ಪದ್ಮಭೂಷಣಕ್ಕೆ ಏಕೆ ಸೀಮಿತವಾಗಬೇಕು? ಜ್ಞಾನೇಶ್ ಕುಮಾರ್ ಅವರಿಗೆ ‘ಭಾರತ ರತ್ನ’ ನೀಡಬೇಕು : ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಬೇಕು ಎಂದು ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ, ಮುಖ್ಯ ಚುನಾವಣಾ ಆಯುಕ್ತರಿಗೆ ‘ಪದ್ಮಭೂಷಣ’ ಪ್ರಶಸ್ತಿ ನೀಡುವ ಕುರಿತಾದ ಪ್ರಸ್ತಾಪದ ಬಗ್ಗೆ ಕೇಳಿದಾಗ, ಅಬ್ದುಲ್ಲಾ ಅವರು ವ್ಯಂಗ್ಯವಾಗಿ, ಕೇವಲ ಅದನ್ನೇ ಏಕೆ, ‘ಭಾರತ ರತ್ನ’ವನ್ನೇ ಏಕೆ ನೀಡಬಾರದು ಎಂದು ಪ್ರಶ್ನಿಸಿದರು.ಭಾರತೀಯ ಚುನಾವಣಾ ಆಯೋಗವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. […]
ಎಷ್ಟು ಚುನಾವಣೆಗಳಲ್ಲಿ ಮತದಾರರು ನಿಮ್ಮನ್ನು ಓಡಿಸಿದ್ದಾರೆ; ಹರಿಪ್ರಸಾದ್ ವಿರುದ್ಧ ವಿಜಯೇಂದ್ರ ಕಿಡಿ

ಬೆಂಗಳೂರು: ಬಿಕೆ ಹರಿಪ್ರಸಾದ್ರವರ ಹಿನ್ನೆಲೆ ಏನೆಂದು ಎಲ್ಲರಿಗೂ ಗೊತ್ತಿದೆ. ನಿಮ್ಮ ಜೀವನದಲ್ಲೇ ಒಂದು ಚುನಾವಣೆ ಗೆಲ್ಲೋಕೆ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ , ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ವಿರುದ್ಧ ಯಾವುದೇ ಆರೋಪಗಳನ್ನು ಮಾಡಿರಲಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ಅವರು ಸಾಂವಿಧಾನಿಕ ಸಂಸ್ಥೆಗಳ ಘನತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇಷ್ಟು […]
ಏನೇ ಭಿನ್ನಾಭಿಪ್ರಾಯಗಳಿದ್ದರೂ 4 ಗೋಡೆ ಮಧ್ಯೆ : ನನಗೆ ಕಾಂಗ್ರೆಸ್ ಪಕ್ಷದ ಭವಿಷ್ಯವೇ ಮುಖ್ಯ – ಪ್ರದೀಪ್ ಈಶ್ವರ್

ಬೆಂಗಳೂರು: ಏನೇ ಭಿನ್ನಾಭಿಪ್ರಾಯಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ, ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ. ನನಗೆ ನನ್ನ ಪಕ್ಷವೇ ಮುಖ್ಯ, ನನ್ನ ಕಾಂಗ್ರೆಸ್ ಪಕ್ಷದ ಭವಿಷ್ಯವೇ ಮುಖ್ಯ. ಕಾಂಗ್ರೆಸ್ ಪಾರ್ಟಿ ಕಚೇರಿಯಲ್ಲಿ ಕಸ ಗುಡಿಸಲು ನಾನು ಸಿದ್ಧ ಎಂದು ಅವರು ಹೇಳಿದ್ದಾರೆ. ಎಂ.ಸಿ ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ನಡುವೆ ಬಿನ್ನಾಭಿಪ್ರಾಯಗಳು ಕೇಳಿಬಂದ ಹಿನ್ನೆಲೆಯಲ್ಲೇ ಪ್ರದೀಪ್ ಈಶ್ವರ್ ಸ್ಪಷ್ಟನೆ ನೀಡಿದ್ದಾರೆ.ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತದ ಚರ್ಚೆ ಮತ್ತೆ ಮುನ್ನೆಲೆಗೆ […]
ವಿಶ್ವ ಹೃದಯ ದಿನ: ನಿಮ್ಮ ಹೃದಯವನ್ನು ಪ್ರೀತಿಸಿ, ಬದುಕನ್ನು ಉಳಿಸಿ – ಮಾಹಿತಿ ಇಲ್ಲಿದೆ ನೋಡಿ

