿಗುವುದಿಲ್ಲ. ನಿಯಂತ್ರಣವಿಲ್ಲದ ಹೃದಯಕ್ಕೆ ಪ್ರೀತಿ ಎನ್ನುವ ಔಷಧಿ ಬೇಕಿರುತ್ತದೆ. ಹದಿ ಹರೆಯದಲ್ಲಿ ಪ್ರೀತಿಯಾಗುವುದು ಎಲ್ಲರಿಗೂ ಸಹಜವಾಗಿದ್ದು, ಈ ಪ್ರೀತಿಗಾಗಿ ಫ್ಯಾಮಿಲಿ ಜತೆ ಕೆಲವರು ಹೋರಾಟವೇ ಮಾಡುತ್ತಾರೆ. ಇನ್ನು ಹಲವರು ನೆನಪಿನಲ್ಲಿ ತೇಲಾಡುತ್ತಾರೆ.

ಹೀಗಿರುವಾಗ ಈ ವಿಷಕಾರಿ ಪ್ರೇಮ ಎನ್ನುವುದು ಕೊನೆಯತನಕ ಕಿರಿ-ಕಿರಿ ಮಾಡುತ್ತಲೇ ಇರುತ್ತದೆ. ಈ ಬಾಂಧವ್ಯದಲ್ಲಿ ನೆಮ್ಮದಿ ಎನ್ನುವುದು ನೆಲೆಸಿರುವುದಿಲ್ಲ. ಇಲ್ಲಿ ಹುಡುಗ ಪ್ರಾಮಾಣಿಕತೆಯಿಂದ ಇದ್ದರೆ, ಹುಡುಗಿ ಅದರ ವಿರುದ್ಧವಾಗಿರುತ್ತಾಳೆ. ಇಬ್ಬರು ಪ್ರೀತಿಸಿ ಮದುವೆಯಾಗುವುದಕ್ಕಿಂತ ಹೆಚ್ಚು ಬೇರೆ ಬೇರೆಯವರನ್ನು ಇಬ್ಬರೂ ಮದುವೆಯಾಗಿರುತ್ತಿದ್ದು, ಇವರ ನಡುವೆ ಮಾತ್ರ ಅಂತರವಿರುವುದಿಲ್ಲ.

ಇವರು ಇವರನ್ನು ಮದುವೆಯಾದವರ ಹತ್ತಿರ ಸರಿಯಾಗಿ ಸ್ಪಂದಿಸದೆ ಇರುತ್ತಾರೆ. ಅದರೆ ಹಳೆಯ ಪ್ರೀತಿಯ ಜತೆ ಅನೈತಿಕ ಹೊಂದಿ, ಮಾತನಾಡುತ್ತಲೇ ಇರುತ್ತಾರೆ. ಇವರ ಅನ್ಯೋನ್ಯತೆ ನೋಡಿದ್ರೆ ಇನ್ನು ಪ್ರೇಮ ಜೀವಂತವಿದೆ ಎಂದು ಎನಿಸುತ್ತದೆ. ಆದ್ರೆ ನೈಜ ಜೀವನದಲ್ಲಿ ಉದ್ದೇಶದ ಸಂಬಂಧವಾಗಿರುತ್ತದೆ. ಹೌದು ಯಾಕಪ್ಪಾ ಈ ವಿಚಾರ ಅಂತೀರಾ ಇಲ್ಲಿದೆ ನೋಡಿ.

ಅವರಿಬ್ಬರು ಕಾಲೇಜ್‌ ದಿನಗಳಲ್ಲಿ ಪ್ರೀತಿಗೆ ಶರಣಾದವರು ಆ ಪ್ರೇಮಕ್ಕೆ ಯಾವುದೇ ಉದ್ದೇಶವಿರುವುದಿಲ್ಲ. ಚಿಕ್ಕ ವಯಸ್ಸಿನ ಮನಸ್ಸುಗಳ ಮಿಲನವದು, ಅಲ್ಲಿ ಯಾವುದೇ ದೈಹಿಕ ಚಪಲವಿರುದಿಲ್ಲ ಮಾತುಗಳೇ ಮನಸ್ಸನ್ನು ಸೆಳೆಯುತ್ತಿರುತ್ತದೆ. ಇವರ ಸಂಬಂಧ ತಿಂಗಳು ಚೆನ್ನಾಗಿದ್ದರೆ, ೩ ತಿಂಗಳು ಮೌನದಲ್ಲಿ ಮರೆಯಾಗಿರುತ್ತದೆ. ಇದೇ ರೀತಿ ನಾಲ್ಕು ವರ್ಷ ಮುಂದುವರೆಯುತ್ತದೆ. ತದನಂತರ ಇಲ್ಲಿ ಯುವತಿಗೆ ಮದುವೆಯಾಗಿ,ಮಕ್ಕಳೂ ಆಗುತ್ತವೆ. ಯುವಕನಿಗೂ, ಮದುವೆಯಾಗಿರುತ್ತದೆ. ಆದರೂ ಇವರು ತಮ್ಮ ಆಪ್ತತತೆ,ಹಳೆಯ ಪ್ರೀತಿ ಕಳೆದುಕೊಳ್ಳುವುದಿಲ್ಲ.

