ಪ್ರತಿ ವರ್ಷ ಜುಲೈ 29 ರಂದು ಇಡೀ ಜಗತ್ತು ವಿಶ್ವ ಹುಲಿ ದಿನ ಆಚರಿಸುತ್ತದೆ. ಆದರೆ ಭಾರತಕ್ಕೆ ಈ ದಿನದ ಮಹತ್ವ ಇನ್ನೂ ವಿಶೇಷ. ಏಕೆಂದರೆ ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ ಮಾತ್ರವಲ್ಲ, ಟಿಪ್ಪು ಸುಲ್ತಾನನ ಶೌರ್ಯದಿಂದ ಹಿಡಿದು ನೇತಾಜಿ ಬೋಸ್‌ನ ಸ್ವಾತಂತ್ರ್ಯ ಹೋರಾಟದವರೆಗೆ ಹುಲಿ ನಮ್ಮ ಇತಿಹಾಸದ ಪ್ರತಿಯೊಂದು ಅಧ್ಯಾಯದಲ್ಲಿ ಇದೆ.
ರಾಜಪ್ರಭುತ್ವದಲ್ಲಿ ಟಿಪ್ಪು ಸುಲ್ತಾನ್ 18ನೇ ಶತಮಾನದಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿಗೆ ನೇರ ಸವಾಲೊಡ್ಡಿದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಅವರನ್ನು ಇತಿಹಾಸ ಮೈಸೂರಿನ ಹುಲಿ ಎಂದು ಗುರುತಿಸಿದೆ.
ಟಿಪ್ಪುವಿಗೆ ಹುಲಿ ಕೇವಲ ಚಿಹ್ನೆಯಾಗಿರಲಿಲ್ಲ. ಅದು ಆತನ ಆಡಳಿತದ ಆತ್ಮವಾಗಿತ್ತು. ಆತನ ಕತ್ತಿ ಬಾಬ್ರಿ, ಬಂದೂಕು, ನಾಣ್ಯ, ಯುದ್ಧದ ಡೇರೆ, ಅರಮನೆಯ ಗೋಡೆ ಮತ್ತು ನೌಕಾಪಡೆಯ ಧ್ವಜ ಎಲ್ಲದರ ಮೇಲೂ ಹುಲಿಯ ಪಟ್ಟೆ ಮತ್ತು ಹುಲಿಯ ತಲೆಯ ಚಿಹ್ನೆ ಇತ್ತು.
ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಲ್ಲಿರುವ ಪ್ರಸಿದ್ಧ ಟಿಪ್ಪುವಿನ ಹುಲಿ ಯಂತ್ರ ಇದಕ್ಕೆ ಸಾಕ್ಷಿ. ಅದರಲ್ಲಿ ಹುಲಿಯೊಂದು ಬ್ರಿಟಿಷ್ ಸೈನಿಕನನ್ನು ಹರಿದು ತಿನ್ನುವಂತೆ ಯಾಂತ್ರಿಕ ವಿನ್ಯಾಸವಿತ್ತು.ನೂರು ವರ್ಷ ಕುರಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಮೇಲು ಎಂದು ಘೋಷಿಸಿದ ಟಿಪ್ಪು, ಹುಲಿಯ ಛಲದಿಂದಲೇ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳನ್ನು ನಡೆಸಿ ಬ್ರಿಟಿಷರಿಗೆ ಸಂಕಟ ತಂದರು.
