ಇಂಡೋನೇಷ್ಯಾದ ನಾಗರಿಕ ಗೌರವ ‘ಬಿಂಟಾಂಗ್ ಆದಿಪೂರ್ಣ’ ಪ್ರಶಸ್ತಿ ಪಡೆದ ಮೋದಿ

ಜಕಾರ್ತಾ:ವಿದೇಶಿಗಳಲ್ಲಿ ಪ್ರವಾಸ ಮಾಡಿ ಹೆಸರು ಪಡೆದ ಮೋದಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಇವತ್ತು ಮತ್ತೊಂದು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹೌದು ನರೇಂದ್ರ ಮೋದಿಗೆ ಇಂಡೋನೇಷ್ಯಾ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ‘ಬಿಂಟಾಂಗ್ ಆದಿಪೂರ್ಣ’ ಪದಕ ನೀಡಿ ಗೌರವಿಸಲಾಗಿದೆ. ಇಂದು ಜಕಾರ್ತಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಪ್ರಧಾನಿ ಮೋದಿ ಅವರಿಗೆ ಈ ಅತ್ಯುನ್ನತ ‘ಮೆಡಲ್ ಆಫ್ ಆನರ್’ ಪ್ರದಾನ ಮಾಡಿದ್ದಾರೆ. ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ಮಹಾಸಾಗರ್ ದೃಷ್ಟಿಕೋನವನ್ನು […]
ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತಹ ಕ್ಷಣ ಬಂದಿದೆ : ಸಿಎಂ ಡಿಕೆ ಶಿವಕುಮಾರ್

CM DK Shivakumar ಬೆಂಗಳೂರು: ಇಂದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತಹ ಕ್ಷಣ ಬಂದಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಹೇಳಿದ್ದಾರೆ. ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ, ಭಾರತದ ಐದು ರಾಜ್ಯಗಳು ‘ಮೇಲ್ಮಧ್ಯಮ ವರ್ಗದ ಆದಾಯ ಹೊಂದಿರುವ ಆರ್ಥಿಕತೆಗಳ ಮಿತಿಯನ್ನು (ಕಟ್ ಆಫ್) ಯಶಸ್ವಿಯಾಗಿ ದಾಟಿದ್ದು, ಈ ಪೈಕಿ ಕರ್ನಾಟಕವು ಮುಂಚೂಣಿಯಲ್ಲಿದೆ. ದೆಹಲಿ ಮೊದಲ ಸ್ಥಾನದಲ್ಲಿದೆ ಎಂದರು. ಕರ್ನಾಟಕವು 5,579 ಡಾಲರ್ ತಲಾ ಆದಾಯದೊಂದಿಗೆ ದ್ವಿತೀಯ ಸ್ಥಾನ ಪಡೆದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಈ ಮಹತ್ವದ ಸಾಧನೆಯ […]
ಕೈ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಮತ್ತೊಂದು ನಿದರ್ಶನ ಶುರು: ಆರ್.ಅಶೋಕ್

ಬೆಂಗಳೂರು: ವಾಲ್ಮೀಕಿ ನಿಗಮದ ಬಳಿಕ ಇದೀಗ ರಾಜ್ಯದ ಮತ್ತೊಂದು ನಿಗಮದ ವಿರುದ್ಧ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಬಿಜೆಪಿಗರು ಸಿಡಿದ್ದೆದ್ದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ಒಂದಲ್ಲಾ ಒಂದು ಹಗರಣಗಳು ಬೆಳಕಿಗೆ ಬರುತ್ತಿದೆ ಇದರ ಬಗ್ಗೆ ತನಿಖೆ ಮಾಡಿ ಎಂದು ಆರ್ ಅಶೋಕ್ ಹೇಳಿದ್ದಾರೆ. ದೇವರಾಜ ಅರಸು ನಿಗಮದಲ್ಲಿ ಭಾರೀ ಗೋಲ್ಮಾಲ್ ನಡೆದಿರುವುದಾಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. 10,000 ರೂ. ಮೌಲ್ಯದ ಹೊಲಿಗೆ ಮಿಷಿನ್‌ಗೆ 17,000 ರೂ. ನಿಗದಿ ಪಡಿಸಲಾಗಿದೆ. ಟೆಂಡರ್ […]
ಬಿಟ್ಟು ಕೊಟ್ಟವರಿಗೆ ಬಿಟ್ಟಿರುವುದು ಕಷ್ಟವೇ? ಇದು ವಿಷಕಾರಿ ಲವ್ ಸ್ಟೋರಿ- ಒಂದೊಮ್ಮೆ ಓದಿ

