ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ : ಬಸನಗೌಡ ಪಾಟೀಲ್​​ ಯತ್ನಾಳ್​​

ವಿಜಯಪುರ: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ತೀವ್ರ ಸಂಚಲನ ಮೂಡಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಡಿ ತೋರಿಸಿ ಅವರ ರಾಜೀನಾಮೆ ಪಡೆಯಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ಅವರು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಸ್ಟಿಂಗ್ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಸತೀಶ್ ಜಾರಕಿಹೊಳಿ ಅವರನ್ನೂ ಅದೇ ಟೀಂ ಇಡಿಗೆ ಸಿಲುಕಿಸಿದೆ. ಸಿಎಂ ಸ್ಟಿಂಗ್ ಬಗ್ಗೆ ಹುಷಾರಾಗಿರಬೇಕೆಂದು ಹೇಳುತ್ತಾರೆ. ಹಾಗಾದ್ರೆ ಸ್ಟಿಂಗ್ ಆಪರೇಷನ್ ಮಾಡಿದ್ದು ಸಿಎಂಗೆ ಹೇಗೆ ಗೊತ್ತಾಯ್ತು? ಎಂದು ಯತ್ನಾಳ್​​ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಬಳಿ ಬಹಳ ಮಾಹಿತಿಯಿದೆ. ಅವರು ಯಾವ ಹೋಟೆಲ್​ನಲ್ಲಿದ್ದರು, ಎಲ್ಲಿ ಊಟ ಮಾಡಿದರು, ಎಷ್ಟು ಹಣ ಕೊಟ್ಟರು ಸೇರಿ ಎಲ್ಲ ಎಚ್​ಡಿಕೆ ಬಳಿಯಿವೆ. ಅದನ್ನೆಲ್ಲಾ ಹಿಡಿದು ಬಿಟ್ಟು ಮಾಡುವ ಬದಲು ಎಲ್ಲವನ್ನೂ ಬಹಿರಂಗ ಮಾಡಬೇಕು. ದೊಡ್ಡ ಸ್ಕ್ರೀನ್​ನಲ್ಲಿ ಹಾಕಿ ಜನರಿಗೆ ತೋರಿಸಬೇಕು. ಆಗ ಎಷ್ಟು ಹಲ್ಕಾ ಕೆಲಸ ಮಾಡುತ್ತಾರೆಂದು ಜನರಿಗೆ ಗೊತ್ತಾಗುತ್ತದೆ ಎಂದರು.

ಇನ್ನು ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸುವ ಹಿಂದಿನ ದಿನ ಮಧ್ಯರಾತ್ರಿವರೆಗೆ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ. ಅಹಿಂದ ನಾಯಕ ನೀವೇ, ದೊಡ್ಡ ನಾಯಕ ಎಂದು ರಾಹುಲ್ ಹೇಳಿದ್ದಾರೆ.

ಆದರೆ ಆ ಬಳಿಕ ಪ್ರಿಯಾಂಕಾ ಗಾಂಧಿ, ಸೋನಿಯಾ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೂ ಸಿಡಿ ತೋರಿಸಿ ರಾಜೀನಾಮೆ ನೀಡುವಂತೆ ಹೇಳಿದ್ದರಂತೆ. ಇಂತಹ ಕೆಲಸ ಮಾಡಿದವರನ್ನು ಯಾವುದೇ ದೊಡ್ಡ ಹುದ್ದೆಯಲ್ಲಿದ್ದರೂ ವಜಾ ಮಾಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post