ರಕ್ಷಣೆ ಇದೆ ಎಂದು ಭಾವಿಸುವ ಉಗ್ರ ಪೋಷಕ ರಾಷ್ಟ್ರಗಳ ಆಟ ಇನ್ನು ಸಾಗದು : ಎಸ್. ಜೈಶಂಕರ್

ನ್ಯೂಯಾರ್ಕ್: ಉಗ್ರವಾದವನ್ನು ಜಾಗತಿಕವಾಗಿ ಸಾಮಾನ್ಯೀಕರಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಗುಡುಗಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಜೈಶಂಕರ್ ಅವರು, ನೆರೆರಾಷ್ಟ್ರದ ಮುಖವಾಡವನ್ನು ಜಗತ್ತಿನ ಎದುರು ಕಳಚಿಟ್ಟರು. ಸರಣಿ ಭಯೋತ್ಪಾದನೆ ನಡೆಸುವ ದೇಶದ ಇಂತಹ ಯಾವುದೇ ವಾದಗಳು ಇನ್ನು ಮುಂದೆ ನಡೆಯುವುದಿಲ್ಲ” ಎಂದು ಅವರು ಜಾಗತಿಕ ನಾಯಕರ ಸಮ್ಮುಖದಲ್ಲೇ ಗುಡುಗಿದ್ದಾರೆ.

“ಭಯೋತ್ಪಾದನೆಯ ಪರಿಣಾಮಗಳಿಂದ ತಮಗೆ ರಕ್ಷಣೆ ಇದೆ ಎಂದು ಭಾವಿಸುವ ಉಗ್ರ ಪೋಷಕ ರಾಷ್ಟ್ರಗಳ ಆಟ ಇನ್ನು ಸಾಗದು”, ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತವು ತನ್ನ ಆತ್ಮರಕ್ಷಣೆಯ ಹಕ್ಕನ್ನು ಖಂಡಿತವಾಗಿಯೂ ಮತ್ತು ಬಲವಾಗಿ ಚಲಾಯಿಸಲಿದೆ ಎಂದು ಎಚ್ಚರಿಸಿದರು.

ಉಗ್ರವಾದವನ್ನು ಹರಡುವ ದೇಶವೇ ಮೊದಲು ತನ್ನ ಹಾದಿಯನ್ನು ತಿದ್ದಿಕೊಳ್ಳಬೇಕು ಎಂದು ಅವರು ನೇರ ಸಂದೇಶ ರವಾನಿಸಿದರು.

ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಹಾಗೂ ಭಾರತವು ನೀರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿತ್ತು.

2025ರಲ್ಲಿ ಭಾರತದೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ “ಸಕಾಲಿಕ ಮಧ್ಯಸ್ಥಿಕೆ”ಯನ್ನು ಶ್ಲಾಘಿಸಿದ್ದರು.

ಸುಮಾರು 23 ನಿಮಿಷಗಳ ಭಾಷಣದಲ್ಲಿ ಷರೀಫ್ ಕಾಶ್ಮೀರ ವಿಚಾರವನ್ನೂ ಪ್ರಸ್ತಾಪಿಸಿದ್ದರು. 2025ರಲ್ಲಿ ಉಂಟಾದಂತಹ ಸಂಘರ್ಷದ ಅಂಚಿಗೆ ದಕ್ಷಿಣ ಏಷ್ಯಾ ಮತ್ತೆ ತಲುಪದಂತೆ ಮಾಡಲು ಕಾಶ್ಮೀರ ಸಮಸ್ಯೆಗೆ ನ್ಯಾಯಸಮ್ಮತ ಹಾಗೂ ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದರು.

ಭಯೋತ್ಪಾದನೆಯ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕನ್ನು ನಾವು ಬಳಸಿಕೊಳ್ಳುತ್ತೇವೆ. ಸ್ನೇಹ ಮತ್ತು ಸೌಹಾರ್ದತೆ ಭಯೋತ್ಪಾದನೆಯೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯ ಮೇಲೆ ಆಧಾರಿತವಾಗಿರುವ ಯಾವುದೇ ತಿಳುವಳಿಕೆಗಳನ್ನು ಸಹಜವಾಗಿಯೇ ಮರುಪರಿಶೀಲಿಸಲಾಗುತ್ತದೆ. ಭಯೋತ್ಪಾದನೆಯ ಅಪರಾಧಿಯೇ ತನ್ನ ನಡೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಜೈಶಂಕರ್, ಭಯೋತ್ಪಾದನೆಯನ್ನು ಬೆಳೆಸುತ್ತಾ ಭಾರತದ ಸೌಹಾರ್ದತೆಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಉಗ್ರವಾದ ಮುಂದುವರಿದರೆ ಅದರ ಆಧಾರದ ಮೇಲೆ ಮಾಡಿಕೊಂಡಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳು (ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸೇರಿದಂತೆ) ಸಹಜವಾಗಿಯೇ ಪ್ರಶ್ನೆಗೆ ಒಳಗಾಗುತ್ತವೆ ಎಂದು ಎಚ್ಚರಿಸಿದ್ದಾರೆ.

ನಿರಂತರವಾಗಿ ಭಯೋತ್ಪಾದನೆ ನಡೆಸುವವರು’ ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸಲು ಹಾಗೂ ಅದರ ಪರಿಣಾಮಗಳಿಂದ ವಿನಾಯಿತಿ ಪಡೆಯಲು ಮಾಡುವ ಯಾವುದೇ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ.

ನಿನ್ನೆ ನಿರಂತರವಾಗಿ ಭಯೋತ್ಪಾದನೆ ನಡೆಸುತ್ತಿರುವ ವ್ಯಕ್ತಿಯೊಬ್ಬರು ಈ ಸಭೆಯ ಮುಂದೆ ವಾಸ್ತವಾಂಶಗಳನ್ನು ತಿರುಚಿ ಮಂಡಿಸಿದರು. ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸಲು ಮತ್ತು ಅದರ ಪರಿಣಾಮಗಳಿಂದ ವಿನಾಯಿತಿ ಪಡೆಯಲು ವಾದಗಳನ್ನು ಮಂಡಿಸಲಾಯಿತು. ಅದು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಬೆನ್ನಲ್ಲೇ, ಭಾರತವು ತನ್ನ ‘ರೈಟ್ ಆಫ್ ರಿಪ್ಲೈ’ (ಪ್ರತ್ಯುತ್ತರ ನೀಡುವ ಹಕ್ಕು) ಚಲಾಯಿಸಿ ತಕ್ಕ ಶಾಸ್ತಿ ಮಾಡಿದೆ.

ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆಯೇ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ಜೈಶಂಕರ್, “ಸ್ನೇಹ ಮತ್ತು ಸೌಹಾರ್ದತೆ ಎಂದಿಗೂ ಭಯೋತ್ಪಾದನೆಯೊಂದಿಗೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಗಡಿಯಾಚೆಗಿನ ಉಗ್ರವಾದವನ್ನು ದೇಶದ ನೀತಿಯನ್ನಾಗಿ ಮಾಡಿಕೊಂಡಿರುವ ಸರ್ಕಾರಗಳು ಜಾಗತಿಕ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಅಂತಹ ದೇಶಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಣೆಗಾರರನ್ನಾಗಿ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post