ಭಾರತದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ ಎಂಬ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರ ಹೇಳಿಕೆ ತೀವ್ರ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿತ್ತು, ಇದರ ಬೆನ್ನಲ್ಲೇ, ಶೇಖರ್ ಸುಮನ್ ಅವರ ‘ಶೇಖರ್ ಟುನೈಟ್’ ಟಾಕ್ ಶೋನಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಸಂಜಯ್ ದತ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರಕ್ಕೆ ಕ್ಲಾರಟಿ ಕೊಟ್ಟಿದ್ದಾರೆ.
ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ನೋವುಂಟು ಮಾಡುವುದು, ಅವಮಾನಿಸುವುದು ಅಥವಾ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದಿದ್ದಾರೆ.
ಭಾರತದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ ಎಂಬ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರ ಹೇಳಿಕೆ ತೀವ್ರ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ, ಶೇಖರ್ ಸುಮನ್ ಅವರ ‘ಶೇಖರ್ ಟುನೈಟ್’ ಟಾಕ್ ಶೋನಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಸಂಜಯ್ ದತ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ದೇಶದ ಜನರು ತುಂಬಾ ಒಳ್ಳೆಯವರು. ಇಲ್ಲಿ ಶಾಂತಿ ಇರಬೇಕು. ಆದರೆ ನಮ್ಮ ದೇಶದಲ್ಲಿ ಆ ಶಾಂತಿಯನ್ನು ನನಗೆ ಈಗ ಅನುಭವಿಸಲು ಸಾಧ್ಯವಾಗುತ್ತಿಲ್ಲ. ನಾವು ಭಾರತೀಯರು ವಿಶಾಲ ಹೃದಯದವರು ಮತ್ತು ಅತಿಥಿ ಸತ್ಕಾರದಲ್ಲಿ ನಂಬಿಕೆ ಇಟ್ಟವರು. ನಾವು ಬಹಳಷ್ಟು ನೀಡಿದ್ದೇವೆ ಮತ್ತು ಯಾವಾಗಲೂ ಹಾಗೆಯೇ ಇರಬೇಕು. ಆ ದಿನಗಳು ಶೀಘ್ರದಲ್ಲೇ ಮರಳಿ ಬರಲಿ ಎಂದು ನಾನು ಶಿವನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಜಯ್ ದತ್ ಹೇಳಿದರು.
ಈ ಮಾತುಕತೆ ವೇಳೆ ಅವರು ಐದು ನಿಮಿಷಗಳ ಕಾಲ ಭಾರತದ ಪ್ರಧಾನ ಮಂತ್ರಿಯಾದರೆ ಹೇಗಿರುತ್ತದೆ ಎಂದು ಹಾಸ್ಯಮಯವಾಗಿ ಕಲ್ಪಿಸಿಕೊಂಡು, ತಮ್ಮ ವಿಶಿಷ್ಟ ‘ಮುನ್ನಾ ಭಾಯ್’ ಶೈಲಿಯಲ್ಲಿ ದೇಶವನ್ನು ಉದ್ದೇಶಿಸಿ ಕಾಲ್ಪನಿಕ ಭಾಷಣ ಮಾಡಿದರು.
ಗಾಂಧೀಜಿ ಅವರ ಮೂರು ಮಂಕಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ, ಆದರೆ ಇಂದು ನನಗೆ ನಾಲ್ಕನೇ ಕೋತಿ ಬೇಕು, ಯಾರಾದರೂ ತಪ್ಪು ನೋಡಿದರೆ, ಅದನ್ನು ಯಾರು ಸರಿಪಡಿಸುತ್ತಾರೆ? ಎಂದು ಹೇಳಿದ್ದರು. ಅವರ ಕಾಮೆಂಟ್ಗಳು ತರುವಾಯ ಆನ್ಲೈನ್ ನಲ್ಲಿ ವಿವಾದ ಮತ್ತು ಚರ್ಚೆಯನ್ನು ಹುಟ್ಟುಹಾಕಿದ್ದವು. ಮಾತುಕತೆಯ ಭಾಗಗಳನ್ನು ಅವರು ಮಾಡಿದ ಸಂದರ್ಭಕ್ಕಿಂತ ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ.
ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ನೋವುಂಟು ಮಾಡುವುದು, ಅವಮಾನಿಸುವುದು ಅಥವಾ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದಿದ್ದಾರೆ.
“ನನ್ನ ಹೇಳಿಕೆಗಳು ಹಗುರವಾದ ಮತ್ತು ಹಾಸ್ಯಮಯವಾಗಿರಬೇಕಿದ್ದ ಸಂಭಾಷಣೆಯ ಭಾಗವಾಗಿದ್ದವು. ‘ಮುನ್ನಾ ಭಾಯ್’ ಚಲನಚಿತ್ರಗಳಲ್ಲಿ ಕಂಡುಬರುವ ಹಾಸ್ಯ ಮತ್ತು ವ್ಯಂಗ್ಯದಂತೆಯೇ, ಅದರಲ್ಲೂ ವಿಶೇಷವಾಗಿ ಪ್ರೀತಿ, ಆತ್ಮೀಯತೆ, ಒಗ್ಗಟ್ಟು ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ‘ಗಾಂಧಿಗಿರಿ’ ಪರಿಕಲ್ಪನೆಯಂತೆಯೇ ಈ ಮಾತುಗಳ ಹಿಂದಿನ ಉದ್ದೇಶವೂ ಇತ್ತು. ದುರದೃಷ್ಟವಶಾತ್, ನನ್ನ ಮಾತುಗಳನ್ನು ಆ ಮೂಲ ಉದ್ದೇಶದ ಸಂದರ್ಭದಿಂದ ಹೊರತಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.