B.R. Patil: ನಾನು ಸುಮೋಟೊ ಮಂತ್ರಿ ಮಾಡಿ ಅಂತಾ ಎಲ್ಲೂ ಹೋಗಿಲ್ಲ- ಬಿ.ಆರ್.ಪಾಟೀಲ್

ಕಲಬುರಗಿ: ನನ್ನ ಸಚಿವ ಸ್ಥಾನಕ್ಕೆ ಕಲಬುರಗಿ ಜಿಲ್ಲೆಯ ನಾಯಕರೇ ಅಡ್ಡಿಯಾಗಿರುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಅಂತಾ ಆಳಂದ ಶಾಸಕ ಬಿ.ಆರ್.ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಬಿ.ಆರ್.ಪಾಟೀಲ್ ಅವರು, ಸಿದ್ದು ಅವರು ನನಗೆ ಒಂದು ಭರವಸೆ ನಿಡಿದ್ದರು.ನನ್ನನ್ನು ಸಚಿವನನ್ನಾಗಿ ಮಾಡಿ ಕಳುಹಿಸುತ್ತೇನೆ’ ಅಂತಾ ಜನತೆಗೆ ಹೇಳಿದ್ದರು. ಇಷ್ಟೆಲ್ಲಾ ಆದ ಮೇಲೆ ನನಗೆ ಬೇಜಾರ್ ಆಗಿದ್ದು ಏನಂದ್ರೆ, ಮಾತು ಕೊಟ್ಟು ಮಾತು ತಪ್ಪಿದ್ರು ಸಿದ್ದರಾಮಯ್ಯ ಅವರು ಎಂದು ಮಾಜಿ ಸಿಎಂ ಸಿದ್ದು ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಸುಮೋಟೊ ಮಂತ್ರಿ ಮಾಡಿ ಅಂತಾ ಎಲ್ಲೂ ಹೋಗಿಲ್ಲ. ಸಿದ್ದರಾಮಯ್ಯ ಅವರು ಚುನಾವಣೆ ಸಂದರ್ಭದಲ್ಲಿ, ‘ನನ್ನ ಗೆಳೆಯನನ್ನು ಆಯ್ಕೆ ಮಾಡಿ ಕಳುಹಿಸಿ.. ಮೂರು ಬಾರಿ ಕರೆದು ಮಂತ್ರಿ ಮಾಡುತ್ತೇನೆ ಅಂತಾ ಹೇಳಿದ್ರು. ಆದರೆ, ಮಾಡಿಲ್ಲ ಎಂದು ಪಾಟೀಲ್ ಅಸಮಾಧಾನ ವ್ಯಕ್ತಪಡಿದ್ದಾರೆ.

ಸದ್ಯ 140 ಜನ ಶಾಸಕರು ಇದ್ದಾರೆ. ಅವರು ಕರೆದು ಮಾತಾನಾಡುವ ಸಂದರ್ಭವೇ ಇಲ್ಲ ಎಂದರು. ಇನ್ನು 2028 ರ ಚುನಾವಣೆ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ಬಿ.ಆರ್.ಪಾಟೀಲ್, ಕಾದು ನೋಡಿ ಎಂದಷ್ಟೇ ಪ್ರತಿಕ್ರಿಯಿಸಿದರು.

ಅದು ಯಾವ ಲೀಡರ್ ಅಂತಾ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಜಾರಿಕೊಳ್ಳಲು ನೆಪ ಮಾತ್ರಕ್ಕೆ ಈ ರೀತಿ ಹೇಳಿದ್ರಾ? ಸತ್ಯ ಹೇಳಿದ್ರಾ ಅದು ಸಹ ಗೊತ್ತಿಲ್ಲ ಎಂದು ತಿಳಿಸಿದರು.

ಕೊಟ್ಟ ಮಾತಿಗೆ ಸಿದ್ದು ತಪ್ಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೈ ನಾಯಕರಲ್ಲಿ ಕೆಲವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಸರಗೊಂಡಿದ್ದಾರೆ ಇನ್ನು ಕೆಲವು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿ.ಆರ್.ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others