ದಾವಣಗೆರೆ: ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಎನಿದೆ ಅದೇ ರೀತಿ ಅರೆಸ್ಟ್ ಮಾಡಿದ್ದರು. ಈಗ ಹೊರಗೆ ಬಂದಿದ್ದಾರೆ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ಸರಿ ಇದೆ.ಭ್ರಷ್ಟಾಚಾರ ಅರೋಪ ಇದ್ದರೂ ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ದಾರೆ ಎಂಬ ವಿಪಕ್ಷ ಗಳ ಅರೋಪಕ್ಕೆ, ಭ್ರಷ್ಟಾಚಾರ ಆರೋಪ ಯಾರ ಮೇಲೆ ಇಲ್ಲ ಹೇಳಿ? ಬಿಜೆಪಿಯವರಿಗೆ ಇದರ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ. ಇದೀಗ ಆರೋಪಿಗಳು ಅಷ್ಟೇ, ಅಪರಾಧ ಸಾಬೀತಾದ್ರೆ ಆಗ ಮಾತಾಡಲಿ. ಎಂದು ತಿಳಿಸಿದ್ದಾರೆ.
ಇನ್ನೂ ಮೊದಲ ಬಾರಿ ಗೆದ್ದಿರುವೆ. ಸಿಎಂ ರಾಜಕೀಯ ಕಾರ್ಯದರ್ಶಿ ಕೊಟ್ಟರೂ ನಿಭಾಯಿಸುವೆ.ನಾನು ರೈತರ ಕೋಟಾ ಅಡಿ ಮಂತ್ರಿ ಸ್ಥಾನ ಕೇಳಿದ್ದೆ, ಆದರೆ ಕೊಟ್ಟಿಲ್ಲ. ಮುಂದೆ ಸಾಕಷ್ಟು ಅವಕಾಶ ಇದೆ, ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟದಲ್ಲಿ ಡಿಕೆಶಿ ಆಪ್ತರು, ಸಿದ್ದರಾಮಯ್ಯ ಆಪ್ತರು ಎಂದು ಬರೋದಿಲ್ಲ. ಪ್ರಾಂತ್ಯವಾರು ಸಚಿವ ಸ್ಥಾನ ನೀಡಿದ್ದಾರೆ. ನಮ್ಮ ಕೆ.ಎಸ್ ಬಸವಂತಪ್ಪ ಅವರಿಗೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ನಮಗೆ ಸಂತೋಷವಿದೆ ಎಂದರು.
ಈ ವೇಳೆ, ಪಕ್ಷದಲ್ಲಿ ಐದಾರು ಬಾರಿ ಗೆದ್ದ ಹಿರಿಯ ಶಾಸಕರು ಇದ್ದಾರೆ. ನನಗೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಸಿಕ್ಕಿಲ್ಲ, ಮುಂದೆ ಸಾಕಷ್ಟ ಅವಕಾಶಗಳಿವೆ ಕಾದು ನೋಡೋಣ. ಅದರ ಬಗ್ಗೆ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಬೇಕಿದೆ ಎಂದು ತಿಳಿಸಿದ್ದಾರೆ.





