ನವದೆಹಲಿ: ಇಂಟರ್ನೆಟ್ ಪ್ರವೇಶಿಸುವುದು ಮತ್ತು ಬಳಸುವುದು ಮಕ್ಕಳೂ ಸೇರಿದಂತೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ಐತಿಹಾಸಿಕ ಆದೇಶವನ್ನು ನೀಡಿದೆ.
ಭಾರತೀಯ ಸಂವಿಧಾನದ ವಿಧಿ 21 (ಜೀವಿಸುವ ಹಕ್ಕು) ಮತ್ತು ವಿಧಿ 19(1)(ಎ) (ಅಭಿವ್ಯಕ್ತಿ ಸ್ವಾತಂತ್ರ್ಯ) ಅಡಿಯಲ್ಲಿ ಇಂಟರ್ನೆಟ್ ಬಳಕೆಯು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ
ಇಂಟರ್ನೆಟ್ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸಂವಿಧಾನದ ವಿಧಿ 21 ಮತ್ತು 19(1)(ಎ) ಅಡಿಯಲ್ಲಿ, ಇಂಟರ್ನೆಟ್ ಪ್ರವೇಶಿಸುವುದು ಮತ್ತು ಬಳಸುವುದು ಒಂದು ಮೂಲಭೂತ ಹಕ್ಕು ಎಂದು ಕೋರ್ಟ್ ಘೋಷಿಸಿದೆ. ಮಕ್ಕಳಿಗೂ ಇದೇ ಹಕ್ಕಿನ ರಕ್ಷಣೆ ಲಭ್ಯವಿದ್ದು,, ಅವರಿಂದ ಈ ಹಕ್ಕನ್ನ ಸಂಪೂರ್ಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತೀರ್ಪಿನ ಪ್ರಮುಖ ಮುಖ್ಯಾಂಶಗಳು: ಮಕ್ಕಳಿಗೂ ಸಮಾನ ಹಕ್ಕು: ವಯಸ್ಸಿನ ಭೇದವಿಲ್ಲದೆ ನಮ್ಮ ದೇಶದ ಮಕ್ಕಳು ಸಹ ಈ ಡಿಜಿಟಲ್ ಹಕ್ಕನ್ನು ಹೊಂದಿದ್ದಾರೆ. ಮಕ್ಕಳಿಂದ ಈ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳುವುದು ಅಸಂಬದ್ಧ ಎಂದು ಕೋರ್ಟ್ ಹೇಳಿದೆ
ಸ್ವಾತಂತ್ರ್ಯ ಮತ್ತು ಸುರಕ್ಷತೆ ಎರಡೂ ಮುಖ್ಯ: ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಒಂದಕ್ಕೊಂದು ವಿರುದ್ಧವಾದದ್ದಲ್ಲ. ನಮ್ಮ ಮಕ್ಕಳಿಗೆ ಈ ಎರಡೂ ಸಿಗುವ ಅರ್ಹತೆ ಇದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ
ನಿಯಂತ್ರಣ ಯಾರ ಮೇಲೆ?: “ಮಕ್ಕಳಿಗೆ ಹಾನಿ ಮಾಡುವ ಆನ್ಲೈನ್ ಕಂಟೆಂಟ್ಗಳು ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೇ ಹೊರತು, ಮಕ್ಕಳ ಹಕ್ಕುಗಳನ್ನು ಕಸಿಯಬಾರದು” ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಸಂಪೂರ್ಣ ನಿಷೇಧ ಸಲ್ಲದು: ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಇಂಟರ್ನೆಟ್ ಅಥವಾ ಸಾಮಾಜಿಕ ಮಾಧ್ಯಮಗಳ (Social Media) ಮೇಲೆ ಸಂಪೂರ್ಣ ನಿಷೇಧ ಹೇರುವುದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ
ಇಂಟರ್ನೆಟ್ ಬಳಕೆಯನ್ನ ಮಕ್ಕಳಿಗೆ ಸಂಪೂರ್ಣವಾಗಿ ನಿರಾಕರಿಸುವುದು, ಅವರಿಗೆ ರಕ್ಷಿಸಬೇಕಾದ ವಿವೇಕವಿಲ್ಲ ಅಥವಾ ವ್ಯಕ್ತಪಡಿಸಬೇಕಾದ ವಾಕ್ಸ್ವಾತಂತ್ರ್ಯವಿಲ್ಲ ಎಂದು ಹೇಳಿದಂತೆಯೇ ಆಗುತ್ತದೆ. ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಪರಸ್ಪರ ವಿರುದ್ಧವಾದವುಗಳಲ್ಲ. ನಮ್ಮ ಮಕ್ಕಳು ಈ ಎರಡೂ ಹಕ್ಕುಗಳಿಗೆ ಅರ್ಹರಾಗಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ, ವಿಷಯಗಳನ್ನ ತಿಳಿದುಕೊಳ್ಳುವ, ಮಾಹಿತಿ ಪಡೆಯುವ ಹಾಗೂ ವಿಚಾರಗಳನ್ನ ಹಂಚಿಕೊಳ್ಳುವ ಹಕ್ಕುಗಳೂ ಸೇರಿವೆ ಎಂದು ಕೋರ್ಟ್ ಗಮನಸೆಳೆಯಿತು. ಇಂಟರ್ನೆಟ್ ಅನ್ನು ವಿಚಾರಗಳು, ಸೃಜನಶೀಲ ಅಭಿವ್ಯಕ್ತಿ ಮತ್ತು ಮಾಹಿತಿಯ ಒಂದು ವೇದಿಕೆ (ಮಾರುಕಟ್ಟೆ) ಎಂದು ಬಣ್ಣಿಸಿದ ಕೋರ್ಟ್, ಇದರ ಮೌಲ್ಯವು ಕೇವಲ ಅದರಲ್ಲಿರುವ ವಿಷಯಗಳಲ್ಲಿ ಮಾತ್ರವಲ್ಲದೇ, ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ಅದು ಒದಗಿಸುವ ಪ್ರವೇಶಾವಕಾಶದಲ್ಲೂ ಅಡಗಿದೆ ಎಂದು ಹೇಳಿದೆ.
ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುವ ಅನೇಕ ಮಕ್ಕಳಿಗೆ ಕಲಿಕೆ ಮತ್ತು ಮಾಹಿತಿ ಪಡೆಯಲು ಇಂಟರ್ನೆಟ್ ಬಹುತೇಕ ಏಕೈಕ ಮೂಲವಾಗಿದೆ. ವಿಶೇಷ ಅಗತ್ಯಗಳಿರುವ ಮಕ್ಕಳಿಗೂ ಆನ್ಲೈನ್ ವೇದಿಕೆಗಳು ಮಹತ್ವದ ಅವಕಾಶಗಳನ್ನು ಒದಗಿಸಬಹುದು. ಇಂತಹ ವೇದಿಕೆಗಳ ಮೂಲಕ ಅವರು ಸ್ನೇಹಿತರನ್ನ ಕಂಡುಕೊಳ್ಳಬಹುದು ಹಾಗೂ ತಮ್ಮಂತೆಯೇ ಇರುವ ಇತರರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ.





