ಜಾನಕಮ್ಮರನ್ನು ನಮ್ಮ ಜೊತೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು : ನಟಿ ಜಯಮಾಲ

ಮೈಸೂರು: ‘ದಕ್ಷಿಣ ಭಾರತದ ಗಾನ ಕೋಗಿಲೆ’ ಎಸ್ ಜಾನಕಿ 1957ರಲ್ಲಿ ಗಾಯನ ಆರಂಭಿಸಿ, ಕಿ 6 ದಶಕಗಳಿಗೂ ಹೆಚ್ಚು ಕಾಲ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಸಂಗೀತ ಲೋಕಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ.

ಕನ್ನಡದಲ್ಲೇ ಹೆಚ್ಚು ಹಾಡುಗಳನ್ನು ಹಾಡಿರುವ ಜಾನಕಿ ಅವರು 4 ರಾಷ್ಟ್ರೀಯ ಪ್ರಶಸ್ತಿಗಳು, 33 ರಾಜ್ಯ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು. ಅವರೀಗ ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನಟಿ ಜಯಮಾಲ , ಜಾನಕಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ತದನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಮೂಲಕ ಜಾನಕಮ್ಮ ಅವರನ್ನು ನಮ್ಮ ಜೊತೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಜಾನಕಮ್ಮ ಮೈಸೂರಿನ ಸೊಸೆ. ಇದೇ ಜಾಗದಲ್ಲಿ ಅವರು ಉಸಿರು ಬಿಟ್ಟಿದ್ದಾರೆ. ಮೈಸೂರು ವಿವಿಯಲ್ಲಿ ಸಂಗೀತದ ಅಧ್ಯಯನ ಪೀಠ ತೆರೆಯಬೇಕು. ಎಂದು ನಟಿ ಜಯಮಾಲಾ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಮ್ಮ ಗೆಲುವಿನ ಹಿಂದೆ ಜಾನಕಿ ಅವರು ಇದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಮನವಿ ಮಾಡಿದ್ದಾರೆ.

1975ರಿಂದ ಜಾನಕಮ್ಮರನ್ನ ಬಲ್ಲೆ. ಪ್ರೇಮದ ಕಾಣಿಕೆ ವೇಳೆ ಪರಿಚಯ ಆಯ್ತು. ಅವರಲ್ಲಿರುವ ವೈವಿಧ್ಯತೆ ಇನ್ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಭಾರತದ ಇತಿಹಾಸದಲ್ಲಿ ಅವರದ್ದೊಂದು ದಾಖಲೆ. ಅವರು ಶ್ರೇಷ್ಠ ಗಾನಕೋಗಿಲೆ, ಅವರನ್ನ ಕಳೆದುಕೊಂಡಿರುವುದು ಭಾರತೀಯ ಚಿತ್ರರಂಗಕ್ಕೆ ಬಹಳ ದೊಡ್ಡ ನೋವು ಆಗಿದೆ ಎಂದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others