ಅಮ್ಮನ ಸಂಬಂಧದ ಪ್ರಯಾಣವು ಅಗಾಧ ಪ್ರೀತಿ ಮತ್ತು ಭಯಾನಕ ದುರಂತದಿಂದ ತುಂಬಿತ್ತು : ರಾಹುಲ್‌ ಗಾಂಧಿ

ಚುನಾವಣಾ — ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯುತ್ತಿವೆ : ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

ನವದೆಹಲಿ: Belonging: A Journey of Love ಪುಸ್ತಕ ಪ್ರಕಟವಾದ ಬಳಿಕ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಮಕ್ಕಳಾದ ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಭಾವನಾತ್ಮಕ ಮಾತುಕತೆ ನಡೆಸಿದ್ದಾರೆ. ಪುಸ್ತಕದಲ್ಲಿ ಉಲ್ಲೇಖಿಸದ ಎಷ್ಟೋ ಸಂಗತಿಗಳನ್ನು ಮಕ್ಕಳ ಮುಂದೆ ಸೋನಿಯಾ ಬಿಚ್ಚಿಟ್ಟಿದ್ದಾರೆ.ತಾಯಿ ಮತ್ತು ಸಹೋದರಿ ಜೊತೆ ಕುಳಿತು ಮಾತನಾಡುತ್ತಿರುವ ವೀಡಿಯೊವನ್ನು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಾತುಕತೆ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌ ಗಾಂಧಿ, 500ಕ್ಕೂ ಹೆಚ್ಚು ಪುಟಗಳ ಪುಸ್ತಕದಲ್ಲೂ ಅಮ್ಮ ಸೋನಿಯಾ ಗಾಂಧಿ ಕೆಲವು ವಿಚಾರಗಳನ್ನು ಉಲ್ಲೇಖಿಸಿಲ್ಲ. ಪ್ರಿಯಾಂಕಾ ಮತ್ತು ನಾನು ನಮ್ಮ ತಾಯಿಯೊಂದಿಗೆ ಕುಳಿತು ಎಲ್ಲವನ್ನೂ ಚರ್ಚಿಸಿದೆವು ಎಂದರು.

ಆ ನೆನಪುಗಳಿಗೆ ಹಿಂತಿರುಗಿದಾಗ ಆ ಸಮಯದಲ್ಲಿ ನಾವು ಅನುಭವಿಸಿದ ಸಂತೋಷ, ನಗು ಮತ್ತು ನೋವು ಮತ್ತೆ ಮರುಕಳಿಸಿತು. ಅಮ್ಮನ ಸಂಬಂಧದ ಪ್ರಯಾಣವು ಅಗಾಧ ಪ್ರೀತಿ ಮತ್ತು ಭಯಾನಕ ದುರಂತದಿಂದ ತುಂಬಿತ್ತು. ಅವರು ಅದನ್ನೆಲ್ಲ ಘನತೆ ಮತ್ತು ಧೈರ್ಯದಿಂದ ಎದುರಿಸಿದ್ದಾರೆ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ತಾಯಿ ಸೋನಿಯಾ ಗಾಂಧಿ ಜೊತೆಗಿನ ಹಳೆಯ ನೆನಪುಗಳನ್ನು ರಾಹುಲ್, ಪ್ರಿಯಾಂಕಾ ಗಾಂಧಿ ಮೆಲುಕು ಹಾಕಿದರು.ಪುಸ್ತಕದಲ್ಲಿ ಉಲ್ಲೇಖಿಸದ ರಹಸ್ಯಗಳನ್ನು ಸೋನಿಯಾ ತಮ್ಮ ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ.

ಅದೊಂದು ಪ್ರಸ್ತಾವನೆ ಯೋಜನೆಯ ಪ್ರಕಾರ ನಡೆಯಲಿಲ್ಲ ಮತ್ತು ನನ್ನ 7ನೇ ಹುಟ್ಟುಹಬ್ಬಕ್ಕೂ ಅದು ಸಾಧ್ಯವಾಗಲಿಲ್ಲ. 2004ರ ನಿರ್ಧಾರದಿಂದ ಕೆಲವರಿಗೆ ನಿರಾಳತೆ, ಇನ್ನು ಕೆಲವರಿಗೆ ಸಂತೋಷವಾಗಿತ್ತು. ಅಪ್ಪನ ಭದ್ರತೆಯನ್ನು ಹಿಂತೆಗೆದುಕೊಳ್ಳುವುದರ ಹಿಂದೆ ಒಂದು ಉದ್ದೇಶವಿತ್ತು ಎಂದು ರಾಜೀವ್‌ ಗಾಂಧಿ ಹತ್ಯೆಗೆ ಈ ನಿರ್ಧಾರವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

💬 ಕಾಮೆಂಟ್ • Comments (0)

💬 ಓದುಗರ ಕಾಮೆಂಟ್‌ಗಳು • Reader Comments (0)

ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others