೩೭೦ರೂಪಾಯಿ ಚಿಕನ್‌ ಬಿರಿಯಾನಿ ಕೊಡ್ಸಿ, ಕಿಸ್‌ ಕೇಳಿದ ಪುಂಡ

ಹೆಣ್ಣಿನ ದೇಹಕ್ಕೆ ಇಲ್ಲದ ಮೌಲ್ಯ ಚಿಕನ್‌ ಬಿರಿಯಾನಿಗೆ ಇದೆ ಅಂತೆ ಕಣ್ರಿ, ಹೌದು ಯಾಕಪ್ಪಾ ಈ ವಿಚಾರ ಈಗ ಎನ್ನುತ್ತೀರಾ? ಕಾರಣ ಇಲ್ಲಿದೆ ನೋಡಿ.

ಇತ್ತೀಚಿಗೆ ಹಿಂದಿ ಕಾರ್ಯಕ್ರಮದ ಕಾಮಿಡಿ ತುಣುಕೊಂದು ಸೋಷಿಯಲ್‌ ಮಿಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಆ ವಿಡಿಯೋ ವಿಚಾರ ಏನು ಅಂದ್ರೆ ಕಾಮಿಡಿ ಹೆಸರಿನಲ್ಲಿ ಕಾಲು ಎಳೆಯುವುದು. ಹೌದು ವಿಡಿಯೋಂದರಲ್ಲಿ ಯುವಕನೊಬ್ಬ ಹೇಳುತ್ತಾನೆ. ನಾನು ನನ್ನ ಗೆಳತಿ ಹೊಟೇಲ್‌ ಹೋಗಿರುತ್ತೇವೆ ಆಗ ನಾನು ಅವಳಿಗೆ ೩೭೦ ರೂಪಾಯಿ ಕೊಟ್ಟು ಚಿಕನ್‌ ಬಿರಿಯಾನಿ ಕೊಡಿಸುತ್ತೇನೆ ಎನ್ನುತ್ತಾನೆ.

ಚಿಕನ್‌ ಬಿರಿಯಾನಿ ತಿಂದ ನಂತರ ನನ್ನನ್ನು ಮನೆಗೆ ಡ್ರಾಫ್‌ ಮಾಡು ಎನ್ನುತ್ತಾಳೆ ನನ್ನ ಗೆಳತಿ, ನಾನು ಅವಳಿಗೆ ಹೇಳುತ್ತೇನೆ ನಿನಗೆ ೩೭೦ ರೂಪಾಯಿ ಕೊಟ್ಟು ಚಿಕನ್‌ ಬಿರಿಯಾನಿ ತಿನ್ನಿಸಿದ್ದೇನೆ ಸುಮ್ಮನೆ ಹೋಗುವುದು ಹೇಗೆ ನನ್ನ ಬಿರಿಯಾನಿ ದುಡ್ಡು ವಸೂಲಿ ಮಾಡಬೇಕು ಅಲ್ಲವೇ? ಎನ್ನುತ್ತಾನೆ. ಬಿರಿಯಾನಿಗಾಗಿ ಯುವತಿಯ ಹತ್ತಿರ ಕಿಸ್ ಕೇಳುತ್ತಾನೆ , ದೈಹಿಕ ಸಂಬಂಧದ ಬಗ್ಗೆ ತನ್ನ ಆಸೆ ವ್ಯಕ್ತಪಡಿಸುತ್ತಾನೆ . ಈತನ ಹೆಸರು ಹಿಮಾಂಶು ಜಂಗ್ರಾ ಎನ್ನಲಾಗಿದೆ.. ತನ್ನ ಗೆಳತಿಯ ಡೇಟಿಂಗ್ ವಿಷಯ ಇಟ್ಟುಕೊಂಡು ವೇದಿಕೆಯ ಮೇಲೆ ಕಾಮಿಡಿ ಮಾಡುತ್ತಾನೆ.

ಈ ಕಾಮಿಡಿ ಈಗ ಕಿಡಿಯಾಗಿ, ಸಮಾಜಿಕ ಜಾಲತಾಣದಲ್ಲಿ ಹರಡಿಕೊಂಡಿದೆ. ಇದಕ್ಕೆ ಕೆಲ ಬುದ್ಧಿವಂತರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹುಡುಗೀಯರು ಮೇಕ್‌ ಮಾಡಿಕೊಳ್ಳಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತೇವೆ. ನೀನು ೩೭೦ಗಾಗಿ ಹೆಣ್ಣನ್ನು ಕೇವಲವಾಗಿ ಕಾಣುತ್ತಿಯಾ ಅಂತ, ಇನ್ನು ಕೆಲವರು ಆತನಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಿಗ್ಗಾ ಮುಗ್ಗಾ ತಳಿಸಿದ್ದಾರೆ..

ಕೆಲ ಮಾಹಿತಿ ಪ್ರಕಾರ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನುತ್ತಿದ್ದಾರೆ.ಇನ್ನು ಹಲವರು ಆತನಿಗೆ ಮದುವೆಯಾದ್ರೆ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತಾನೆ? ಹೆಣ್ಣನನ್ನು ದುಡ್ಡಿನಿಂದ ಅಳತೆ ಮಾಡುವ ನೀಚ ಎನ್ನುತ್ತಿದ್ದಾರೆ.ನಾವು ಇಲ್ಲಿ ತಿಳಿದುಕೊಳ್ಳಬೇಕಿರುವುದು ಇಷ್ಟೇ ನಮ್ಮ ಸಮಾಜ ಸೋಷಿಯಲ್‌ ಮೀಡಿಯಾದಿಂದ ಬದಲಾಗುತ್ತಿದೆ. ತಪ್ಪುಗಳಿಗೆ ಜಾಲತಾಣ ಬರೆ ಎಳೆಯುತ್ತಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ…

Share it :

Leave a Reply

Your email address will not be published. Required fields are marked *