ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಇದರ ವಿವಾದ ದಶಕಗಳಿಂದ ನಡೆಯುತ್ತಲೇ ಇದೆ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹಳೆಯ ಸಮಸ್ಯೆ ಇದಾಗಿದ್ದು, ಈ ವಿವಾದ ನಿಲ್ಲುವಂತೆ ಕಾಣುತ್ತಿಲ್ಲ. ಇನ್ನು ಈ ವಿಚಾರಕ್ಕೆ ಇದೀಗ ಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡ್ಯಾಮ್ ತುಂಬಿದ್ರೆ ನೀರು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ವಪಕ್ಷ ಸಭೆಗೆ ಬಿಜೆಪಿ ಟೀಕೆ ವಿಚಾರ ಕುರಿತು ಮಾತನಾಡಿ, ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದೇ ಬಿಜೆಪಿಯವರು. ಈಗ ಅವ್ರೇ ಆರೋಪ ಮಾಡ್ತಾರೆ ಮಾಡಲಿ, ಇನ್ನೂ ನೀರು ಬಿಟ್ಟಿಲ್ಲ. ಸಂಜೆ ಅಷ್ಟೋತ್ತಿಗೆ ಒಂದು ಡ್ಯಾಂ ತುಂಬುವ ಸ್ಥಿತಿಯಲ್ಲಿ ಇದೆ. ಡ್ಯಾಂ ತುಂಬಿದ್ರೆ ನೀರನ್ನ ನಾವು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಅಂತಲೂ ಹೇಳಿದ್ದಾರೆ.
ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಹೋಗ್ತಾರೆ ಅಂತ ಗೊತ್ತಾಯ್ತು. ನೋಡೋಣ ಇಂದು ಸಾಯಂಕಾಲ ಮತ್ತೊಂದು ಡ್ಯಾಂ ತುಂಬಬಹುದು, ನೀರನ್ನ ನಾವೇನು ತಡೆಹಿಡಿಯೋಕೆ ಆಗಲ್ಲ, ನಾಳಿನ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ನಾಳೆ (ಆ.2) ಸರ್ವ ಪಕ್ಷ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೂ ನಾವು ನೀರು ಬಿಟ್ಟಿಲ್ಲ, ಆದರೆ ಮಳೆಯಾಗ್ತಿದೆ. ಒಂದು ಡ್ಯಾಂ ಮತ್ತೆ ತುಂಬೋ ಹಂತಕ್ಕೆ ಬಂದಿದೆ. ನಾಳೆ ಸರ್ವ ಪಕ್ಷ ಸಭೆ ಕರೆದಿದ್ದೇನೆ. ಬಿಜೆಪಿ ಅವರೇ ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದು, ಅದನ್ನ ಮಾಡಿದ್ದೇನೆ ಎಂದರು.
ಮಳೆ ಜಾಸ್ತಿಯಾದ್ರೆ ಡ್ಯಾಂ ತುಂಬುತ್ತದೆ ಆಗ ನೀರನ್ನು ತಡೆಯುವುದಕ್ಕೆ ಆಗುವುದಿಲ್ಲ ಅದನ್ನು ಹೊರಗೆ ಬಿಡಬೇಕಾಗುತ್ತದೆ ಎಂದು ಹೇಳಿದ್ದು, ಡ್ಯಾಂ ತುಂಬಿದ್ರೆ ನೀರನ್ನ ನಾವು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ
ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವುದಾಗಿ ಹೇಳಿದ್ದಾರೆ. ಡ್ಯಾಂ ತುಂಬಿದ್ರೆ, ನೀರು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಎಂದು ತಿಳಿಸಿದ್ದಾರೆ.





