ತುಮಕೂರು ದಸರಾ- ರಚ್ಚು ಹೆಗಲಿಗೆ ಕೈಹಾಕಿ ಸೆಲ್ಫಿ ಕ್ರೇಜ್: ಅಭಿಮಾನಿ ಹುಚ್ಚಾಟಕ್ಕೆ ಬೆಚ್ಚಿ ಬಿದ್ದ ಡಿಂಪಲ್ ಕ್ವಿನ್

ತುಮಕೂರು: ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವಿನ್ ರಚಿತಾ ರಾಮ್ ಅಹಿತರ ಸನ್ನಿವೇಶ ಎದುರಿಸಿದ್ದಾರೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬ ಹುಚ್ಚಾಟ ನಡೆಸಿದ್ದಾನೆ.
ದಸರಾ ಸಾಂಸ್ಕೃತಿಕ ಮಹೋತ್ಸವದ ವೇಳೆ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಅವರ ಹೆಗಲ ಮೇಲೆ ಅಭಿಮಾನಿಯೊಬ್ಬ ಏಕಾಏಕಿ ಕೈಹಾಕಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ದಸರಾ ಕಾರ್ಯಕ್ರಮದಲ್ಲಿ, ನಟಿ ರ‍್ಯಾಂಪ್ ವಾಕ್ ಮಾಡುತ್ತಿದ್ದಾಗ ಈ ಭದ್ರತಾ ಲೋಪ ಸಂಭವಿಸಿದೆ.

ರಚಿತಾ ರಾಮ್ ಅವರ ಹೆಗಲ ಮೇಲೆ ಕೈ ಹಾಕಿ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ನಟಿಯನ್ನು ಎಳೆದಾಡಿದ್ದು, ಅತಿರೇಕದ ವರ್ತನೆ ತೋರಿದ್ದಾನೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ಹಿಡಿದಿದ್ದಾರೆ.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ರಚಿತಾ ರಾಮ್, ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರ ಜೊತೆ ರ‍್ಯಾಂಪ್ ವಾಕ್ ಮಾಡಿದ್ದಾರೆ.

ಅಭಿಮಾನಿಗಳ ನಡುವೆ ನಿರ್ಮಿಸಿದ್ದ ರ್ಯಾಂಪ್ ವಾಕ್ ಟ್ರ್ಯಾಕ್‌ನಲ್ಲಿ ನಟಿ ಹೆಜ್ಜೆ ಹಾಕುತ್ತಿದ್ದಾಗ, ಅಭಿಮಾನಿಯೊಬ್ಬ ಏಕಾಏಕಿ ಸ್ಟೇಜ್‌ ಮೇಲೆ ಬಂದಿದ್ದಾನೆ.ರಚಿತಾ ರಾಮ್ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ.

ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಹತ್ತಿರದಿಂದ ಕಾಣಲೆಂದು ವಿಶೇಷವಾಗಿ ರ‍್ಯಾಂಪ್ ನಿರ್ಮಿಸಲಾಗಿತ್ತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರೊಂದಿಗೆ ರಚಿತಾ ರಾಮ್ ರ‍್ಯಾಂಪ್ ವಾಕ್ ಮಾಡುತ್ತಿದ್ದಾಗ, ಯುವಕನೊಬ್ಬ ಏಕಾಏಕಿ ಭದ್ರತೆ ಮೀರಿ ರ‍್ಯಾಂಪ್ ಏರಿ ಬಂದಿದ್ದಾನೆ.

ಬಂದವನೇ ನಟಿಯ ಹೆಗಲ ಮೇಲೆ ಕೈಹಾಕಿ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ನಟಿಯನ್ನು ಎಳೆದಾಡಲಾಗಿದ್ದು, ಅವರು ತೀವ್ರ ಗಾಬರಿಗೊಂಡಿದ್ದಾರೆ.ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಯುವಕನನ್ನು ನಟಿಯಿಂದ ದೂರಕ್ಕೆ ಎಳೆದು, ವಶಕ್ಕೆ ಪಡೆದಿದ್ದಾರೆ.

ಘಟನೆಯ ಬೆನ್ನಲ್ಲೇ ಅಲ್ಲಿದ್ದ ಜನಸಮೂಹ ‘ಡಿ ಬಾಸ್… ಡಿ ಬಾಸ್’ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಮೈಕ್ ಕೈಗೆತ್ತಿಕೊಂಡ ರಚಿತಾ ರಾಮ್, “ಏನಾಗಬೇಕೋ ಅದು ಆಗೇ ಆಗುತ್ತದೆ. ನಾವೆಲ್ಲರೂ ಸ್ವಲ್ಪ ತಾಳ್ಮೆಯಿಂದ ಇರೋಣ, ಎಲ್ಲವೂ ಭಗವಂತನ ಕೈಯಲ್ಲಿದೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ” ಎಂದು ಅತ್ಯಂತ ಸಂಯಮದಿಂದಲೇ ಜನರನ್ನು ಶಾಂತಗೊಳಿಸಿದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಸುರಕ್ಷತೆ ಮತ್ತು ಅಭಿಮಾನಿಗಳ ಮಿತಿಮೀರಿದ ವರ್ತನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ವೇಳೆ ನಟಿಯನ್ನು ಎಳೆದಾಡಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಅಭಿಮಾನಿಯನ್ನು ಹಿಡಿದಿದ್ದಾರೆ.ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಿನ್ನೆ ರಾತ್ರಿ ಆಯೋಜಿಸಿದ್ದ ದಸರಾ ಕಾರ್ಯಕ್ರಮ ವೇಳೆ ಈ ಘಟನೆ ನಡೆದಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post