ವಿಶ್ವ ಹೃದಯ ದಿನ. ಆರೋಗ್ಯವೇ ಸಂಪತ್ತು ಎಂಬುದನ್ನು ನೆನಪಿಸುವ ದಿನ.ಕೆಂಪು ಬಣ್ಣದ ಹೃದಯ ನಮ್ಮ ಎದೆಯೊಳಗೂ ಒಂದು ಹೃದಯ ಪ್ರತಿ ಕ್ಷಣವೂ ಮಿಡಿಯುತ್ತಿದೆ. ಯಾವುದೇ ವಿಶ್ರಾಂತಿ ಇಲ್ಲದೆ, ಯಾವುದೇ ರಜೆ ಇಲ್ಲದೆ. ಹುಟ್ಟಿನಿಂದ ಸಾವಿನವರೆಗೆ ಅವಿರತವಾಗಿ ದುಡಿಯುವ ಈ ಒಂದು ಅಂಗಕ್ಕೆ ನಾವು ಎಷ್ಟು ಕೃತಜ್ಞರಾಗಿದ್ದೇವೆ? ಈ ಪ್ರಶ್ನೆಯನ್ನೇ ಈ ದಿನ ನಮ್ಮ ಮುಂದಿಡುತ್ತದೆ. “ನಿಮ್ಮ ಹೃದಯವನ್ನು ಪ್ರೀತಿಸಿ… ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಹೃದಯದ ಆರೋಗ್ಯವೇ ಸಂತೋಷದ ಜೀವನದ ಆಧಾರ.” ಇದು ಕೇವಲ ಶುಭಾಶಯದ ಸಂದೇಶವಲ್ಲ, ಇದು […]
ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ದಾಖಲೆ : ಹಳೆಯ ದಾಖಲೆ ಪುಡಿಗಟ್ಟಿದ ನೀರೂ ಧಾಂಡಾ- ಭಾರತಕ್ಕೆ ಹೆಮ್ಮೆಯ ಚಿನ್ನದ ಪದಕ

ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಹಲವು ಐತಿಹಾಸಿಕ ದಾಖಲೆಗಳನ್ನು ಬರೆದಿದ್ದಾರೆ. ನೀರು ಧಾಂಡಾ (ಮಹಿಳೆಯರ ಟ್ರ್ಯಾಪ್ ಶೂಟಿಂಗ್): ಶೂಟರ್ ನೀರು ಧಾಂಡಾ ಅವರು ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಫೈನಲ್ನಲ್ಲಿ 28 ಅಂಕಗಳನ್ನು ಗಳಿಸುವ ಮೂಲಕ ಹಳೆಯ ಏಷ್ಯನ್ ದಾಖಲೆಯನ್ನು (24 ಅಂಕಗಳು) ಮುರಿದು ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ. 1978ರ ನಂತರ ಈ ವಿಭಾಗದಲ್ಲಿ ಭಾರತಕ್ಕೆ ಸಂದ ಮೊದಲ ವೈಯಕ್ತಿಕ ಚಿನ್ನದ ಪದಕ ಇದಾಗಿದೆ. ಮಂಗಳವಾರ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ […]
ಬಿಜೆಪಿ ನಾಯಕರೆಲ್ಲಾ ನನ್ನನ್ನೂ ವಾಷಿಂಗ್ ಮಷಿನ್ಗೆ ಹಾಕಿ ಕ್ಲೀನ್ ಮಾಡಿದ್ರು : ಶಾಸಕ ಶಿವರಾಮ ಹೆಬ್ಬಾರ್

