ವೈದ್ಯರ ದಕ್ಷತೆಯಿಂದ ಉತ್ತಮ ಆರೋಗ್ಯ ಸೇವೆ ಸಿಗುವುದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಶ್ರೀರಂಗಪಟ್ಟಣ ಶ್ರೀರಂಗನಾಯಕಿ ಸಮಾಜ ಮತ್ತು ಐಕ್ಯ ಅಲಯನ್ಸ್ ಸಂಸ್ಥೆ ವತಿಯಿಂದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಹೂ ನೀಡಲಾಯಿತು.

ಉತ್ತಮ ಆರೋಗ್ಯ ಸೇವೆ ಸಿಗುವುದು ವೈದ್ಯರ ದಕ್ಷತೆಯಿಂದ ಮಾತ್ರವಲ್ಲ, ಸಿಬ್ಬಂದಿಯ ಕಾಳಜಿಯಿಂದಲೂ ಸಹ ಸಾಧ್ಯ. ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ ತಂಡ ಇದಕ್ಕೆ ನಿದರ್ಶನ. ಉತ್ತಮ ವೈದ್ಯಕೀಯ ಸೇವೆ ಒದಗಿಸುವುದರ ಜೊತೆಗೆ ಆಸ್ಪತ್ರೆಯ ಸ್ವಚ್ಛತೆಯನ್ನು ಅಚ್ಚುಕಟ್ಟಾಗಿ ಪಾಲಿಸಿರುವುದಕ್ಕಾಗಿ ಸ್ಥಳೀಯರಾದ ನಮಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿ ಶ್ರೀರಂಗನಾಯಕಿ ಸಮಾಜದ ಅಧ್ಯಕ್ಷೆ ಹಾಗೂ ಲೆನಿನ್ ಸಂಸ್ಥೆ ಸಂಸ್ಥಾಪಕಿ ಬಿ ಎಸ್ ವಿಶಾಲಾಕ್ಷಿ ಪದ್ಮನಾಬ್ ,ನುರಿತ ವೈದ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ ಗುಲಾಬಿ ಹೂ ನೀಡಿ ಗೌರವಿಸಿದರು.

ರಕ್ತದಾನ ಅಂದ್ರೆ ಜೀವದಾನ.ಪ್ರತಿ ವರ್ಷವೂ ರಕ್ತಧಾನ ಶಿಬಿರ ಮಾಡಿ ಸಮಾಜಕ್ಕೆ ನಾವೇನಾದರೂ ಕೊಡಬೇಕು ಅನ್ನೋದು ನನ್ನ ನಂಬಿಕೆ .ಜೀವ ಉಳಿಸುವ ಸಂಕಲ್ಪ ಮಾಡಿ ಪ್ರತಿ ವರ್ಷ ರಕ್ತದಾನ ಶಿಬಿರ ಅಗತ್ಯವಿರುವ ರೋಗಿಗಳಿಗೆ ಜೀವ ಉಳಿಸಲು ಪ್ರತಿ ವರ್ಷವೂ ಸ್ವಯಂಪ್ರೇರಿತ ರಕ್ತಧಾನ ಶಿಬಿರವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸುತ್ತೇವೆ,ಎಂದು ಐಕ್ಯ ಅಲೆಯನ್ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಆಶಾಲತಾ ಪುಟ್ಟೇಗೌಡ ತಿಳಿಸಿದರು.

ಶ್ರೀರಂಗಪಟ್ಟಣ ಮಹಿಳಾ ಸಾತ್ವಾನ ಕೇಂದ್ರದ ವ್ಯವಸ್ಥಾಪಕರಾದ ಶೀಲಾ ನಂಜುಂಡಯ್ಯ ಮಾತನಾಡಿ, ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳ ಸೇವೆಯನ್ನು ತಮ್ಮ ಸ್ವಂತ ಕುಟುಂಬದಂತೆ ಭಾವಿಸಿ ಮಾಡುತ್ತಿದ್ದಾರೆ. ಚಿಕಿತ್ಸೆಯಷ್ಟೇ ಅಲ್ಲ, ಆಸ್ಪತ್ರೆಯ ಸ್ವಚ್ಛತೆಯನ್ನು ಅಷ್ಟೇ ಶ್ರದ್ಧೆಯಿಂದ ಕಾಪಾಡಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಅವರ ಈ ಕರ್ತವ್ಯ ಪ್ರಜ್ಞೆಯೇ ನಮ್ಮ ಸಮಾಜದ ಆರೋಗ್ಯಕ್ಕೆ ಆಧಾರ.ಸೇವೆಯಲ್ಲಿರುವ ನಿಷ್ಠೆ ಮತ್ತು ಸ್ವಚ್ಛತೆಯಲ್ಲಿರುವ ಶಿಸ್ತು ,ಇದೇ ಶ್ರೀರಂಗಪಟ್ಟಣ ಆಸ್ಪತ್ರೆಯ ಸಿಬ್ಬಂದಿಯ ನಿಜವಾದ ಗುರುತು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ಸವಿತಾ, ಪಿಜಿಶಿಯನ್ ಡಾ. ಶಾಸ್ತ್ರಿ, ಡಾ. ಚಂದ್ರಿಕಾ, ಹಿರಿಯ ದರ್ಜೆ /ಶುಶ್ರೂಷಕಿಯಾರಾದ ಶಿಲ್ಪ, ಕವಿತಾ, ನಂಜಮ್ಮಣಿ, ಜೂಲಿ,ಕುಸುಮ,ಶುಶ್ರೂಷಕ ಮುರಳಿ, ನಿವೃತ್ತ ಶಿಕ್ಷಣ ಜಂಟಿ ನಿರ್ದೇಶಕರಾದ ಸುವರ್ಣದೇವಿ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಯೋಗ ಶಿಕ್ಷಕ ಕೆ ಶೆಟ್ಟಹಳ್ಳಿ ಅಪ್ಪಾಜಿ, ಪಾಲಹಳ್ಳಿ ಭಾರತಿ, ಕಡತನಾಳು ಕೃಷ್ಣಕುಮಾರ್, ಗೋಪಾಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share it :
Get free tips and resources right in your inbox, along with 10,000+ others