ರಾಷ್ಟ್ರೀಯ ವನ್ಯಜೀವಿಗಳ ದಿನ-ವನ್ಯಜೀವಿ ಸಂರಕ್ಷಣೆ ಇದು ದಯೆಯಲ್ಲ, ನಮ್ಮ ಸಾಂವಿಧಾನಿಕ ಜವಾಬ್ದಾರಿ

ಇಂದು ಸೆಪ್ಟೆಂಬರ್ 4, ರಾಷ್ಟ್ರೀಯ ವನ್ಯಜೀವಿಗಳ ದಿನ.“ವನ್ಯಜೀವಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಅವುಗಳ ಉಳಿವಿನಲ್ಲೇ ಪ್ರಕೃತಿಯ ಉಳಿವು.”ಇದು ಕೇವಲ ಘೋಷಣೆಯಲ್ಲ, ಇದು ಭಾರತದ ಸಂವಿಧಾನ ಮತ್ತು ಕಾನೂನು ಹೇಳುವ ಕಡ್ಡಾಯ ಜವಾಬ್ದಾರಿ. ರಾಷ್ಟ್ರೀಯ ವನ್ಯಜೀವಿಗಳ ದಿನವನ್ನು (National Wildlife Day) ಪ್ರತಿ ವರ್ಷ ಸೆಪ್ಟೆಂಬರ್ 4 ರಂದು ಆಚರಿಸಲಾಗುತ್ತದೆ. ಇದನ್ನು 2005 ರಲ್ಲಿ ಅಮೆರಿಕದ ಪ್ರಾಣಿ ನಡವಳಿಕೆ ತಜ್ಞೆ ಕಾಲೀನ್ ಪೈಗ್ ಸ್ಥಾಪಿಸಿದರು. 2006 ರಲ್ಲಿ “ಮೊಸಳೆ ಬೇಟೆಗಾರ” ಖ್ಯಾತಿಯ ವನ್ಯಜೀವಿ ಸಂರಕ್ಷಕ ಸ್ಟೀವ್ ಇರ್ವಿನ್ ಮೃತಪಟ್ಟ […]
ಕೂಡಲಸಂಗಮಕ್ಕೆ ಸಿಎಂ ಡಿಕೆಶಿ ಎಂಟ್ರಿ- ವಿಶೇಷ ಪೂಜೆ ಜತೆ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಣೆ

ಬಾಗಲಕೋಟೆ: ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮದ ಸಂಗಮನಾಥ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ನಂತರ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಭೆಯಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದು ಅಧಿಕಾರಿಗಳು ಸಹ ಭಾಗವಹಿಸಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ್ ಕಾಶಪ್ಪನವರ್ ಹಾಗೂ ಕುಟುಂಬಸ್ಥರು ಸಿಎಂಗೆ ಬಸವಣ್ಣನವರ ಬೆಳ್ಳಿ ಮೂರ್ತಿ ಹಾಗೂ ಬೆಳ್ಳಿ ಗಧೆ ನೀಡಿ ಗೌರವಿಸಿದರು. ಹಣೆಗೆ ವಿಭೂತಿ ಧರಿಸಿ ಶರಣರಂತೆ ಸಂಗಮನಾಥ ದೇಗುಲದಲ್ಲಿ ಸಿಎಂ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಣೆ […]
ಚೀನಾ ವಿಚಾರದಲ್ಲಿ ಭಾರತ ಮೊದಲೇ ಎಚ್ಚರಿಸಿತ್ತು ಆದರೆ ನಾವು ಕೇಳಲಿಲ್ಲ : ಬೆಲ್ಜಿಯಂ ಪ್ರಧಾನಿ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ವಸ್ತುಗಳ ಆಕರ್ಷಣೆಗೆ ಮರುಳಾಗಿ ಒಂದು ದೇಶದ ಮೇಲೆ ಅತಿಯಾಗಿ ಅವಲಂಬಿತವಾದರೆ ಎದುರಾಗುವ ಅಪಾಯವೆಷ್ಟು ಎಂಬುದಕ್ಕೆ ಇಡೀ ಯುರೋಪ್ ಈಗ ಸಾಕ್ಷಿಯಾಗಿದೆ ಎಂದು ಬೆಲ್ಜಿಯಂ ಪ್ರಧಾನಿ ಹೇಳಿದ್ದಾರೆ. ಹಲವು ವರ್ಷಗಳ ಹಿಂದೆಯೇ ಭಾರತ ಈ ಸಂಭಾವ್ಯ ಅಪಾಯದ ಬಗ್ಗೆ ಇಡೀ ಜಗತ್ತಿಗೆ ಮುನ್ಸೂಚನೆ ನೀಡಿತ್ತು. ಆದರೆ ಅಂದು ಭಾರತದ ಮಾತನ್ನು ಗಂಭೀರವಾಗಿ ಪರಿಗಣಿಸದ ಈ ರಾಷ್ಟ್ರಗಳು, ಇಂದು ಎದುರಾಗಿರುವ ಬಿಕ್ಕಟ್ಟಿಗೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಾ ಭಾರತದ ದೂರದೃಷ್ಟಿಯನ್ನು ಬಹಿರಂಗವಾಗಿಯೇ ಮುಕ್ತಕಂಠದಿಂದ ಶ್ಲಾಘಿಸುತ್ತಿವೆ. ನವದೆಹಲಿಯಲ್ಲಿ […]
ರಾಜತಾಂತ್ರಿಕತೆ ಮತ್ತು ಮಾತುಕತೆಗಳು ಶಾಂತಿಗೆ ಏಕೈಕ ಮಾರ್ಗ : ಜೈಶಂಕರ್

