ಮೈಸೂರು: ವಿಪಕ್ಷಗಳು ಮಾತನಾಡಿದ್ರೆ ಗೌರವ ಕೊಡ್ತಿಲ್ಲ. ಅಧಿಕಾರದ ಮದದಿಂದ ವಿಪಕ್ಷಗಳಿಗೆ ಮಾನ್ಯತೆ ಕೊಡ್ತಿಲ್ಲ. ಬೀದಿ ಬದಿ ವ್ಯಾಪಾರಸ್ಥರನ್ನ ಎತ್ತಿಸಿದ್ರಿ. ಅವರಿಗೆ ಪರ್ಯಾಯ ಮಾರ್ಗ ಕೊಟ್ರಾ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರೈತರು ಮತ್ತು ಹೆಣ್ಣುಮಕ್ಕಳು ಭದ್ರವಾಗಿದ್ದರೆ ಬಿಡದಿ ಟೌನ್ಶಿಪ್ ಯಾವುದೇ ಕಾರಣಕ್ಕೂ ಆಗಲ್ಲ. ವಿಪಕ್ಷಗಳು ಮಾತನಾಡಿದ್ರೆ ಗೌರವ ಕೊಡ್ತಿಲ್ಲ. ಅಧಿಕಾರದ ಮದದಿಂದ ವಿಪಕ್ಷಗಳಿಗೆ ಮಾನ್ಯತೆ ಕೊಡ್ತಿಲ್ಲ. ಬೀದಿ ಬದಿ ವ್ಯಾಪಾರಸ್ಥರನ್ನ ಎತ್ತಿಸಿದ್ರಿ. ಅವರಿಗೆ ಪರ್ಯಾಯ ಮಾರ್ಗ ಕೊಟ್ರಾ? ಕೃಷ್ಣ ಬೈರೇಗೌಡ್ರು ನಾನು ಖರೀದಿ ಮಾಡಿದ ಜಾಗ ಒತ್ತುವರಿ ಅಂದ್ರಿ. ಅದಿಕ್ಕೆ ಎಸ್ಐಟಿ ಕೂಡ ರಚನೆ ಮಾಡಿದ್ರಿ. ಒಂದೂವರೆ ವರ್ಷ ಅಧಿಕಾರ ಮಾತ್ರ ಬಾಕಿ ಇರೋದು ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಬಿಡದಿ ಟೌನ್ಶಿಪ್ ಪಾದಯಾತ್ರೆ ಯಶಸ್ವಿಯಾಗಲೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದರು. ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಪಾದಯಾತ್ರೆ ಯಶಸ್ಸು ಕೋರಿದರು. ಶಾಸಕ ಹೆಚ್.ಡಿ.ರೇವಣ್ಣ ಕೂಡ ಚಾಮುಂಡಿ ತಾಯಿ ದರ್ಶನ ಪಡೆದರು.
ಬಿಡದಿ ಟೌನ್ಶಿಪ್ ಆಗಲ್ಲ. ಕೆಟ್ಟ ಭ್ರಷ್ಟ ಸರ್ಕಾರಕ್ಕೆ ತಿರುಗೇಟು ಕೊಡಲಿಕ್ಕೆ ನಮ್ಮ ಶಾಸಕರು ಸಿದ್ಧರಿದ್ದಾರೆ. ಬಿಡದಿ ಟೌನ್ಶಿಪ್ ಯಾವ ಕಾರಣಕ್ಕೂ ಆಗಲ್ಲ. ದುಡ್ಡು ಹೊಡೆಯೋಕೆ ಮುಂದಾಗಿದ್ದಾರೆ. ರೈತರು, ಹೆಣ್ಮಕ್ಕಳು ಭದ್ರವಾಗಿದ್ದರೆ. ಎಂದರು.
ಟೋಲ್ ಸಂಗ್ರಹ ಮಾಡ್ತಿರೋದು ಕೇಂದ್ರ ಸರ್ಕಾರ ಅಂದಿದ್ದಾರೆ. ಯಾರು ಟೋಲ್ ಸಂಗ್ರಹ ಮಾಡ್ತಿದ್ದಾರೆ ಎಂಬುದರ ಬಗ್ಗೆ ಅರಿವಿರಲಿ. ಕೆಲ ಸಚಿವರನ್ನ ಕುಮಾರಸ್ವಾಮಿ ಮತ್ತು ಜೆಡಿಎಸ್ ಬೈಯಲಿಕ್ಕೆ ಇಟ್ಕೊಂಡಿದ್ದಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನೈಸ್ ರೋಡ್ ಟೋಲ್ ಸಂಗ್ರಹ ವಿಚಾರವಾಗಿ ಮಾತನಾಡಿ, ಕಾನೂನುಬಾಹಿರವಾಗಿ ಟೋಲ್ ಸಂಗ್ರಹ ಮಾಡಲಾಗ್ತಿದೆ. ಇದನ್ನ ರಾಜ್ಯ ಹೇಳಿರೋದು ಸರ್ಕಾರದ ಪರ ವಾದ ಮಂಡಿಸಿರೋ ವಕೀಲರು. ಹೀಗಾಗಿ, ನಾನು ರೈತರಿಗೆ ಟೋಲ್ ಕಟ್ಟಬೇಡಿ ಅಂತ ಹೇಳಿದ್ದೀನಿ. ಪ್ರಿಯಾಂಕ್ ಖರ್ಗೆಯವರು ಕಾಂಪಿಟೇಷನ್ನಲ್ಲಿ ಮಾತನಾಡ್ತಾರೆ ಎಂದರು. ಪಾದಯಾತ್ರೆ ನನ್ನದಲ್ಲ, ಯುವ ಜೆಡಿಎಸ್ನವರದ್ದು. ನಿಖಿಲ್ ನೇತೃತ್ವದಲ್ಲಿ ಬಿಡದಿ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆಯಲ್ಲಿ ನಮ್ಮ ಶಾಸಕರು ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದರು.
ನನಗೆ ಇದರಲ್ಲಿ ಯಾವುದೇ ಹಠ ಇಲ್ಲ. ಬಹುಶಃ ಅವರಿಗೆ ಹಠ ಇರಬೇಕು. ಬಿಡದಿ ಟೌನ್ಶಿಪ್ ಹೆಸರಲ್ಲಿ ದುಡ್ಡು ಲೂಟಿ ಹೊಡೆಯೋ ಸ್ಕೀಮ್ ಇದು. ನಾನು ಕಿಕ್ಬ್ಯಾಕ್ ಪಡೆದಿದ್ರೆ ತನಿಖೆ ಮಾಡ್ಲಿ. ನನ್ನನ್ನಾಗಲಿ ದೇವೇಗೌಡರನ್ನಾಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾನು ಲಾಟರಿ ಬ್ಯಾನ್ ಮಾಡಿದಾಗ ತಮಿಳುನಾಡಿನಿಂದ ಬ್ಯಾಗ್ ಹಿಡ್ಕೊಂಡು ಬಂದಿದ್ದು ಯಾರು ಎಂದು ಹೇಳಿದ್ದಾರೆ.