ಸ್ವಾತಂತ್ರ್ಯ ಹೋರಾಟದ ಮತ್ತೊಬ್ಬ ಧೀರ ನೇತಾಜಿ ಸುಭಾಷ್ ಚಂದ್ರ ಬೋಸ್ ಕೂಡ ಹುಲಿಯನ್ನು ತಮ್ಮ ಹೋರಾಟದ ಸಂಕೇತವಾಗಿಸಿಕೊಂಡರ.1943 ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಸೇನೆ (INA)ಯ ಅಧಿಕೃತ ಬಾವುಟದ ಮಧ್ಯದಲ್ಲಿ ಮುನ್ನುಗ್ಗುತ್ತಿರುವ ಹುಲಿಯ ಚಿತ್ರವಿತ್ತು. ಆ ಹುಲಿ ಬಾವುಟದ ಕೆಳಗೆ ಜೈ ಹಿಂದ್, ದಿಲ್ಲಿ ಚಲೋ ಎಂದು ಘೋಷಿಣೆ ಮಾಡುತ್ತಾ ಸಾವಿರಾರು ಯುವಕರು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಹೋದರು. ಹೀಗೆ ಟಿಪ್ಪುವೂ, ಬೋಸ್‌ರೂ ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ಮಾರ್ಗದಲ್ಲಿ, ಆದರೆ ಒಂದೇ ಶತ್ರು – ಬ್ರಿಟಿಷರ ವಿರುದ್ಧ ಹುಲಿಯಂತೆ ಗುಡುಗಿದರು.
ಹುಲಿ ಹೇಗೆ ಭಾರತದ ರಾಷ್ಟ್ರೀಯ ಪ್ರಾಣಿಯಾಯಿತು? ಸ್ವಾತಂತ್ರ್ಯದ ನಂತರ 1969 ರವರೆಗೆ ಸಿಂಹ ಭಾರತದ ರಾಷ್ಟ್ರೀಯ ಪ್ರಾಣಿಯಾಗಿತ್ತು. ಆದರೆ ಸಿಂಹವು ಗುಜರಾತ್‌ನ ಗಿರ್‌ನಲ್ಲಿ ಮಾತ್ರ ಕಂಡುಬರುತ್ತಿತ್ತು. 1972 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದಲ್ಲಿ “ಪ್ರಾಜೆಕ್ಟ್ ಟೈಗರ್”ಯೋಜನೆಗೆ ಚಾಲನೆ ದೊರೆಯಿತು. ಅದೇ ವರ್ಷ ನವದೆಹಲಿಯಲ್ಲಿ ನಡೆದ ಭಾರತೀಯ ವನ್ಯಜೀವಿ ಮಂಡಳಿ – ಇಂಡಿಯಾ ಬೋರ್ಡ್ ಫಾರ್ ವೈಲ್ಡ್ ಲೈಫ್ ಸಭೆಯಲ್ಲಿ ನಿರ್ಣಾಯಕ ನಿರ್ಧಾರವಾಯಿತು.
ಭೌಗೋಳಿಕ ವ್ಯಾಪ್ತಿ. ಹುಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಇಡೀ ಭಾರತದಲ್ಲಿ ಕಂಡುಬರುತ್ತದೆ. ವರದಿ _Ministry of Environment, Forest and Climate Change
ವಿಶ್ವ ಹುಲಿ ದಿನ ಆಚರಣೆ ಹುಟ್ಟಿದ್ದು ಹೀಗೆ, ಜಗತ್ತಿನಲ್ಲಿ 1900 ರಲ್ಲಿ ಒಂದು ಲಕ್ಷ ಇದ್ದ ಹುಲಿಗಳ ಸಂಖ್ಯೆ 2010 ರಲ್ಲಿ 3,200 ಕ್ಕೆ ಇಳಿದಿತ್ತು. ಈ ಆತಂಕದ ಹಿನ್ನೆಲೆಯಲ್ಲಿ 2010 ರ ನವೆಂಬರ್‌ನಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಲ್ಲಿ 13 ಹುಲಿ ಇರುವ ದೇಶಗಳ ಶೃಂಗಸಭೆ ನಡೆಯಿತು. ಈ ಸಭೆಯಲ್ಲಿ “TX2″ಗುರಿ ಘೋಷಿಸಲಾಯಿತು. ಅಂದರೆ 2022 ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದು. ಅದೇ ಸಭೆಯಲ್ಲಿ ಪ್ರತಿ ವರ್ಷ ಜುಲೈ 29 ರಂದು ವಿಶ್ವ ಹುಲಿ ದಿನವನ್ನಾಗಿ ತೀರ್ಮಾನಿಸಲಾಯಿತು. ಆಧಾರ-Global Tiger Initiative, World Bank .
