ವರುಣನ ಅಬ್ಬರಕ್ಕೆ ನಿಪ್ಪಾಣಿಯ ಮೂರು ಸಂಪರ್ಕ ಸೇತುವೆಗಳು ಜಲಾವೃತ

ಬೆಳಗಾವಿ: ರಾಜ್ಯದ ಕೆಲವು ಭಾಗಗಳಲ್ಲಿ ಭಾರಿಯಾಗಿದ್ದು, ಜಿಲ್ಲೆಗಳಿಗೂ ವರುಣ ಆವರಿಸಿಕೊಂಡಿದ್ದಾನೆ. ಕೆಲವು ಕಡೆ ನಿಲ್ಲದೆ ಮಳೆ ಇದ್ದರೆ ಇನ್ನು ಹಲವು ಕಡೆ ವರುಣ ಬರುತ್ತಿಲ್ಲ ಎಂದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹೌದು ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ ಇದರ ಪರಿಣಾಮದಿಂದ ವಾಹನ ಸವಾರರು ರಸ್ತೆಗೆ ಇಳಿಯುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಎಲ್ಲಿ ಅಂದರೆ ಅಲ್ಲಿ ಗಿಡ ಮರಗಳು ಧರೆಗೆ ಉರುಳುತ್ತಿವೆ. ಇತ್ತ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಆರ್ಭಟ ಹಿನ್ನೆಲೆ ನಿಪ್ಪಾಣಿ ತಾಲೂಕಿನಲ್ಲಿ ಮೂರು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ […]

ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನನಲ್ಲಿ ಬಂಧಿಯಾಗಿರುವ ದರ್ಶನ್‌ ಬಗ್ಗೆ ಇದೀಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ. ನಾನು ಸೆಲೆಬ್ರಿಟಿ ಇನ್​ಚಾರ್ಜ್ ಅಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಪ್ರಿಯಾಂಕ್ ಖರ್ಗೆ, ಜೈಲು ಆಡಳಿತ ಮತ್ತು ಕೈದಿಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ಮಾಡಿ ಮಾತನಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸನ್ನಡತೆ ಆಧಾರದಲ್ಲಿ […]

ಜಾತಿಯನ್ನು ರಾಜಕೀಯದ ರಕ್ಷಣಾ ಕವಚವನ್ನಾಗಿ ಬಳಸಬಾರದು : ಸಂಸದ ಸುಧಾಕರ್

ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತಿ ವೇಳೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ವಿಚಾರಕ್ಕೆ ಸಂಸದ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಘಟನೆಗೆ ಸಂಸದ ಡಾ.ಕೆ.ಸುಧಾಕರ್ ಹಾಗೂ ಅವರ ತಂದೆ ಕೇಶವ ರೆಡ್ಡಿ ಕಾರಣ ಎಂದು ಬಲಿಜ ಸಮುದಾಯದ ಕೆಲ ಮುಖಂಡರು ಎಸ್‌ಪಿಗೆ ದೂರು ನೀಡಿರುವ ವಿಚಾರಕ್ಕೆ ಸಂಸದ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಬಳ್ಳಾಪುರದ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು ,ಜಾತಿಯನ್ನು ರಾಜಕೀಯದ ರಕ್ಷಣಾ ಕವಚವನ್ನಾಗಿ ಬಳಸಬಾರದು. ಕೈವಾರ ತಾತಯ್ಯನವರ ಮೇಲೆ ತಮಗೂ […]

ಸಲುಗೆ ಕೊಟ್ರೆ ಸರಸಕ್ಕೆ ಕರಿಯುವುದು ಸರಿಯೇ? ಅನಾವಶ್ಯಕ ಹಾಯ್‌, ಹಲೋ ಸಂದೇಶ ಯಾಕೆ? ಇದನ್ನೊಮ್ಮೆ ಓದಿ

