ಫಿರ್ದೋಸ್ ಬಿಗ್ ಬಾಸ್ ಮನೆಯಲ್ಲಿ ‘ಹರಕೆಯ ಕುರಿ’ : ಗಾನವಿಯನ್ನು ಕುರುಡಾಗಿ ನಂಬಿದ ಆಸಿಯಾ

ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಇತ್ತೀಚಿನ ನಾಮಿನೇಷನ್ ಟಾಸ್ಕ್‌ನಲ್ಲಿ ಗಾನವಿ ಗೌಡ ಅವರನ್ನು ಕುರುಡಾಗಿ ನಂಬಿದ ಆಸಿಯಾ ಫಿರ್ದೋಸ್ ಬಿಗ್ ಬಾಸ್ ಮನೆಯಲ್ಲಿ ‘ಹರಕೆಯ ಕುರಿ’ ಅಥವಾ ಬಕ್ರಾ ಆಗಿದ್ದಾರೆ.

ಗಾನವಿ ಅವರ ಮಾತು ಹಾಗೂ ಚಾಣಾಕ್ಷ ಆಟದ ಪ್ಲಾನ್‌ಗೆ ಸಿಲುಕಿ ಆಸಿಯಾ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗಾನವಿ ಗೌಡ ಇಡೀ ಮನೆಮಂದಿಯನ್ನು ತನ್ನ ತಾಳಕ್ಕೆ ತಕ್ಕಂತೆ ಆಡಿಸುತ್ತಿದ್ದಾರೆ ಎಂದು ಈ ಹಿಂದೆಯೇ ಕಿಚ್ಚ ಸುದೀಪ್ ವಾರದ ಕಥೆಯಲ್ಲಿ ಪ್ರಸ್ತಾಪಿಸಿದ್ದರು.

ಅದಕ್ಕೆ ಪೂರಕವೆಂಬಂತೆ, ಈ ವಾರದ ಗೇಮ್‌ನಲ್ಲಿ ಗಾನವಿಯನ್ನು ಅತಿಯಾಗಿ ನಂಬಿದ ಆಸಿಯಾ ಪ್ಲಾನ್ ಉಲ್ಟಾ ಹೊಡೆದಾಗ ಕಣ್ಣೀರು ಹಾಕಿದ್ದಾರೆ. ಟಾಸ್ಕ್ ಸೋತ ನಂತರ ಗಾನವಿ “ನಾನು ಬೇಕು ಅಂತ ಮಾಡಿದ್ದಲ್ಲ” ಎಂದು ಎಂದಿನಂತೆ ಕಣ್ಣೀರಿನ ಮೊರೆ ಹೋಗಿ ಅಳಲು ತೋಡಿಕೊಂಡರೂ, ಸಹ ಸ್ಪರ್ಧಿಗಳು ಮತ್ತು ಪ್ರೇಕ್ಷಕರು ಇದನ್ನು ಗಾನವಿಯ ಕನ್ನಿಂಗ್ ಗೇಮ್ ಪ್ಲಾನ್ ಎಂದೇ ವ್ಯಾಖ್ಯಾನಿಸುತ್ತಿದ್ದಾ

ಬಿಗ್​​ಬಾಸ್ ಮನೆಯಲ್ಲಿ ಒಬ್ಬರು ಮಾಡಿದ ತಪ್ಪು ಇನ್ನೊಬ್ಬರಿಗೆ ಹೊರೆ ಆಗುತ್ತದೆ. ಚೆನ್ನಾಗಿ ಆಡಿದ್ದರೂ ಸಹ ಕೆಲವು ನಿರ್ಣಯಗಳ ಕಾರಣಕ್ಕೆ ಆಟದಲ್ಲಿ ಹಿಂದುಳಿಯುವ ಸಾಧ್ಯತೆ ಇರುತ್ತದೆ. ಆಸಿಯಾಗೂ ಸಹ ಇದೇ ಕ್ಷಣ ಎದುರಾಗಿದೆ. ಆಸಿಯಾ ಅವರು ಟಾಸ್ಕ್​​ ಒಂದಕ್ಕೆ ಸಂಬಂಧಿಸಿದಂತೆ ಗಾನವಿಯನ್ನು ಆಯ್ಕೆ ಮಾಡಿದ್ದರು.