ನವದೆಹಲಿ: ಐದನೇ ವರ್ಷಕ್ಕೆ ಕಾಲಿಟ್ಟಿರುವ ರಷ್ಯಾ-ಯುಕ್ರೇನ್ ಸಂಘರ್ಷವನ್ನು ರಷ್ಯಾದ ತೈಲ, ಲೋಹಗಳು, ಖನಿಜಗಳು ಅಥವಾ ರಸಗೊಬ್ಬರ ಖರೀದಿಗೆ ಸಂಬಂಧಿಸಿದಂತೆ ದೇಶಗಳ ಮೇಲೆ ಒತ್ತಡ ಹೇರುವ ಮೂಲಕ ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಕೈವ್‌ಗೆ ಭೇಟಿ ನೀಡಿ, ಯುಕ್ರೇನಿಯನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಅವರೊಂದಿಗೆ ಮಾತುಕತೆ ನಡೆಸಿ ನಂತರ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.ರಾಜತಾಂತ್ರಿಕತೆ ಮತ್ತು ಮಾತುಕತೆಗಳು ಶಾಂತಿಗೆ ಏಕೈಕ ಮಾರ್ಗ ಎಂದು ಅವರು […]
ತೆರವುಗೊಳಿಸಿರುವ ಫುಟ್‌ಪಾತ್‌ಗಳನ್ನು ನಿಯಮಿತವಾಗಿ ಹಾಗೂ ಅನಿರೀಕ್ಷಿತವಾಗಿ ಪರಿಶೀಲಿಸಬೇಕು’; ಕೃಷ್ಣ ಬೈರೇಗೌಡ

ಬೆಂಗಳೂರು: ತೆರವುಗೊಳಿಸಿರುವ ಫುಟ್‌ಪಾತ್‌ಗಳನ್ನು ನಿಯಮಿತವಾಗಿ ಹಾಗೂ ಅನಿರೀಕ್ಷಿತವಾಗಿ ಪರಿಶೀಲಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಬೆಂಗಳೂರಿನ ವಿವಿಧೆಡೆ ಈಗಾಗಲೇ ತೆರವುಗೊಳಿಸಿರುವ ಫುಟ್‌ಪಾತ್‌ಗಳಲ್ಲಿ ಮತ್ತೆ ಒತ್ತುವರಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮರುಒತ್ತುವರಿ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು Greater Bengaluru Development ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳನ್ನೊಳಗೊಂಡ ಜಂಟಿ ಟಾಸ್ಕ್‌ಫೋರ್ಸ್ ಇರಬೇಕು. ತೆರವುಗೊಳಿಸಿರುವ ಫುಟ್‌ಪಾತ್‌ಗಳನ್ನು ನಿಯಮಿತವಾಗಿ ಹಾಗೂ […]
Santosh Lad : ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ನಮ್ಮ ದೇಶದ ಕ್ಯಾಪಿಟಲ್ ಇನ್‌ಕಮ್ ಕಡಿಮೆ ಇದೆ – ಸಂತೋಷ್ ಲಾಡ್

ಬೆಂಗಳೂರು : ಭಾರತದ ಜಿಡಿಪಿ 7.8% ಬೆಳವಣಿಗೆ ಅನ್ನೋದೆ ಬೋಗಸ್,ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ನಮ್ಮ ದೇಶದ ಕ್ಯಾಪಿಟಲ್ ಇನ್‌ಕಮ್ ಕಡಿಮೆ ಇದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದೇಶಿ ನೇರ ಹೂಡಿಕೆ ಹಣ ದೇಶಕ್ಕೆ ಬರುತ್ತಿಲ್ಲ. ಹೇಗೆ ಲೆಕ್ಕಾಚಾರ ಮಾಡಿದ್ದೀರಿ. ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ನಮ್ಮ ದೇಶದ ಕ್ಯಾಪಿಟಲ್ ಇನ್‌ಕಮ್ ಕಡಿಮೆ ಇದೆ. ನಮ್ಮ ಕರೆನ್ಸಿ ವೀಕ್ ಇದೆ ಎಂದು ಅರೋಪ ಮಾಡಿದರು. ಇವರು ಜಿಡಿಪಿ ಘೋಷಣೆ ಮಾಡಿದ ಕೂಡಲೇ 6 […]
ಭಾರತ ಮತ್ತು ಇರಾನ್ ನಡುವೆ ವ್ಯಾಪಾರ ಒಪ್ಪಂದವಿದೆ ಎಂದು ನನಗನಿಸುವುದಿಲ್ಲ : ಮಾರ್ಕೊ ರೂಬಿಯೊ

