ರಾಜ್ಯದಲ್ಲಿ ಏನಾಗ್ತಿದೆ? ಸಿಡಿ ಇಟ್ಟುಕೊಂಡು ಕೆಲವರಿಗೆ ಬೆದುರಿಸುತ್ತಿದ್ದಾರೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮೈಸೂರು: ಸಿದ್ದರಾಮ್ಯಯ ಅವರನ್ನ ಬ್ಲ್ಯಾಕ್‌ಮೇಲ್‌ ಮಾಡಿ ರಾಜೀನಾಮೆ ಕೊಡಿಸಿದ್ರು ಎನ್ನುವ ಮಾಹಿತಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮೈಸೂರಿನ ಅರಮನೆ ಆವರಣದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ದಸರಾ ಗಜಪಡೆ ಮಾವುತರು ಕಾವಾಡಿಗಳ ಕುಟುಂಬಕ್ಕೆ ಉಪಹಾರ ವ್ಯವಸ್ಥೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಟಿಂಗ್‌ ಆಪರೇಷನ್‌ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು.

ಸ್ಟಿಂಗ್‌ ಆಪರೇಷನ್‌ ರೀತಿಯ ಕೆಲಸ ಮಾಡುವವರಿಗೆ ಉಗ್ರವಾದ ಶಿಕ್ಷೆ ಆಗಬೇಕು. ನಾನು ಸಿಎಂ ಬಳಿ ಮನವಿ ಮಾಡ್ತೇನೆ. ಜನ ನಿಮ್ಮತ್ತ ಬೊಟ್ಟು ಮಾಡ್ತಿದ್ದಾರೆ ಎಂದು ಮೈಸೂರಿನಲ್ಲಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅಧಿಕಾರ ಪಡೆಯಲಿಕ್ಕೆ ಯಾರಿಗೋ ಬ್ಲ್ಯಾಕ್‌ಮೇಲ್ ಮಾಡ್ತಾರೆ. ಸ್ಟಿಂಗ್ ಆಪರೇಷನ್‌ ಮಾಡ್ತಾರೆ, ಅಧಿಕಾರ ದುರುಪಯೋಗ ಮಾಡ್ತಿದ್ದಾರೆ ಎಂದರು.

ಸಿಡಿ ಇಟ್ಟುಕೊಂಡು ಕೆಲವರಿಗೆ ಬೆದರಿಸ್ತಾರೆ. ನಮ್ಮ ರಾಜ್ಯದಲ್ಲಿ ಏನಾಗ್ತಿದೆ? ಅಂತಾ ಬೇರೆ ರಾಜ್ಯದವರು ಕೇಳ್ತಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಇದಕ್ಕೆ ಇತಿಶ್ರೀ ಆಡಬೇಕು, ತಕ್ಷಣ ಎಸ್‌ಐಟಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬ್ಲ್ಯಾಕ್‌ ಮೇಲ್ ಸರ್ಕಾರ ಇದೆ. ಅವರ ಪಾರ್ಟಿ ಒಳಗೆ, ಸರ್ಕಾರದ ಒಳಗೆ ಬ್ಲ್ಯಾಕ್‌ಮೇಲ್‌ ಮಾಡಿಕೊಂಡು ಆಡಳಿತ ಮಾಡ್ತಿದ್ದಾರೆ. ಸಿದ್ದರಾಮಯ್ಯರನ್ನ ಬ್ಲ್ಯಾಕ್‌ಮೇಲ್‌ ಮಾಡಿ ರಾಜೀನಾಮೆ ಕೊಡಿಸಿದ್ರು, ಅನ್ನೋ ಸುದ್ದಿ ಹರಿದಾಡುತ್ತಿದೆ. ಕರ್ನಾಟಕ ರಾಜ್ಯಕ್ಕೆ ಇದೊಂದು ಕಪ್ಪು ಚುಕ್ಕೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post