ಹೆಣ್ಣನ್ನು ಪ್ರಕೃತಿಗೆ ಹೋಲಿಕೆ ಮಾಡುತ್ತಿದ್ದು, ಕೆಲವೊಮ್ಮೆ ದೇವರ ಸ್ಥಾನದಲ್ಲಿಯೂ ತಂದು ನಿಲ್ಲಿಸುತ್ತಾರೆ. ಈ ಸಲುಗೆ ಎನ್ನುವ ವಿಚಾರ ಈ ಲೇಖನದಲ್ಲಿ ಸ್ತ್ರೀಯರಿಗೆ ಸೇರಿದೆ. ಹೌದು ಹೆಣ್ಣು ಮಕ್ಕಳು ಗೆಳೆಯತನಕ್ಕಾಗಿ ಅತೀ ಹೆಚ್ಚಾಗಿ ಗಂಡು ಮಕ್ಕಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ ಎಲ್ಲ ವಿಷಯಗಳಲ್ಲಿ ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳಿಗೆ ಕೆಲವು ವೇಳೆ ಆಸರೆ ಆಗುವುದಿಲ್ಲ ಎನ್ನುವ ಬಲವಾದ ಮನೋಭಾವ ಹೊಂದಿರುತ್ತಾರೆ. ಹೌದು ಕೆಲಸಕ್ಕಾಗಿ ಅಥವಾ ಯಾವುದೋ ವಿಚಾರಕ್ಕಾಗಿ ಪುರುಷ ಹತ್ತಿರ ಮಹಿಳೆಯರು ಹೆಲ್ಪ್‌ ಕೇಳುತ್ತಿದ್ದು, ಇದನ್ನೇ ಹಲವು ಯುವಕರು […]

ಅಕ್ರಮ ಗಣಿಗಾರಿಕೆ ಕೇಸ್​: ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಎದುರಾಯ್ತು ಸಂಕಷ್ಟ?

Janardhana Reddy ಬಳ್ಳಾರಿ: ರಾಜ್ಯದ ರಾಜಕಾರಣದಲ್ಲಿ ದಿನಕ್ಕೊಂದು ಖ್ಯಾತೆ-ಗಲಭೆ ಅಗರಣಗಳು ನಡೆಯುತ್ತಲೇ ಇರುತ್ತಿದ್ದು, ಕೆಲ ವೇಳೆ ರಾಜಕಾರಣಿಗಳು ಸಂಕಟಕ್ಕೆ ಸಿಲುಕಿಕೊಳ್ಳುತ್ತಾರೆ. ಇದೀಗ ಅಕ್ರಮ ಗಣಿಗಾರಿಕೆ ಕೇಸ್​ ನಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಲಿಯಾಗಿದ್ದಾರೆ. ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡುವಂತೆ ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಪರಿಸರ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಒಎಂಸಿ ಕಂಪನಿ ಕರ್ನಾಟಕ ಮತ್ತು ಆಂಧ್ರದ […]

ನಾಳೆ ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಕೈಹಿಡಿಯಲಿದ್ದಾರೆ ಬಾಲಿವುಡ್ ನಟ ಆಮಿರ್ ಖಾನ್

ಮುಂಬೈ: ಹಿಂದಿ ಚಿತ್ರರಂಗದ ಖ್ಯಾತ ನಟ ಆಮಿರ್ ಖಾನ್ ತಮ್ಮ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ತಮ್ಮ ದೀರ್ಘಕಾಲದ ಒಡನಾಡಿ ಗೌರಿ ಸ್ಪ್ರಾಟ್ ಅವರನ್ನು ಜುಲೈ 5ರಂದು ವಿವಾಹವಾಗುತ್ತಿರುವುದಾಗಿ ನಟ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ನಿವಾಸದಲ್ಲಿ ಸರಳ ಮದುವೆ ಸಂಭ್ರಮ ಈ ವಿವಾಹ ಮಹೋತ್ಸವವು ಮುಂಬೈನಲ್ಲಿರುವ ಆಮಿರ್ ಖಾನ್ ಅವರ ಸ್ವಗೃಹದಲ್ಲೇ ಅತ್ಯಂತ ಸರಳವಾಗಿ ನೆರವೇರಲಿದೆ. ಅದ್ಧೂರಿತನಕ್ಕೆ ಆಸ್ಪದ ನೀಡದೆ ಕೇವಲ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗದ ತೀರಾ ಕೆಲವು ಗಣ್ಯರನ್ನು ಮಾತ್ರ ಈ […]