ದುರ್ಗಾ ದೇವಿಯ ವಾಹನ, ರಾಜರ ಲಾಂಛನ, ಜಾನಪದದಲ್ಲಿ ವಿಶೇಷ ಸ್ಥಾನದಲ್ಲಿ ಸಾಂಸ್ಕೃತಿಕ ಮಹತ್ವವಿದೆ. ಪರಿಸರ ಸೂಚಕವಾಗಿ ಹುಲಿ ಇರುವ ಕಾಡು ಆರೋಗ್ಯಕರ ಕಾಡು. ಆಹಾರ ಸರಪಳಿಯ ಮೇಲ್ಭಾಗದಲ್ಲಿರುವುದರಿಂದ ಪರಿಸರ ಸಮತೋಲನ ಕಾಪಾಡುತ್ತದೆ.ಈ ಆಧಾರಗಳ ಮೇಲೆ 1973 ರ ಏಪ್ರಿಲ್ 1 ರಿಂದ ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಪ್ರಕಾರ.Wildlife Protection Act, 1972.
ಕರ್ನಾಟಕ ಹುಲಿಗಳ ನಾಡು.ಕರ್ನಾಟಕವು ಹೆಮ್ಮೆಯಿಂದ ನಿಲ್ಲುತ್ತದೆ. ಬಂಡೀಪುರ, ನಾಗರಹೊಳೆ, ಭದ್ರಾ ಅರಣ್ಯಗಳಲ್ಲಿ 2022 ರ NTCA ಜನಗಣತಿಯ ಪ್ರಕಾರ 563 ಹುಲಿಗಳಿವೆ. ಮಧ್ಯಪ್ರದೇಶದ ನಂತರ ದೇಶದಲ್ಲೇ 2ನೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ನಮ್ಮದು, ಇದು ನಮ್ಮ ರಾಜ್ಯದ ಹಿರಿಮೆ.
ಈ ದಿನದಂದು ಸರ್ಕಾರಗಳು, ಅರಣ್ಯ ಇಲಾಖೆ, NGO ಗಳು ಹುಲಿ ಸಂರಕ್ಷಣೆ, ಆವಾಸಸ್ಥಾನ ರಕ್ಷಣೆ, ಬೇಟೆ ವಿರೋಧಿ ಅಭಿಯಾನಗಳನ್ನು ನಡೆಸುತ್ತವೆ. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ.
ವಿಶ್ವ ಹುಲಿ ದಿನ ಆಚರಿಸಿದ ಸಮರ್ಪಣ ಟ್ರಸ್ಟ್ ತೀರ್ಮಾನ.ಟಿಪ್ಪು ಹುಲಿಯ ಚಿಹ್ನೆಯನ್ನು ಗೌರವಿಸಿ ಹೋರಾಡಿದರು . ಬೋಸ್ ಹುಲಿಯ ಬಾವುಟವನ್ನು ಹಿಡಿದು ಹೋರಾಡಿದರು.ಇಂದಿರಾ ಗಾಂಧಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಿದರು. ಇಂದು ಇಡೀ ಜಗತ್ತು ಜುಲೈ 29 ರಂದು ಹುಲಿಯನ್ನು ಉಳಿಸಲು ಸಂಕಲ್ಪಮಾಡುತ್ತದೆ.ಹುಲಿ ಬದುಕಿದರೆ ಕಾಡು ಬದುಕುತ್ತದೆ. ಕಾಡು ಬದುಕಿದರೆ ಮನುಷ್ಯ ಬದುಕುತ್ತಾನೆ. ಈ ವಿಶ್ವ ಹುಲಿ ದಿನದಂದು ನಾವೆಲ್ಲರೂ ಅರಣ್ಯ ಉಳಿಸುವ, ಬೇಟೆ ವಿರೋಧಿಸುವ ಪ್ರತಿಜ್ಞೆ ಮಾಡೋಣ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.






2 Responses
ಗುಡ್ ಮೆಸೇಜ್
ಧನ್ಯವಾದಗಳು