ವರುಣನ ಅಬ್ಬರಕ್ಕೆ ನಿಪ್ಪಾಣಿಯ ಮೂರು ಸಂಪರ್ಕ ಸೇತುವೆಗಳು ಜಲಾವೃತ

ಬೆಳಗಾವಿ: ರಾಜ್ಯದ ಕೆಲವು ಭಾಗಗಳಲ್ಲಿ ಭಾರಿಯಾಗಿದ್ದು, ಜಿಲ್ಲೆಗಳಿಗೂ ವರುಣ ಆವರಿಸಿಕೊಂಡಿದ್ದಾನೆ. ಕೆಲವು ಕಡೆ ನಿಲ್ಲದೆ ಮಳೆ ಇದ್ದರೆ ಇನ್ನು ಹಲವು ಕಡೆ ವರುಣ ಬರುತ್ತಿಲ್ಲ ಎಂದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹೌದು ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ ಇದರ ಪರಿಣಾಮದಿಂದ ವಾಹನ ಸವಾರರು ರಸ್ತೆಗೆ ಇಳಿಯುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಎಲ್ಲಿ ಅಂದರೆ ಅಲ್ಲಿ ಗಿಡ ಮರಗಳು ಧರೆಗೆ ಉರುಳುತ್ತಿವೆ.

ಇತ್ತ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಆರ್ಭಟ ಹಿನ್ನೆಲೆ ನಿಪ್ಪಾಣಿ ತಾಲೂಕಿನಲ್ಲಿ ಮೂರು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ ಇದರಿಂದ ಸಾರ್ವಜನಿಕರಿಗೆ ಓಡಾಡಲು ಕಷ್ಟವಾಗಿದೆ.ಈ ಜಿಲ್ಲೆಯಲ್ಲಿನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಮುಳುಗಿದೆ. ಸೇತುವೆ ಮುಳಗಿದ ಹಿನ್ನಲೆ ಜನ ಭಯಭೀತರಾಗಿದ್ದಾರೆ.

ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಾರವಾಡ-ಕನ್ನೂರ, ಬೋಜವಾಡಿ-ಗಜವರವಾಡಿ ಸೇತುವೆಗಳೂ ಸಂಪೂರ್ಣ ಜಲಾವೃತವಾಗಿವೆ. ಮಹಾರಾಷ್ಟ್ರದಲ್ಲಿರುವ ರಾಜಾಪುರ-ಜುಗಳ ಸೇತುವೆ ಮೇಲೆಯೂ ನೀರು ಹರಿಯುತ್ತಿದ್ದು, ಉಕ್ಕಿ ಹರಿಯುತ್ತಿರುವ ನದಿಗಳಿಗೆ ಯಾರೂ ಇಳಿಯದಂತೆ ಸಂಬಂಧಪಟ್ಟ ಇಲಾಖೆ ಎಚ್ಚರಿಕೆ ನೀಡಲಾಗಿದೆ.

ಎಲ್ಲಿ ಅಂದರೆ ಅಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ, ನಿಲ್ಲದೆ ಮಳೆಗೆ ಜನ ಬೇಸತ್ತಿದ್ದಾರೆ. ನದಿ ದಂಡಗಳ ಮೇಲೆ ಓಡಾಡುವುದಕ್ಕೆ ಪ್ರವಾಸಿಗರಿಗೆ ಬ್ರೇಕ್‌ ಬಿದ್ದಿದೆ. ಇನ್ನು ನದಿ ಮತ್ತು ಸೇತುವೆ ಹತ್ತಿರ ತೆರಳದಂತೆ ಎಚ್ಚರಿಕೆ ವಹಿಸಲಾಗಿದೆ.

ರಾಜ್ಯದ ಇನ್ನು ಕೆಲವು ಭಾಗಗಳಲ್ಲಿ ಮಳೆರಾಯ ಹೆಜ್ಜೆ ಇಟ್ಟಿ ಮಳೆಗಾಗಿ ಕೆಲವು ಕಡೆ ದೊಡ್ಡ ಮಟ್ಟದ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಹಲವು ಕಡೆ ವರಣಾಬ್ಬರ ಜೋರಾಗಿದ್ದರೆ, ಮತ್ತೊಂದು ಕಡೆ ಮಳೆ ಕಾಣಿಸಿಕೊಳ್ಳದಂತಹ ಸ್ಥಿತಿ ಎದುರಾಗಿದೆ.

Share it :

Leave a Reply

Your email address will not be published. Required fields are marked *