‌ಸಾಂಸ್ಕೃತಿಕ ನಗರಿಗೆ ದಸರಾ ಕಳೆ: ಹಸಿರು ಸೀರೆಯಲ್ಲಿ ಕಣ್ಮನ ಸೆಳೆದ ತಾಯಿ ಚಾಮುಂಡೇಶ್ವರಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ವಿಜಯದಶಮಿಯ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ನಾಡದೇವತೆ ಚಾಮುಂಡೇಶ್ವರಿ ದೇವಿ ಹಸಿರು ಬಣ್ಣದ ವಿಶೇಷ ಮೈಸೂರು ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಅರಮನೆಗೆ ಆಗಮಿಸಿರುವ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಇಂದು ಸಂಜೆ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಗಜಪಯಣದ ಅಂಬಾರಿ ಉತ್ಸವ ಜರುಗಲಿದೆ.

ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ. ಹಸಿರು ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸಿದ್ದಾಳೆ. ಚಿನ್ನದಂಬಾರಿ ಹೊರಲು ಕ್ಯಾಪ್ಟನ್‌ ಪ್ರಶಾಂತ ಸಿದ್ಧನಾಗಿದ್ದಾನೆ.

ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ತೆರೆದ ವಿಶೇಷ ವಾಹನದಲ್ಲಿ ಮೆರವಣಿಗೆ ಹೊರಟಿದೆ. ಮಂಗಳವಾದ್ಯದೊಂದಿಗೆ ಅರಮನೆ ವರೆಗೆ ಉತ್ಸವ ಮೂರ್ತಿ ಮೆರವಣಿಗೆ ಸಾಗಿದೆ. ಭಕ್ತರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ತಾಯಿಯ ದರ್ಶನ ಪಡೆದರು.

ಜಂಬೂಸವಾರಿ ಮೆರವಣಿಗೆಯಲ್ಲಿ 13 ಆನೆಗಳ ಪೈಕಿ 12 ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಈ ಬಾರಿ ಧನಂಜಯನಿಗೆ ಮೆರವಣಿಗೆಯಿಂದ ಕೊಕ್ ನೀಡಲಾಗಿದೆ. ಅಭಿಮನ್ಯು ನಿಶಾನೆ ಆನೆ ಜವಾಬ್ದಾರಿ ನಿರ್ವಹಿಸಲಿದ್ದಾನೆ. ಲಕ್ಷ್ಮಿ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಮೆರವಣಿಗೆಯಲ್ಲಿ ಸಾಗಲಿವೆ. ಗೋಪಿ – ನೌಪತ್ ಆನೆ ಹಾಗೂ ಶ್ರೀಕಂಠ , ಏಕಲವ್ಯ, ಮಹೇಂದ್ರ, ಸುಗ್ರೀವ, ಶ್ರೀರಾಮ, ರೂಪಾ, ಮತ್ತು ಚೈತ್ರಾ ಸಾಲಾನೆಗಳಾಗಿವೆ.

ಜಂಬೂಸವಾರಿ ಮೆರವಣಿಗೆಗೆ ಕ್ಯಾಪ್ಟನ್‌ ಪ್ರಶಾಂತ ನೇತೃತ್ವದಲ್ಲಿ ಆನೆಗಳು ಸಹ ಸಿದ್ಧವಾಗುತ್ತಿವೆ. ಆನೆಗಳಿಗೆ ಬಣ್ಣ ಬಣ್ಣದ ಚಿತ್ತಾರಗಳಿಂದ ಅಲಂಕಾರ ಮಾಡಲಾಗುತ್ತಿದೆ. ಕಲಾವಿದ ನಾಗಲಿಂಗ ಸ್ವಾಮಿ‌ ನೇತೃತ್ವದ ತಂಡ ಚಿತ್ತಾರ ಕಾರ್ಯ ಮಾಡುತ್ತಿದೆ. ಕಳೆದ 18 ವರ್ಷಗಳಿಂದ ಜಂಬೂಸವಾರಿಯಲ್ಲಿ ಪ್ರಶಾಂತ ಆನೆ ಭಾಗವಹಿಸುತ್ತಿದೆ. ಇದೇ ಮೊದಲ ಬಾರಿಗೆ ಚಿನ್ನದಂಬಾರಿ ಹೊರುವ ಜವಾಬ್ದಾರಿ ಸಿಕ್ಕಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post