ವಾಷಿಂಗ್ಟನ್: ಭಾರತ ಮತ್ತು ಇರಾನ್ ನಡುವೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂದು ತಮಗೆ ಅನಿಸುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಿದ್ದ ಕುರಿತು ‘ಫಾಕ್ಸ್ ನ್ಯೂಸ್ ರೇಡಿಯೊ’ದ ‘ದಿ ಬ್ರಯಾನ್ ಕಿಲ್ಮೀಡ್ ಶೋ’ನಲ್ಲಿ ಕೇಳಿದ ಪ್ರಶ್ನೆಗೆ ರೂಬಿಯೊ ಪ್ರತಿಕ್ರಿಯಿಸಿದ್ದಾರೆ. ಜಗತ್ತಿನ ಹಲವು ದೇಶಗಳು ಇರಾನ್ ಆಡಳಿತದೊಂದಿಗೆ ಮಾತುಕತೆ ನಡೆಸುತ್ತಿವೆ […]
ಮೇ 2023ರಿಂದ ಮಣಿಪುರ ಹಿಂಸಾಚಾರದಲ್ಲಿ 306 ಮಂದಿ ಸಾವು, 49 ಮಂದಿ ನಾಪತ್ತೆ : ಗೋವಿಂದಾಸ್ ಕೊಂಥೌಜಮ್

ಇಂಫಾಲ್: 2023ರ ಮೇ ತಿಂಗಳಲ್ಲಿ ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 306 ಮಂದಿ ಮೃತಪಟ್ಟಿದ್ದು, ಇನ್ನೂ 49 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಣಿಪುರ ಗೃಹ ಸಚಿವ ಗೋವಿಂದಾಸ್ ಕೊಂಥೌಜಮ್ ವಿಧಾನಸಭೆಗೆ ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇಂದು ಬಿಜೆಪಿ ಶಾಸಕ ಸಪಮ್ ರಂಜನ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, 2023ರ ಮೇ 3ರಂದು ಹಿಂಸಾಚಾರ ಆರಂಭವಾದ ಬಳಿಕ, ಮೊನ್ನೆ ಆಗಸ್ಟ್ 31ರ ವೇಳೆಗೆ 306 ಮಂದಿ ಮೃತಪಟ್ಟಿದ್ದಾರೆ. ಇನ್ನೂ […]
ಶಿಕ್ಷಣವು ಕೇವಲ ಸವಲತ್ತಲ್ಲ, ಬದಲಾಗಿ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕಾಗಿದೆ : ರಾಹುಲ್ ಗಾಂಧಿ

ನವದೆಹಲಿ: ಶಿಕ್ಷಣವು ಕೇವಲ ಸವಲತ್ತಲ್ಲ, ಬದಲಾಗಿ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ವ್ಯವಸ್ಥೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂದಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ನಿಯೋಗವೊಂದನ್ನು ಅವರು ಭೇಟಿಯಾಗಿದ್ದಾರೆ. ನಾಸಿಕ್ ಭೇಟಿಯ ವೇಳೆ ಬುಡಕಟ್ಟು ವಿದ್ಯಾರ್ಥಿಗಳ ನಿಯೋಗವನ್ನು ಭೇಟಿ ಮಾಡಿದ್ದು, ಅವರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸಿರುವುದಾಗಿ ಅವರು […]
ನ್ಯಾಯ ಎಲ್ಲಿದೆ? ಗ್ಯಾರಂಟಿಗಳು ಎಲ್ಲಿವೆ? ಆಡಳಿತ ಎಲ್ಲಿದೆ? ಭಾರತಕ್ಕೆ ಉತ್ತರಿಸಿ: ಕೈ ಸರ್ಕಾರದ ವಿರುದ್ಧ ಅಶೋಕ್ ಗರಂ

ಬೆಂಗಳೂರು: ‘ನ್ಯಾಯ’ದ ಬಗ್ಗೆ ಉಪದೇಶ ನೀಡುವ ಪಕ್ಷಕ್ಕೆ ಒಂದು ಸುರಕ್ಷಿತ ತರಗತಿಯನ್ನು ಖಾತರಿಪಡಿಸಲು ಆಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಶಾಲಾ ಮೇಲ್ಛಾವಣಿ ಕುಸಿತ ಪ್ರಕರಣ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು,ಗ್ಯಾರಂಟಿಗಳ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಮಕ್ಕಳ ತಲೆಯ ಮೇಲಿನ ಶಾಲೆಯ ಮೇಲ್ಛಾವಣಿಯನ್ನೇ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ. ರಾಹುಲ್ ಗಾಂಧಿ ಅವರೇ, ವೇದಿಕೆಯನ್ನು ಮರೆತುಬಿಡಿ. ಘೋಷಣೆಗಳನ್ನು ಮರೆತುಬಿಡಿ. ಸಿದ್ಧಪಡಿಸಿದ ಭಾಷಣಗಳನ್ನು ಬದಿಗಿಡಿ ಎಂದರುʻ ಕರ್ನಾಟಕಕ್ಕೆ ಬನ್ನಿ. […]