ಸಿವಿಲ್ ಕಾನ್ ಸ್ಟೇಬಲ್ ನೇಮಕಾತಿ: ಅರ್ಜಿ ಸಲ್ಲಿಕೆಗೆ ಜುಲೈ 8ರವರೆಗೆ ಅವಕಾಶ

ಬೆಂಗಳೂರು: ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲು ಕಾಲಾವಕಾಶವನ್ನು ಜುಲೈ 8ರ ಸಂಜೆ 4ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ನಂತರ, ಅರ್ಜಿ ತಿದ್ದುಪಡಿಗೆ ಜುಲೈ 10ರಿಂದ 13ರವರೆಗೆ ಸಮಯ ನೀಡಲಾಗುವುದು. ಈ ಮುನ್ನ ಅರ್ಜಿ ಸಲ್ಲಿಸಲು ಜುಲೈ 3ರವರೆಗೆ ಹಾಗೂ ಶುಲ್ಕ ಪಾವತಿಸಲು ಜುಲೈ 4 ಕಡೆಯ ದಿನಾಂಕ ಎಂದು ನಿಗದಿಗೊಳಿಸಲಾಗಿತ್ತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ: ಕೇಂದ್ರ ಸಚಿವ ಕಿರಣ್ ರಿಜಿಜು ಮಾಹಿತಿ

ನವದೆಹಲಿ: ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು 2026ರ ಸಂಸತ್ತಿನ ಮುಂಗಾರು ಅಧಿವೇಶನವನ್ನು ಕರೆಯಲು ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮುಂಬರುವ ಮುಂಗಾರು ಅಧಿವೇಶನವು 2026ರ ಜುಲೈ 20ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 13ರವರೆಗೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಮುಖ ವಿಷಯಗಳ ಕುರಿತು ಸಂಸತ್ತಿನ ಉಭಯ […]

BMTC ಬಸ್ಸಿನಲ್ಲಿರೋ ಕ್ಯೂ ಆರ್ ಕೋಡ್ ಮೂಲಕ ಟಿಕೆಟ್ ಖರೀದಿಗೆ ಬ್ರೇಕ್: ETM ಸ್ಕ್ಯಾನ್ ಮಾಡಲು ಅವಕಾಶ

ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಬಸ್‌ಗಳಲ್ಲಿ ಪ್ರಯಾಣಿಸುವ ಜನರಿಗೆ ಡಿಜಿಟಲ್ ಪಾವತಿಯನ್ನು ಮತ್ತಷ್ಟು ಸುರಕ್ಷಿತ ಹಾಗೂ ಪಾರದರ್ಶಕಗೊಳಿಸಲು ಹೊಸದೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ಬಸ್‌ಗಳಲ್ಲಿ ಯುಪಿಐ (UPI) ಮುಖಾಂತರ ಟಿಕೆಟ್ ಅಥವಾ ದಿನದ ಪಾಸ್‌ಗಳನ್ನು (ಡೇ ಪಾಸ್) ಖರೀದಿಸುವ ಪ್ರಯಾಣಿಕರಿಗಾಗಿ ಸಂಸ್ಥೆಯು ಹೊಸ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ಆನ್‌ಲೈನ್ ವಹಿವಾಟಿನಲ್ಲಿ ಯಾವುದೇ ರೀತಿಯ ಲೋಪದೋಷ ಅಥವಾ ವಂಚನೆಗಳು ನಡೆಯದಂತೆ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಚಲೋ […]

ಇಂದು ಸಿಎಂ ಡಿ.ಕೆ ಶಿವಕುಮಾರ್ ನಡೆಸಿದ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿದೆ

ಬೆಂಗಳೂರು : ಎಲ್ ನಿನೊ (Elnino) ಪರಿಣಾಮದಿಂದಾಗಿ ಜಲ ವಿದ್ಯುತ್‌ ಉತ್ಪಾದನೆ ಕುಸಿಯುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ತುರ್ತು ಕಾರ್ಯಯೋಜನೆ ರೂಪಿಸುವ ಜೊತೆಗೆ ಸಂಗ್ರಹಣೆ ಮತ್ತು ಇತರೆ ಮೂಲಗಳ ಉತ್ಪಾದನೆಗೆ ತುರ್ತು ಗಮನ ಹರಿಸಿ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಸೂಚನೆ ನೀಡಿದರು. ಮೊದಲ ಬಾರಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು ಬರಗಾಲದ ಪರಿಸ್ಥಿತಿ ಎದುರಿಸಲು ಇಲಾಖೆ ಏನೇನು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎನ್ನುವ ಬಗ್ಗೆ ವಿವರಗಳನ್ನು ಪಡೆದು ಸಾರ್ವಜನಿಕ ಬಳಕೆಗೆ […]