ನಾನು ಬದುಕಿದ್ದೇನೆ ಅಂತ ದೂರು ಕೊಡೋದು ತಪ್ಪಾ? : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸಿದ್ದಾರ್ಥ ಟ್ರಸ್ಟ್‌ ನಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಬದಲು ಅವರ ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.

ಸಿದ್ದಾರ್ಥ ಟ್ರಸ್ಟ್‌ನಿಂದ ಫಾರ್ಮ್ 7 ಪ್ರಿಂಟ್ ಆಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು,ಇನ್ನು ಕಾಂಗ್ರೆಸ್ ವಿರುದ್ದ ರಾಜ್ಯಪಾಲರಿಗೆ ಎನ್‌ಡಿಎ ಕೂಟ್ಟ ದೂರು ಕೊಟ್ಟ ಕುರಿತು ಪ್ರತಿಕ್ರಿಯಿಸಿದ ಅವರು, ಎನ್‌ಡಿಎ ನಾಯಕರು ರಾಜ್ಯಪಾಲರಿಗೆ ದೂರು ಕೊಡಲಿ. ಅವರ ಲೆಟರ್ ಹೆಡ್‌ನಲ್ಲಿ ಫಾರ್ಮ್ 7 ಹೋಗಿದೆ. ಅದರ ಬಗ್ಗೆ ದೂರು ಕೊಡಲಿ ಎಂದರು.

ಕಾರ್ಪೋರೇಟರ್, ನಾಯಕರು, ಲೆಟರ್ ಹೆಡ್‌ನಲ್ಲಿ ಫಾರ್ಮ್ 7 ಯಾಕೆ ಇದೆ? 7 ಸಾವಿರ 5 ಸಾವಿರ ಫಾರ್ಮ್ 7 ಡಿಲೀಟ್ ಮಾಡಲು ಕೊಡುತ್ತಿದ್ದೀರಾ. ಅದೆಲ್ಲವನ್ನು ರಾಜ್ಯಪಾಲರು, ಚುನಾವಣೆ ಆಯೋಗಕ್ಕೆ ಹೇಳಲಿ. ಇವರು ಏನು ಬೇಕಾದರೂ ಮಾಡಬಹುದಾ ಎಂದು ಹರಿಹಾಯ್ದರು.

ಕುಮಾರಸ್ವಾಮಿ ಫಾರ್ಮ್ 7 ಕೊಡೋದು ಸಂವಿಧಾನ ಹಕ್ಕು ಅಂತಾರೆ. ಮತದಾರರು ತಮ್ಮ ಮತ ಡಿಫೆಂಡ್ ಮಾಡಿಕೊಳ್ಳೋದು ಅವರ ಹಕ್ಕು ಅಲ್ಲವಾ? ಮತದಾರರಿಗೆ ಮೋಸ ಮಾಡಿದ್ರೆ, ಪಟ್ಟಿಯಿಂದ ಹೊರಗೆ ಇಟ್ಟರೆ ನನ್ನ ಹಕ್ಕು ಅಂತ ಅವರು ದೂರು ಕೊಡಬಹುದು ಅಲ್ಲವಾ? ನಾನು ಬದುಕಿದ್ದೇನೆ ಅಂತ ದೂರು ಕೊಡೋದು ತಪ್ಪಾ ಎಂದು ಗುಡುಗಿದರು.

ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಏನಾಗುತ್ತಿದೆ ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲ. ಮೊದಲು ಅವರ ಮನೆ ಮಕ್ಕಳಿಗೆ ನೋಡಿಕೊಳ್ಳೋಕೆ ಹೇಳಿ. ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ನಿಮಗೆ ಗೊತ್ತಿಲ್ಲ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಏನಾಗುತ್ತೆ ಗೊತ್ತಾ ನಿಮಗೆ? ಚುನಾವಣೆ ಆಯೋಗದಲ್ಲಿ ಏನಾಗುತ್ತಿದೆ ಗೊತ್ತಾ ಅವರಿಗೆ ಎಂದು ಕಿಡಿಕಾರಿದರು.

ಹಿರಿಯ ನಾಯಕರು ನೀವು ಆರ್‌ಎಸ್‌ಎಸ್ ಹೇಳಿಕೊಟ್ಟಿರುವ ಪಾಠ ಹೇಳಿದ್ರೆ ನಾವು ಮಾತಾಡಬೇಕಾಗುತ್ತದೆ. ನೀವು ಮರ್ಯಾದೆ ಕೊಡಿ ನಾವು ಮರ್ಯಾದೆ ಕೊಡುತ್ತೇವೆ. ಮರ್ಯಾದೆ ಬಿಟ್ಟು ಮಾತಾಡೋಕೆ ನೀವು ರೆಡಿ ಇದ್ದರೆ ನಾವೂ ರೆಡಿ ಇದ್ದೇವೆ ಎಂದು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post