ಪ್ರಸ್ತುತ ಸಮಾಜದಲ್ಲಿ ನಮ್ಮ ಯುವಕರು ಸಮಸ್ಯೆಗಳ ಸಂಸಾರದಲ್ಲಿ ಕಾರ್ಯನಿರತರಾಗಿದ್ದಾರೆ, ಅವರ ವ್ಯಯಕ್ತಿಕ ಜೀವನದ ಬಗ್ಗೆ ಗಮನವಿಲ್ಲದೆ, ಸಂಪಾದನೆಗಾಗಿ ಹಗಲು ರಾತ್ರಿ ಯೋಚಿಸುತ್ತಲೇ ಇರುತ್ತಾರೆ. ಇದಕ್ಕೆ ಕಾರಣ ಏನು? ಇಲ್ಲಿದೆ ನೋಡಿ
ಎಲ್ಲರಂತೆ ನಾವು ಸಂತಸದಿಂದ,ಸುಖದಿಂದ ಬದುಕಬೇಕು ಎನ್ನುವ ಅತಿಯಾದ ವ್ಯಾಮೋಹ, ಯಾರೋ ಒಬ್ಬರು ಕಾರ್ ತಂಗೊಂಡ್ರೆ ಆ ರೀತಿಯ ಕಾರ್ ನಾನು ತಗೆದುಕೊಳ್ಳಬೇಕು ಎನ್ನುವಂತೆ. ಈ ರೀತಿ ಸಹ ಬದಲಾಯಿಸಿಕೊಂಡರೆ, ನಮ್ಮ ಬದುಕು ಬಂಗಾರದಂತೆ ಇರುತ್ತದೆ ಅಲ್ಲವೇ? ಹೌದು ಜೀವನ ಕೆಲವೊಮ್ಮೆ ಯಾವ ಕಡೆಗೆ ಕರೆದುಕೊಂಡು ಹೋಗಬೇಕು ಅತ್ತ ಸಾಗುತ್ತಲೇ ಇರುತ್ತದೆ. ಇದು ಅನಿವಾರ್ಯ ಇದನ್ನು ಬದಲಾಯಿಸಲು ತುಂಬಾ ಕಷ್ಟ. ಸದ್ಯಕ್ಕೆ ನಮ್ಮ ವ್ಯವಸ್ತೆ ಹೇಗಿದೆ ಅಂದ್ರೆ ರಾಜನ ಮಗ ರಾಜನೇ, ಸಮಾನ್ಯನೂ ಸಮಾನವಾಗಿಯೇ ಇದ್ದು ಬಿಡುತ್ತಾರೆ.
ಉನ್ನತ ಶಿಕ್ಷಣ ಪಡೆದರು ನಾವುಗಳು ವೃತ್ತಿಯ ಆರಂಭದಲ್ಲಿ ೧೫೦೦೦ ಸಾವಿರ ಸಂಬಳವನ್ನು ತೆಗೆದುಕೊಳ್ಳುತ್ತೇವೆ. ಆ ವೃತ್ತಿಯಲ್ಲಿರುವ ಒತ್ತಡಕ್ಕೆ ಮನಿದು ಅರ್ಧ ಆಯಸ್ಸನ್ನು ಕಳೆದುಕೊಳ್ಳುತ್ತೇವೆ. ಇತ್ತ ಸ್ವಂತ ಉದ್ಯೋಗ ಆರಂಭಿಸೋಣ ಅಂದ್ರೆ ಸಾಮನ್ಯರ ಹತ್ತಿರ ಸಂಪತ್ತು ಎಲ್ಲಿ ಬರುತ್ತೇ ಎನ್ನುವ ಪ್ರಶ್ನೆ? ಇದೇ ರೀತಿ ನಮ್ಮ ಯೋಚನೆಯಲ್ಲಿಯೇ ನಮ್ಮ ಆಯಸ್ಸು ಮರೆಯಾಗುತ್ತಾ ಇದೆ.