ನಿಯಮದ ಪ್ರಕಾರ ಗಾನವಿ ಗೆದ್ದರೆ ಆಸಿಯಾ ಗೆದ್ದಂತಾಗುತ್ತಿತ್ತು. ಆದರೆ ಗಾನವಿ ತಪ್ಪು ಮಾಡಿದರು ಇದರಿಂದಾಗಿ ಆಸಿಯಾ ಚೆನ್ನಾಗಿ ಆಡಿದರೂ ಸಹ ಆಟದಿಂದ ಹೊರಗೆ ಉಳಿದರು, ನಾಮಿನೇಟ್ ಆದರು. ಈ ವೇಳೆ ಜಗ್ಗ ಮಮ್ಮಿ ಸೇರಿದಂತೆ ಹಲವರು ಆಸಿಯಾ ಅವರನ್ನು ವ್ಯಂಗ್ಯ ಸಹ ಮಾಡಿದರು.

ಈ ವಾರದ ನಾಮಿನೇಷನ್ ಮತ್ತು ಎಲಿಮಿನೇಷನ್ ಆಧಾರಿತ ಟಾಸ್ಕ್‌ನಲ್ಲಿ ಗಾನವಿ ಗೌಡ ಅವರ ಪ್ಲಾನ್ ನಂಬಿ ಆಸಿಯಾ ಆಟಕ್ಕೆ ಇಳಿದಿದ್ದರು. ಆದರೆ ಗಾನವಿ ತಮಗೆ ಕಾಲಿಗೆ ಗಾಯವಾಗಿದೆ ಎಂದು ಹೇಳಿ ಆಟವನ್ನು ಪೂರ್ತಿಗೊಳಿಸದೆ ಮಧ್ಯದಲ್ಲೇ ಕೈಬಿಟ್ಟರು.

ಈ ಇಡೀ ಡ್ರಾಮಾವನ್ನು ನೋಡಿ ಸಹ ಸ್ಪರ್ಧಿ ಜಗದೀಶ್ ಅವರು “ಯಾರೋ ಇಲ್ಲಿ ಕುರಿಗಳಾಗ್ತಾ ಇದ್ದಾರೆ” ಎಂದು ಆಸಿಯಾ ಅವರನ್ನು ಕುರಿ ತರಹ ಆಕ್ಟ್ ಮಾಡಿ ತಮಾಷೆ ಹಾಗೂ ವ್ಯಂಗ್ಯ ಮಾಡಿದ್ದಾರೆ. ಟಾಸ್ಕ್ ಮುಗಿದ ಬಳಿಕ ಗಾನವಿ ಕಣ್ಣೀರು ಹಾಕಿದರೂ, ಮನೆಯವರು ಇದನ್ನು ಅವರ ತಂತ್ರಗಾರಿಕೆ ಎಂದೇ ಭಾವಿಸಿದ್ದಾರೆ.

ಗಾನವಿ ಅವರ ಈ ಎಡವಟ್ಟಿನಿಂದಾಗಿ ಆಸಿಯಾ ಫಿರ್ದೋಸ್ ಆಟದಿಂದ ಔಟ್ (ನಾಮಿನೇಟ್) ಆಗಬೇಕಾಯಿತು. ಇದರಿಂದ ತೀವ್ರ ಬೇಸರಗೊಂಡ ಆಸಿಯಾ, ಕಳೆದ ವಾರವೂ ನನಗೆ ಹೀಗೆಯೇ ಆಯಿತು ಎಂದು ಗಾನವಿ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.

ಈ ವಾರ ಮನೆಯಿಂದ ಹೊರಹೋಗಲು ಒಟ್ಟು 6 ಜನ ಪ್ರಮುಖ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಗಗನ್ ಅವರಿಗೆ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರದ ನಾಮಿನೇಷನ್ ಪ್ರಕ್ರಿಯೆ ಬಳಿಕ ಅಂತಿಮವಾಗಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post