Leopard that barged into a house is now locked up ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ಚಿರತೆ ಕಾಣಿಸಿಕೊಂಡು ಸಾಕಷ್ಟು ಸಮಸ್ಯೆ ಉಂಟು ಮಾಡಿತ್ತು ಘಟನೆ ಮಾಸುವ ಮುನ್ನವೇ ಜಿಗಣಿಯ ಕುಂಟ್ ರೆಡ್ಡಿ ಲೇಔಟ್ ನಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ, ಮನೆಗೆ ನುಗ್ಗಿದ ಚಿರತೆಯನ್ನು ಲಾಕ್ ಮಾಡಿ ಕಡೆಗೂ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಸೆರೆಹಿಡಿಯಲಾಗಿದೆ. ರಕ್ಷಣೆ ಮಾಡಿದ ಚಿರತೆಯನ್ನು ಬನ್ನೇರುಘಟ್ಟಕ್ಕೆ ಜೈವಿಕ ಉದ್ಯಾನವನಕ್ಕೆ ಶಿಫ್ಟ್ ಮಾಡಲಾಗಿದೆ ಅಷ್ಟಕ್ಕೂ ಕಾರ್ಯ ಚರಣೆ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ .
ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟ ರೆಡ್ಡಿ ಲೇಔಟ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ ವೆಂಕಟೇಶ್ ಮತ್ತು ವೆಂಕಟಲಕ್ಷ್ಮಮ್ಮ ಮನೆಯಲ್ಲಿ ಚಿರತೆ ಕಾಣಿಸಿಕೊಂಡಿದೆ ಬೆಳಗ್ಗೆ ಎದ್ದು ಮನೆ ಕೆಲಸ ಮಾಡಲು ಬಂದಾಗ ಮನೆ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಕೂಡಲೇ ಚಿರತೆಯನ್ನು ಮನೆಯಲ್ಲಿ ಲಾಕ್ ಮಾಡಿದ್ದಾರೆ ಇದರಿಂದ ಭಾರಿ ಅನಾಹುತ ತಪ್ಪಿದೆ. ಇನ್ನು ಮನೆ ಮಾಲೀಕ ಹೇಳುವ ಪ್ರಕಾರ ಬೆಳಿಗ್ಗೆ ಟೀ ಕುಡಿತಿದ್ರಂತೆ, ಇಲಿ ಬಂದುಬಿಡುತ್ತೆ ಅಂತ ಪ್ಲೇವುಡ್ ಶೀಟ್ ಅನ್ನ ಹಾಕಲಾಗಿತ್ತು ಅಂತೆ ಅದರ ಮೇಲೆ ಏನು ಶಬ್ದ ಕೇಳಿ ಬಂದಿದೆ ಏನೋ ಶಬ್ದ ಬಂತಲ್ಲ ಅಂತ ಅನ್ಕೊಂಡು ನಾಯಿ ಅಂತೂ ನೋಡಕ್ ಹೋದ್ರಂತೆ. ಆಮೇಲೆ ಚಿರತೆ ಅಂತ ಗೊತ್ತಾಗಿದೆ ರೂಂಗೋದ್ ತಕ್ಷಣ ಲಾಕ್ ಮಾಡಿದ್ದಾರೆ..
ಇನ್ನು ಚಿರತೆ ಕಾಣಿಸಿಕೊಂಡ ಬಳಿಕ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.. ಇನ್ನು ಮನೆಯಲ್ಲಿದ್ದ ಚಿರತೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಅರಣ್ಯ ಅಧಿಕಾರಿಗಳು ಲೆಪಾರ್ಡ್ ಟಾಸ್ಕ್ ಪೊರ್ಸ್ ಅನ್ನು ಕರಸಿ ಅರವಳಿಕೆ ಚುಚ್ಚುಮದ್ದಿ ನೀಡಿ ಪ್ರಜ್ಞೆ ತಪ್ಪಿಸಿ ಬೋನ್ನಲ್ಲಿ ಶಿಫ್ಟ್ ಮಾಡಲಾಗಿದೆ. ಇನ್ನು ಈ ಸ್ಥಳೀಯ ಹೇಳುವ ಪ್ರಕಾರ ಅತಿ ವೇಗವಾಗಿ ಬಡಾವಣೆಗಳ ನಿರ್ಮಾಣ ಆದ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ನಾಡಿನಕಡೆ ಮುಖ ಮಾಡುತ್ತಿದೆ ಆ ಮಹಿಳೆಯ ಸಮಯ ಪ್ರಜ್ಞೆಯಿಂದ ಬಾರಿಯ ಅನಾಹುತ ಕೈತಪ್ಪಿದೆ, ಅರಣ್ಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಪುರಸಭೆಗಳ ನೆರವಿನಿಂದ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಕರವೇ ಹೋರಾಟಗಾರ ಪುನೀತ್ ತಿಳಿಸಿದರು
ಇನ್ನು ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆ ಮಾಡಿತ್ತು ಅಲ್ಲದೆ ಚಿರತೆಯನ್ನು ನೋಡಲು ಜನರು ಮುಗಿಬಿದ್ದಿದ್ದಾರೆ..ಇನ್ನು ರಕ್ಷಣೆ ಮಾಡಿದ ಚಿರತೆಯನ್ನು ವೈದ್ಯರು ಪರೀಕ್ಷಿಸಿ ಕೆಲ ದಿನಗಳ ಬಳಿಕ ರೇಡಿಯೋ ಕಾಲರ್ ಅಳವಡಿಕೆ ಮಾಡಿ ಮತ್ತೆ ಕಾಡಿಗೆ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಸದ್ಯ ಚಿರತೆಯಿಂದಾಗಿ ಯಾವುದೇ ಅಪಾಯವಿಲ್ಲದೆ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.