ಕಾರವಾರ: ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ನಾನು ನಿಮಗೆ ಆಶ್ಚರ್ಯವನ್ನುಂಟು ಮಾಡಿರಬಹುದು. ಆದರೆ ನನಗೇನೂ ಆಶ್ಚರ್ಯವಾಗಿಲ್ಲ. ಇಂದು ನಾನು ಸ್ವತಂತ್ರ ಹಕ್ಕಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದ್ದಾರ ಯಾರೆಲ್ಲಾ ಬಿಜೆಪಿಗೆ ಹೋಗುತ್ತಾರೋ ಅವರನ್ನು ವಾಷಿಂಗ್ ಮಿಷನ್ಗೆ ಹಾಕಿದರೆ ಎಲ್ಲವೂ ಕ್ಲೀನ್ ಆಗುತ್ತದೆ. ನನ್ನನ್ನೂ ವಾಷಿಂಗ್ ಮಷಿನ್ನಲ್ಲಿ ಹಾಕಿದ್ದರು ಎಂದು ಬಿಜೆಪಿ ಉಚ್ಚಾಟಿತ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ವ್ಯಂಗ್ಯವಾಡಿದರು . ಕೇಂದ್ರ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮೊದಲ ಬಾರಿಗೆ ಮುಕ್ತವಾಗಿ ಪಾಲ್ಗೊಂಡರು. […]
ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನ ಭೌತಿಕ ಪರಿಶೀಲನೆ ಹಾಗೂ ವೈಜ್ಞಾನಿಕ ಸ್ಥಳ ಪರಿಶೀಲನೆ ನಡೆಸಬೇಕು : ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು/ನವದೆಹಲಿ: ಕರಾವಳಿ ವಲಯ ನಿರ್ವಹಣಾ ಯೋಜನೆ (ಸಿಝಡ್ಎಂಪಿ) ಪರಿಷ್ಕರಣೆ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಎ) ಕುರಿತ ಪ್ರಸ್ತಾವಿತ ಅಧಿಸೂಚನೆಗೆ ಸಂಬಂಧಿಸಿದಂತೆ ಕರ್ನಾಟಕದ ಕಳವಳಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಸಿಎಂ ಡಿಕೆಶಿ ಒತ್ತಾಯಿಸಿದ್ದಾರೆ. ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಎದುರಿಸುತ್ತಿರುವ ಕಳವಳಗಳನ್ನು ತಕ್ಷಣವೇ […]
ಬಿಜೆಪಿಗರು ಎಂದಾದರೂ ವೇದಿಕೆಯ ಮೇಲೆ ‘ಹರ್ ಹರ್ ಮಹಾದೇವ್’ ಎಂದು ಹೇಳಿದ್ದಾರೆಯೇ? : ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿ ಗರಂ

ಹೈದರಾಬಾದ್: ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಡೆದ ‘ಸೈಮನ್ ಗೋ ಬ್ಯಾಕ್’ ಚಳವಳಿಯಂತೆಯೇ, ದೇಶದಲ್ಲಿ ಎಸ್ಐಆರ್ (SIR) ವಿರುದ್ಧವೂ ಹೋರಾಟ ನಡೆಯಲಿದೆ ಎಂದು ರೆಡ್ಡಿ ಹೇಳಿದ್ದಾರೆ. ಉತ್ತರ ಭಾರತದಲ್ಲಿ ಶ್ರೀರಾಮನನ್ನು ಪೂಜಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಶಿವನನ್ನು ಆರಾಧಿಸಲಾಗುತ್ತದ. ಆದರೆ ಬಿಜೆಪಿ ಉತ್ತರದಲ್ಲಿ ಶ್ರೀರಾಮನನ್ನು ಕಸಿದುಕೊಂಡಿದೆ. ಹೀಗಾಗಿ ಕಾಂಗ್ರೆಸ್ ದಕ್ಷಿಣದಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ರೆಡ್ಡಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ಪೂಜಿಸಲ್ಪಡುವ ಶ್ರೀರಾಮನನ್ನು ಬಿಜೆಪಿ ಕಸಿದುಕೊಂಡಿದೆ, ಆದರೆ ದಕ್ಷಿಣ ರಾಜ್ಯಗಳಲ್ಲಿ ಶಿವನನ್ನು […]
ಉಭಯ ದೇಶಗಳ ಸಂಬಂಧ ಹಲವು ಸವಾಲುಗಳನ್ನು ಎದುರಿಸಿದೆ : ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್