ಜೀವನದಲ್ಲಿ ಯೌವನ ಎಂಟ್ರಿಯಾಗುತ್ತಿದ್ದಂತೆ, ಮನಸ್ಸು ಹಿಡಿತಕ್ಕೆ ಸಿಗುವುದಿಲ್ಲ. ನಿಯಂತ್ರಣವಿಲ್ಲದ ಹೃದಯಕ್ಕೆ ಪ್ರೀತಿ ಎನ್ನುವ ಔಷಧಿ ಬೇಕಿರುತ್ತದೆ. ಹದಿ ಹರೆಯದಲ್ಲಿ ಪ್ರೀತಿಯಾಗುವುದು ಎಲ್ಲರಿಗೂ ಸಹಜವಾಗಿದ್ದು, ಈ ಪ್ರೀತಿಗಾಗಿ ಫ್ಯಾಮಿಲಿ ಜತೆ ಕೆಲವರು ಹೋರಾಟವೇ ಮಾಡುತ್ತಾರೆ. ಇನ್ನು ಹಲವರು ನೆನಪಿನಲ್ಲಿ ತೇಲಾಡುತ್ತಾರೆ. ಹೀಗಿರುವಾಗ ಈ ವಿಷಕಾರಿ ಪ್ರೇಮ ಎನ್ನುವುದು ಕೊನೆಯತನಕ ಕಿರಿ-ಕಿರಿ ಮಾಡುತ್ತಲೇ ಇರುತ್ತದೆ. ಈ ಬಾಂಧವ್ಯದಲ್ಲಿ ನೆಮ್ಮದಿ ಎನ್ನುವುದು ನೆಲೆಸಿರುವುದಿಲ್ಲ. ಇಲ್ಲಿ ಹುಡುಗ ಪ್ರಾಮಾಣಿಕತೆಯಿಂದ ಇದ್ದರೆ, ಹುಡುಗಿ ಅದರ ವಿರುದ್ಧವಾಗಿರುತ್ತಾಳೆ. ಇಬ್ಬರು ಪ್ರೀತಿಸಿ ಮದುವೆಯಾಗುವುದಕ್ಕಿಂತ ಹೆಚ್ಚು ಬೇರೆ ಬೇರೆಯವರನ್ನು […]
ರಾಜ್ಯವನ್ನು ಹಾಳು ಮಾಡುತ್ತಿರುವ ಕೈ ಮುಗಿಸಲೆಂದೇ ನಾನು ಕಮಲ ಜತೆ ಇದ್ದೀನಿ: ಎಚ್‌ಡಿಕೆ

ಬೆಂಗಳೂರು: ರಾಜ್ಯವನ್ನು ಹಾಳು ಮಾಡುತ್ತಿರುವ ನಿಮ್ಮನ್ನು ಮುಗಿಸಲೆಂದೇ ನಾನು ಬಿಜೆಪಿ ಜತೆಗೆ ಕೈಜೋಡಿಸಿದ್ದೇನೆ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಜವಾಗಿ ನನ್ನನ್ನು ದುರುಪಯೋಗ ಮಾಡಿಕೊಂಡವರು ನಿಮ್ಮ ಪಕ್ಷದವರು ಎಂದು ತಿರುಗೇಟು ಕೊಟ್ಟರು. ನನ್ನನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ನಿನ್ನಿಂದ ಕರ್ನಾಟಕದ ಜನರಿಗೆ ಒಳ್ಳೆಯ ಕೆಲಸ ಮಾಡಿಸುತ್ತೇನೆ. ಒಳ್ಳೊಳ್ಳೆ ಕಾರ್ಯಕ್ರಮ ಕೊಡುವಿಯಂತೆ ಎಂದಿದ್ದರು. ಆಗ ನಾನು ಹೋಗಲಿಲ್ಲ ಎಂದು […]
ಕರ್ನಾಟಕದ ಈ ಜಿಲ್ಲೆಗಳಲ್ಲಿ ಜು 7ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ರಾಮಮಂದಿರ ಟ್ರಸ್ಟ್ ಮುಖ್ಯಸ್ಥ ಚಂಪತ್ ರೈ ರಾಜೀನಾಮೆ ಅಂಗೀಕಾರ!

ನವದೆಹಲಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ (ಮುಖ್ಯಸ್ಥ) ಚಂಪತ್ ರೈ (Champat Rai) ಅವರು ತಮ್ಮ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಟ್ರಸ್ಟ್ ಅಧಿಕೃತವಾಗಿ ಅಂಗೀಕರಿಸಿದೆ. ಮಂದಿರದ ದೇಣಿಗೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಮತ್ತು ಕಳ್ಳತನ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ವಿವಾದದ ಹಿನ್ನೆಲೆ: ರಾಮಮಂದಿರ ನಿರ್ಮಾಣ ಮತ್ತು ಟ್ರಸ್ಟ್‌ಗೆ ಸಾರ್ವಜನಿಕರಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆಯ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು […]
ಅಕ್ರಮ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್) ಯ ಮೂಲ ಆಶಯವನ್ನೇ ಕಾಂಗ್ರೆಸ್ ಸರ್ಕಾರ ಬುಡಮೇಲು ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. ಬೆಂಗಳೂರಿನಲ್ಲಿ ಇಂದು ಎನ್ಡಿಎ ನಿಯೋಗದಲ್ಲಿ ತೆರಳಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಕೇಂದ್ರ ಸಚಿವರು ಮಾತನಾಡಿದರು. ಕೇಂದ್ರ ಚುನಾವಣಾ ಆಯೋಗ ರೂಪಿಸಿರುವ ಎಸ್ ಐ ಆರ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರವು ಸಂಪೂರ್ಣವಾಗಿ ಗಾಳಿಗೆ […]
ರಾಜ್ಯ ಸರಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಈ ಗಂಭೀರ ಆರೋಪ

ಬೆಂಗಳೂರು: ರಾಷ್ಟ್ರದಲ್ಲಿಯೇ ಪ್ರತಿಷ್ಠಿತ ಕಾರ್ಖಾನೆಯಾಗಿದ್ದ ಹೆಚ್ಎಂಟಿ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲಿಯೇ ರಾಜ್ಯ ಕಾಂಗ್ರೆಸ್ ಸರಕಾರವು ಅರಣ್ಯ ಇಲಾಖೆಯನ್ನು ಚೂ ಬಿಟ್ಟು ಅಡ್ಡಿಪಡಿಸಲು ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅತ್ಯಂತ ಗಂಭೀರ ಆರೋಪ ಮಾಡಿದರು. ಕೆಲ ಮಾಧ್ಯಮಗಳಲ್ಲಿ ಹೆಚ್ಎಂಟಿಗೆ ರಾಜ್ಯ ಅರಣ್ಯ ಇಲಾಖೆ ನೋಟಿಸ್ ನೀಡಿ ಭೂಮಿ ತೆರವು ಮಾಡಲು ಗಡುವು ವಿಧಿಸಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಕೇಂದ್ರ […]
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಗೆ ಕೋರ್ಟ್ ಬಿಗ್ ರಿಲೀಫ್

ಹೈದರಾಬಾದ್: ಇಲ್ಲಿನ ಪ್ರಸಿದ್ಧ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರು ಸೋಮವಾರ ನಾಂಪಲ್ಲಿ ಕೋರ್ಟ್‌ಗೆ ವರ್ಚುವಲ್ ಆಗಿ ವಿಚಾರಣೆಗೆ ಹಾಜರಾಗಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್ ನಿಮಿತ್ತ ಮುಂಬೈನಲ್ಲಿರುವ ಕಾರಣ, ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಅನುಮತಿ ನೀಡಿತ್ತು. ಅದರಂತೆ ಅಲ್ಲು ಅರ್ಜುನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ […]