‘29’ movie review: ಲವ್‌ ಸೈಡ್‌ ಅಲ್ಲಿ ಇಟ್ಟು ಸಾಧನೆ ಮಾಡು

ಸಿನಿ ಲೋಕದಲ್ಲಿ ಸಾಕಷ್ಟು ಚಿತ್ರಗಳು ಬಂದು ಹೋಗುತ್ತವೆ. ಕೆಲ ಮೂವಿಗಳು ಮನಸ್ಸಿನಲ್ಲಿ ಉಳಿದರೆ, ಇನ್ನು ಕೆಲ ಚಿತ್ರಗಳು ಸದ್ದಿಲ್ಲದೆ ಮರೆಯಾಗುತ್ತವೆ. ಇತ್ತೀಚಿಗೆ ತಮಿಳು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸೌಂಡ್‌ ಮಾಡುತ್ತಿದೆ. ಹೌದು, 29 ಎಂಬ ತಮಿಳು ಸಿನೆಮಾ ಯುವಕರ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಚಿತ್ರದಲ್ಲಿ ರತ್ನ ಕುಮಾರ್‌, ಪ್ರೀತಿ ಅಸ್ರಾಣಿ ಎನ್ನುವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರೇಮ ಕಥೆ ಇದೆ. ಆಫೀಸ್‌ಯೊಂದರಲ್ಲಿ ನಾಯಕ ಕೆಲಸ ಮಾಡುತ್ತಾ ಇರುತ್ತಾನೆ ಈ ಆಫೀಸ್‌ ಗೆ ಹೊಸದಾಗಿ ನಾಯಕಿ ಎಂಟ್ರಿ ನೀಡುತ್ತಾಳೆ.

ನಾಯಕನಿಗೆ 29 ವಯಸ್ಸು, ಈ ವಯಸ್ಸಿನಲ್ಲಿ ಈತನಿಗೆ ಅವಮಾನ ಮದುವೆ ಆಗಿಲ್ಲ ಎನ್ನುವ ಕಿರಿ ಕಿರಿ ಮಾತುಗಳು ಕೇಕೆ ಹಾಕುತ್ತಿರುತ್ತವೆ. ಈ ನಾಯಕನೂ ಸಹ ನನ್ನನ್ನೂ ಯಾರು ಪ್ರೇಮಿಸಲು ಆಗಲ್ಲ ಎನ್ನುವ ಭಾವನೆ ಹೊಂದಿರುತ್ತಾರೆ. ಈ ಸಮಯದಲ್ಲಿಯೇ ನಾಯಕಿ ಎಂಟ್ರಿ ಆಗುತ್ತಾಳೆ, ಹೌದು ಈ ಚಿತ್ರದಲ್ಲಿ ನಾಯಕಿಯೇ ಮೊದಲು ಪ್ರೇಮದ ವಿಚಾರ ನಾಯಕನಿಗೆ ವ್ಯಕ್ತಪಡಿಸುತ್ತಾಳೆ. ಇಬ್ಬರ ನಡುವೆ ಪ್ರೀತಿ ಜೋರಾಗಿ ನಡೆಯುತ್ತಾ ಇರುತ್ತೆ .ಆದ್ರೆ ಇದರಲ್ಲಿ ನಟಿಗೆ ಐ ಎ ಎಸ್‌ ಆಗಬೇಕು ಎನ್ನುವ ಬಾಲ್ಯದ ಕನಸು, ಈ ಕನಸಿಗೆ ಕಾವಾಲಾಗಿ ಆಕೆಯ ಅಮ್ಮ ನಿಂತಿರುತ್ತಾಳೆ. ಆದ್ರೆ ಇತ್ತ ನಾಯಕನಿಗೆ ಅವಳನ್ನು ಪ್ರೀತಿಸುವುದು ದೊಡ್ಡ ಕಾಯಕವಾಗಿರುತ್ತದೆ. ಹೀಗಿರುವಾಗ ಒಂದು ದಿನ ನಾಯಕಿ ತನ್ನ ಪ್ರೇಮಿಯ ಮನೆಗೆ ಧೀಡಿರ್‌ ಭೇಟಿ ನೀಡುತ್ತಾಳೆ. ನಂತರ ಅಲ್ಲಿ ಆತನ ಸ್ನೇಹಿತ ಕುಡಿಯುತ್ತಾ ಇರುತ್ತಾನೆ ಇತ್ತ ಹಿರೋ ಅವನೊಟ್ಟಿಗೆ ಮಾತನಾಡುತ್ತಾ ಇರುತ್ತಾನೆ. ಇಲ್ಲಿ ಹೀರೋನ ಸ್ನೇಹಿತ ಕುಡಿತ ಮತ್ತಿನಲ್ಲಿ ಈ ಪ್ರೇಮ ಎನ್ನುವುದು ಆರಂಭದಲ್ಲಿ ಮಾತ್ರ ಸೂಪರ್‌ ಸಿಸ್ಟರ್‌ ನಂತರ, ದುಡ್ಡು ಇದ್ರೆ ಎಲ್ಲ ಚೆನ್ನಾಗಿ ಇರುತ್ತೆ ಎನ್ನುತ್ತಾನೆ. ಈ ಮಾತಿನಿಂದ ಅವಳು ಸ್ವಲ್ಪ ಡಿಸ್ಟರರ್ಬ್‌ ಆಗುತ್ತಾಳೆ..