ನ್ಯೂಯಾರ್ಕ್: ಗಡಿಯಾಚೆಗಿನ ಭಯೋತ್ಪಾದನೆ ಕುರಿತ ಭಾರತದ ಕಳವಳವನ್ನು ಪಾಲುದಾರ ರಾಷ್ಟ್ರಗಳು ಸಮರ್ಪಕವಾಗಿ ಅರ್ಥಮಾಡಿಕೊಳ್ಳದಿದ್ದರೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಅಮೆರಿಕವು ಪಾಕಿಸ್ತಾನದೊಂದಿಗೆ ಮತ್ತೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ಭಾರತಕ್ಕೆ ನಿರ್ದಿಷ್ಟವಾಗಿ ಅತ್ಯಂತ ಮಹತ್ವದ್ದಾಗಿರುವುದು ಭಯೋತ್ಪಾದನೆಯ ವಿಚಾರ. ಹಲವು ದಶಕಗಳಿಂದ ನೆರೆಯ ರಾಷ್ಟ್ರದಿಂದ ಉದ್ದೇಶಪೂರ್ವಕ ನೀತಿಯ ಭಾಗವಾಗಿ ನಾವು ಭಯೋತ್ಪಾದನೆಯನ್ನು ಎದುರಿಸಿದ್ದೇವೆ. ನಮಗೆ ಇಷ್ಟು ಆಳವಾಗಿ ಮಹತ್ವದ್ದಾಗಿರುವ ವಿಚಾರವೊಂದನ್ನು ಅರ್ಥಮಾಡಿಕೊಳ್ಳದಿದ್ದರೆ, […]
ನಿಮ್ಮಲ್ಲಿ ಸತ್ಯದ ಧೈರ್ಯವಿದ್ದರೆ, ವಾಸ್ತವ ಸಂಗತಿಗಳನ್ನು ಮುಂದಿಡಿ, ಆರೋಪಗಳ ಕುರಿತು ತನಿಖೆ ನಡೆಸಿ : ಬಿಕೆ ಹರಿಪ್ರಸಾದ್

ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಅನುಸರಿಸಿದ ತಂತ್ರಗಾರಿಕೆಯನ್ನು ಕರ್ನಾಟಕದಲ್ಲೂ ಪುನರಾವರ್ತಿಸಲು ಬಿಜೆಪಿ ನೇತೃತ್ವದ ಎನ್ಡಿಎಗೆ ಸಾಧ್ಯವಿಲ್ಲ. ಅಲ್ಲದೆ, ಚುನಾವಣಾ ಆಯೋಗವು ತನ್ನ ಕಾರ್ಯವೈಖರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ವ್ಯಕ್ತಪಡಿಸಿದ ಆಕ್ಷೇಪಣೆಗಳನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ಈ ವಿಷಯಗಳಿಗೆ ಚುನಾವಣಾ ಆಯೋಗವು ಪಾರದರ್ಶಕವಾಗಿ ಪ್ರತಿಕ್ರಿಯಿಸಬೇಕೆಂದು ಆಗ್ರಹಿಸಿದರು. ‘ನಿಮ್ಮಲ್ಲಿ ಸತ್ಯದ ಧೈರ್ಯವಿದ್ದರೆ, ವಾಸ್ತವ ಸಂಗತಿಗಳನ್ನು ಮುಂದಿಡಿ, ಆರೋಪಗಳ ಕುರಿತು […]