ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಜೂನ್ 13, 2026 ರಿಂದ ರಾಜ್ಯದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣಾ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ.
2 ದಿನಗಳಲ್ಲಿ ವಿತರಣೆಯಾದ ಪಾಸ್ ವಿವರ
| ಸಾರಿಗೆ ಸಂಸ್ಥೆ (RTC) | 12-06-2026 | 13-06-2026 | ಒಟ್ಟು ಪಾಸ್ |
| KSRTC | 350 | 510 | 860 |
| BMTC | 0 | 268 | 268 |
| KKRTC | 146 | 495 | 641 |
| NWKRTC | 325 | 670 | 995 |
| Total | 821 | 1943 | 2764 |
BMTC ಆರಂಭ: ಬೆಂಗಳೂರಿನಲ್ಲಿ ಜೂನ್ 12 ಯಾವುದೇ ಪಾಸ್ ವಿತರಣೆಯಾಗಿರಲಿಲ್ಲ. ಆದರೆ, ಇಂದಿನಿಂದ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ 268 ವಿದ್ಯಾರ್ಥಿಗಳು ಪಾಸ್ ತೆಗೆದುಕೊಂಡಿದ್ದಾರೆ.
NWKRTC ಮುಂಚೂಣಿಯಲ್ಲಿ: ವಾಯುವ್ಯ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 995 ಪಾಸ್‌ಗಳನ್ನು ವಿತರಿಸಲಾಗಿದ್ದು, ಇಂದೊಂದೇ ದಿನ ದಾಖಲೆ 670 ಪಾಸ್ ವಿತರಿಸಲಾಗಿದೆ.
ವಿದ್ಯಾರ್ಥಿಗಳು ಶಾಲಾ/ಕಾಲೇಜಿನ ಗುರುತಿನ ಚೀಟಿ, ಅಗತ್ಯ ದಾಖಲೆ ನೀಡಿ ಆಯಾ ನಿಗಮಗಳ ಕೌಂಟರ್‌ಗಳು ಅಥವಾ ನಿಗದಿಪಡಿಸಿದ ಆನ್‌ಲೈನ್ ಪೋರ್ಟಲ್ ಮೂಲಕ ಉಚಿತ ಪಾಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.