ಆದರೂ ಇವರು ಪ್ರೀತಿ ಚೆನ್ನಾಗಿ ಇರುತ್ತದೆ. ಇವಳು ಕಂಪನಿ ಕೆಲಸ ಬಿಟ್ಟು ಐ ಎ ಎಸ್‌ ಆ ಪರೀಕ್ಷೆಗೆ ತಯಾರಿ ನಡೆಸುತ್ತಾಳೆ, ಇತ್ತ ನಾಯಕನಿಗೆ ಸಿಂಗಲ್‌ ಫೀಲ್‌ ಕಾಡಲು ಪ್ರಾರಂಭಿಸುತ್ತದೆ. ಇದೆ ವಿಚಾರಕ್ಕಾಗಿ ಇಬ್ಬರಿಗೂ ಮಾತಿನ ಚಕಮಕಿಯಾಗಿ ಮೌನವಾಗಿ ಉಳಿಯುತ್ತಾರೆ. ಆಗ ನಾಯಕಿ ತನ್ನ ನಾಯಕನಿಗೆ ಹೇಳುತ್ತಾಳೆ. ನೋಡು ನಿನ್ನ ಗುರಿ ನಾನು ಅಲ್ಲ ನೀನು ಏನಾದ್ರೂ ಸಾಧನೆ ಮಾಡು ಎನ್ನುತ್ತಾಳೆ. ಈ ಮಾತು ನಾಯಕನಿಗೆ ಬೇಸರ ನೀಡುತ್ತದೆ..

ಕೊನೆಯಲ್ಲಿ ಇಬ್ಬರು ದೂರ ಆಗುತ್ತಾರೆ,ಆದರೇ ಇಲ್ಲಿ ನಾಯಕ ಕೆಲಸ ಬಿಟ್ಟು ತನ್ನ ಹುಟ್ಟೂರಿಗೆ ಹೋಗಿ ರೈತರೊಟ್ಟಿಗೆ ಪ್ರತಿಭಟನೆ ಮಾಡುತ್ತಾನೆ, ಸಮಾಜ ಸೇವೆ ಮಾಡುವಲ್ಲಿ ಬಿಜಿ ಆಗುತ್ತಾನೆ. ಇತ್ತ ನಾಯಕಿಯೂ ಪರೀಕ್ಷೆ ತಯಾರಿ ಮಾಡುತ್ತಾಳೆ ಮುಂದೆ ನಾಯಕನ್ನು ಸಂಚು ಮಾಡಿ ಜೈಲ್‌ಗೆ ತಳ್ಳಲಾಗುತ್ತದೆ. ಯಾವೊದು ಒಂದು ವಿಚಾರ ಮಾತು ಬಿಟ್ಟ ನಾಯಕನ ತಾಯಿ ಇಲ್ಲಿ ನಾಯಕನೊಟ್ಟಿಗೆ ಮಾತನಾಡಲು ಪ್ರಾರಂಭಿಸುತ್ತಾಳೆ. ತಾಯಿ-ಮಗ ಮಾತು ಮನತಟ್ಟುವಂತೆ ಇದೆ. ನಂತರ ನಾಯಕ ಜೈಲ್‌ನಲ್ಲಿರುವ ವಿಚಾರ ಸುದ್ದಿಯಲ್ಲಿ ಸದ್ದು ಮಾಡುತ್ತದೆ. ಇದನ್ನು ನೋಡಿದ ನಾಯಕಿ ಕುಸಿದು ಬಿದ್ದು, ತನ್ನ ಅಮ್ಮನಿಗೆ ಹೇಳುತ್ತಾಳೆ ನನಗೆ ಓದಲು ಆಗುತ್ತಿಲ್ಲ ಅಮ್ಮ ಎಂದು ತನ್ನ ಪ್ರೇಮದ ವಿಚಾರ ಹೇಳುತ್ತಾಳೆ. ಇಲ್ಲಿ ತಾಯಿ ಮಮತೆ, ಪ್ರೇಮದ ಜವಾಬ್ದಾರಿ, ಚೆನ್ನಾಗಿ ಮೂಡಿ ಬಂದಿದೆ. ಕೊನೆಯಲ್ಲಿ ನಾಯಕಿ ತಾಯಿ ನಾಯಕನ ಹತ್ತಿರ ಬಂದು, ತಮ್ಮ ಮಗಳ ಹತ್ತಿರ ಮಾತನಾಡುವಂತೆ ಮನವಿ ಮಾಡಿಕೊಳ್ಳುತ್ತಾಳೆ. ನಾಯಕ ಸರಿ ಎಂದು ಒಪ್ಪಿಗೆ ಸೂಚಿಸುತ್ತಾನೆ. ನಂತರ ನಾಯಕ ಮತ್ತು ನಾಯಕಿ ಇಬ್ಬರೂ ಭೇಟಿಯಾಗುತ್ತಾರೆ. ಮುಂದೆ ನಾಯಕ ಮತ್ತು ನಾಯಕಿ ಸಾಧನೆಯ ಹಾದಿ ಹಿಡಿಯುತ್ತಾರೆ. ಒಟ್ಟಿನಲ್ಲಿ ಈ ಚಿತ್ರ ಸರಳವಾಗಿ ಸುಂದರವಾಗಿ ಮೂಡಿ ಬಂದಿದೆ. ಪ್ರೇಮವನ್ನು ಸೈಡ್‌ ಇಟ್ಟು ಅಲ್ಲಿ ಸಾಧನೆ ಮಾಡುವುದು ಈ ಚಿತ್ರದ ಮೂಲ ಅರ್ಥವಾಗಿದೆ..

Share it :

Leave a Reply

Your email address will not be published. Required fields are marked *