MB Patil: ಬಿಡದಿ ಟೌನ್‌ಶಿಪ್‌ಗೆ ಹೆಚ್‌ಡಿಕೆ ಪಿತಾಮಹ – ಎಂ.ಬಿ ಪಾಟೀಲ್ ವಾಗ್ದಾಳಿ

ವಿಜಯಪುರ: ರಾಜ್ಯದಲ್ಲಿ ಬಿಡದಿ ವಿಚಾರ ಸದ್ದು ಮಾಡುತ್ತಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲ ರೈತರು ಭೂಮಿಗಾಗಿ ಧರಣಿ ನಡೆಸಿದ್ದಾರೆ. ಇವರ ಜೊತೆಯಲ್ಲಿ ಹೆಚ್‌ ಡಿ ಕೆ ಅವರು ಭಾಗಿಯಾಗಿದ್ದರು. ಮತ್ತು ಇವತ್ತಿಗೂ ಅವರು ರೈತರ ಪರವಾಗಿ ಮಾತನಾಡುತ್ತಲೇ ಇದ್ದಾರೆ. ಈ ವಿಚಾರವಾಗಿ ಇದೀಗ ವಿಜಯಪುರದಲ್ಲಿ ಸಚಿವ ಎಂ.ಬಿ ಪಾಟೀಲ್ ಮಾತಿನ ಛಾಟಿ ಬೀಸಿದ್ದಾರೆ.

ತಾವು ಸಿಎಂ ಆಗಿದ್ದಾಗ ತಮ್ಮ ಕನಸಿನ ಕೂಸು ಬಿಡದಿ ಟೌನ್‌ಶಿಪ್‌ಗೆ ಯೋಜನೆಗೆ ಜನ್ಮ ನೀಡಿದರು. ಹೀಗಾಗಿ ಬಿಡದಿ ಟೌನ್‌ಶಿಪ್‌ಗೆ ಕುಮಾರಸ್ವಾಮಿಯವರೇ ಪಿತಾಮಹ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಇದು ಹೆಚ್‌ಡಿಕೆ ಅವರ ಕನಸಿನ ಕೂಸು. ತಾವು ಸಿಎಂ ಆಗಿದ್ದಾಗ ಬಿಡದಿ ಟೌನ್‌ಶಿಪ್‌ಗೆ ಜನ್ಮ ನೀಡಿ, ಪಿತಾಮಹರಾದರು.ಇದೆಲ್ಲ ನಾಟಕ ಮಾಡ್ತಿದ್ದಾರೆ. ಇದು ರಾಜಕೀಯಕ್ಕಾಗಿ ನಡೆದಿದೆ ಅಷ್ಟೇ. ಈಗ ಅವರೇ ಇದಕ್ಕೆ ವಿರೋಧ ಮಾಡ್ತಿದ್ದಾರೆ ಎಂದಿದ್ದಾರೆ.

ಇದು ಒಂದು ದೊಡ್ಡ ನಾಟಕ ರಾಜಕೀಯಕ್ಕಾಗಿ ಬಡ ಜನರನ್ನು ಮುಂದೆ ಇಟ್ಟುಕೊಂಡು ಡ್ರಾಮಾ ಮಾಡುತ್ತಿದ್ದಾರೆ. ಇದನ್ನೆ ಜನರು ಸಹ ನಂಬುತ್ತಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಹಾಗೂ ಬಿಜೆಪಿ ಬಿಡದಿ ಪಾದಾಯತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವ ನಾಗೇಂದ್ರ ನ್ಯಾಯಾಲಯ ನಿಯಮ ಉಲ್ಲಂಘನೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದೇ ಮಾತನಾಡುವುದು ತಪ್ಪಾಗುತ್ತೆ. ಅದರ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಮಾಹಿತಿ ನಂತರ ಅದರ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others