ಮುಂದುವರೆಯುತ್ತಾ ಇವರಿಬ್ಬರು ದೈಹಿಕ ಸಂಬಂಧ ಬೆಳಿಸಿಕೊಳ್ಳುತ್ತಾರೆ. ಈ ವಿಚಾರ ಇವರ ಸ್ನೇಹಿತರಿಗೆ ತಿಳಿದಿರುತ್ತದೆ ಆದರೂ ಇವರ ಸಂಬಂಧಕ್ಕೆ ಅಡ್ಡಿ ಯಾರು ಇರುವುದಿಲ್ಲ. ಕಾರಣ ಅವರೇ ಅವರ ವಿಷಕಾರಿ ಪ್ರೇಮಕ್ಕೆ ಬೇಲಿಯಾಗಿರುತ್ತಾರೆ. ಸ್ಪಲ್ಪದಿನ ತುಂಬಾ ಚೆನ್ನಾಗಿ ಇರುವುದು ಇನ್ನು ಸ್ಪಲ್ಪ ದಿನ ಗೊತ್ತೇ ಇಲ್ಲದಂತೆ ಇರುವುದು.

ಇವರಿಬ್ಬರು ಬೇರೆಯವರನ್ನು ಮದುವೆಯಾಗಿರುತ್ತಾರೆ ಅಲ್ಲವೇ,ಅವರ ಸ್ಥಿತಿ ಕಂಡರೆ ಪಾಪ ಎನಿಸುತ್ತದೆ. ಇವರ ಮೊದಲ ಲವ್‌ ಗುಪ್ತವಾಗಿರುತ್ತದೆ. ಬಿಟ್ಟು ಬಿಡಬೇಕು ಎನ್ನುವಷ್ಟರಲ್ಲಿಯೇ ಬಂಧನ ಗಟ್ಟಿ ಮಾಡಿಕೊಂಡಿರುತ್ತಾರೆ. ಈ ರೀತಿಯ ಘಟನೆಗಳಿಂದ ಎಷ್ಟೋ ಜನ ಬಳಲುತ್ತಿದ್ದು, ಸರಿ ತಪ್ಪಿನ ಅರಿವಿಲ್ಲದ ಮನಸ್ಸಿನ ತಳಮಳಕ್ಕೆ ತಾಳ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಷಕಾರಿ ಸಂಬಂಧದಲ್ಲಿರುವರ ಪರಿಸ್ಥಿತಿ ಕಿನ್ನತೆಗೆ ಕಳುಹಿಸುತ್ತಲೇ ಇರುತ್ತದೆ.

ಕೊನೆಗೆ ನನ್ನನ್ನು ನೀನು ಬಿಟ್ಟು ಇರುತ್ತೀಯಾ? ಎನ್ನುವ ಪ್ರಶ್ನೆ ಇಲ್ಲಿ ಬರುತ್ತದೆ. ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿರುತ್ತದೆ. ಅದಕ್ಕೆ ನಿಮ್ಮ ಪ್ರೇಮವನ್ನು ಬಿಟ್ಟೇ ಕೊಟ್ಟಿದ್ದೀರಿ ಅಂದ ಮೇಲೆ ಬಿಟ್ಟು ಬದುಕುವದನ್ನು ಅಭ್ಯಾಸ ಮಾಡಿಕೊಳ್ಳಬೇಕು ಅಲ್ಲವೇ? ನಿಮಗಾಗಿ ನಿಮ್ಮನ್ನು ಮದುವೆಯಾಗಿ ಬಂದ ಸಂಗಾತಿ ಜತೆ ಜೀವಿಸಿ. ವಿಷಕಾರಿ ಪ್ರೇಮಕ್ಕೆ ವಿಧಾಯ ಹೇಳಿ, ವಾಸ್ತವ ಒಪ್ಪಿಕೊಳ್ಳವುದು ಅಭ್ಯಾಸ ಮಾಡಿಕೊಳ್ಳಬೇಕು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post