ಬರಿಗಾಲಲ್ಲಿ ಓಡಾಡಿದ ಮಾನವ ಇವತ್ತು ಕಾರ್ ಬೇಕೇ ಬೇಕು ಎನ್ನುತ್ತಾನೆ ಅಂದ್ರೆ ಅದು ಬಯಕೆ ಅಲ್ಲವೇ? ಸರಳವಾಗಿ, ಸುಂದವಾಗಿ ಯಾರ ಹೊಲಿಕೆ ಇಲ್ಲದೇ ಬದುಕುವುದನ್ನು ನಾವು ಅಭ್ಯಾಸ ಮಾಡಬೇಕಿದೆ. ೩೦೦೦೦ ಸಾವಿರ ಸಂಬಳಕ್ಕೆ ಒತ್ತಡಕ್ಕೆ ಹೋಗುತ್ತೇವೆ. ನಂತರ ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ. ಹೀಗಿರುವಾಗ ೩೦೦೦ ಸಾವಿರ ಸಂಬಳದಲ್ಲಿ ನೆಮ್ಮದಿ ಕಂಡುಕೊಳ್ಳುವುದು ಉತ್ತಮ ಅಲ್ಲವೇ?
ಶಿಕ್ಷಣ ಬದುಕಿಗೆ ಒಳ್ಳೆಯ ಅರ್ಥ ನೀಡುತ್ತದೆ ಆದ್ರೆ ಓದು ನಮಗೆ ಊಟ ಹಾಕಬೇಕು, ಉದ್ಯೋಗ ಕೊಡಬೇಕು ಎನ್ನುವುದು ಒಂದು ಕಡೆ ನಮ್ಮ ದಡ್ಡತನ ಕಾರಣವಾಗಿದೆ. ಹೌದು ಕಾಯಕ ಯಾವೂದಾರೇನು ಅದರಲ್ಲಿ ನೆಮ್ಮದಿ ಇದ್ದರೆ ಸಾಕಲ್ಲವೇ? ಅಧಿಕಾರಿಗಳ ಅಟ್ಟಹಾಸಕ್ಕೆ ನಮ್ಮ ಓದು ಒಂದೊಮ್ಮೆ ಬ್ರೇಕ್ ಹಾಕುತ್ತದೆ. ನ್ಯಾಯ,ಸತ್ಯದ ಪರವಾಗಿ ಮಾತನಾಡಲು ಕಲಿಸುತ್ತದೆ. ಎಲ್ಲ ಕಷ್ಟಗಳಿಗೂ ನಮ್ಮಲ್ಲಿಯೇ ಪರಿಹಾರ ಇರುತ್ತದೆ. ಆದ್ರೆ ಈ ಕಷ್ಟಕ್ಕೆ ಹೆದರಿ ನಮ್ಮನ್ನು ನಾನು ಮರೆತು ಕಿನ್ನತೆಗೆ ಒಳಗಾಗುವುದು ತಪ್ಪಲ್ಲವೇ? ಸಣ್ಣ ಪುಟ್ಟ ವಿಚಾರದಲ್ಲಿ ನಿಮ್ಮ ಸಂತೋಷವನ್ನು ಕಂಡುಕೊಳ್ಳಿ, ಪ್ರೀಯ ಯುವಕರೇ ಇವತ್ತು ನಾವು ವಾಸ್ತವ ಅರಿತು ಅಪ್ಪ-ಅಮ್ಮನೊಂದಿಗೆ ನೆಮ್ಮದಿಯಾಗಿ ಬಾಳಬೇಕಿದೆ…….
ನಿಮ್ಮ ಸಮಾಧಾನಕ್ಕಾಗಿ ನಮ್ಮ ಕನ್ನಡ ಪಾಕೆಟ್ ವೆಬ್ ಸೈಟ್‌ನಲ್ಲಿ ಬರುವ ವಿಶೇಷ ಲೇಖನಗಳನ್ನು ಓದುತ್ತಾ ಇರಿ.. ಇದು ನಿಮಗಾಗಿ





