ಕ್ರಿಕೆಟ್ ಜಗತ್ತಿನ ಹೊಸ ರಾಣಿ : ಸ್ಮೃತಿ ಮಂಧಾನ ಅಬ್ಬರಕ್ಕೆ ವಿಶ್ವ ದಾಖಲೆಗಳು ಧೂಳೀಪಟ

ಬುದ್ದಿವಂತಿಕೆ, ಸೌಂದರ್ಯ ಮತ್ತು ಸರಳತೆಯನ್ನು ಹೊಂದಿರುವ ಸ್ಮೃತಿ ಮಂಧಾನ ಇತಿಹಾಸ ಸೃಷ್ಟಿಸಿದ್ದಾರೆ. ಒಂದೇ ತಿಂಗಳು, ಮೂರು ಮಹಾ ದಾಖಲೆ ಮಾಡಿದ್ದು, ವಿಶ್ವ ಕ್ರಿಕೆಟ್‌ ಆಳುತ್ತಿರುವ ಭಾರತದ ಹೆಣ್ಣುಮಗಳು ನಮ್ಮ ಸ್ಮೃತಿ ಮಂಧಾನ ಆಗಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ನ ತಾರೆ ಸ್ಮೃತಿ ಮಂಧಾನ ಹೊಸ ಇತಿಹಾಸ ಸೃಷ್ಟಿಸುವ ಮೂಲಕ ವಿಶ್ವ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಅವರು ಕೇವಲ ಒಂದೇ ತಿಂಗಳ ಅವಧಿಯಲ್ಲಿ ಮಹಿಳಾ ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಬ್ಯಾಟಿಂಗ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಡ್ಯಾಷಿಂಗ್ ಓಪನರ್ ಸ್ಮೃತಿ ಮಂಧಾನ ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅದು ಕೂಡ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ. ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಇದೀಗ ಸ್ಮೃತಿ ಮಂಧಾನ ಪಾಲಾಗಿದೆ

ಸ್ಮೃತಿ ಮಂಧಾನ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ಬಾರಿ ಸೇರ್ಪಡೆಯಾಗಿರುವುದು ವಿಶ್ವ ದಾಖಲೆ ಎಂಬುದು ವಿಶೇಷ. ಈ ವಿಶ್ವ ದಾಖಲೆ ನಿರ್ಮಾಣವಾಗಿದ್ದು ರನ್​ ರಾಶಿಯೊಂದಿಗೆ. ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಬ್ಯಾಟರ್ ಎಂಬ ವರ್ಲ್ಡ್​ ರೆಕಾರ್ಡ್ ಅನ್ನು ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್: ಸೆಪ್ಟೆಂಬರ್ 20, 2026 ರಂದು ಏಷ್ಯನ್ ಗೇಮ್ಸ್‌ನ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಅವರು ನ್ಯೂಜಿಲೆಂಡ್‌ನ ದಂತಕಥೆ ಸೂಜಿ ಬೇಟ್ಸ್ ಅವರ ದಾಖಲೆಯನ್ನು ಮೀರಿ, ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು.

ಸೆಪ್ಟೆಂಬರ್ ಆರಂಭದಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಹಾಂಗ್ ಕಾಂಗ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮ 18ನೇ ಶತಕ ಪೂರೈಸಿದರು. ಈ ಮೂಲಕ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (17 ಶತಕ) ಅವರ ವಿಶ್ವ ದಾಖಲೆಯನ್ನು ಮುರಿದರು.

ಈ ವಿಶ್ವ ದಾಖಲೆಯೊಂದಿಗೆ ಸ್ಮೃತಿ ಮಂಧಾನ ಮತ್ತೊಂದು ಮೈಲುಗಲ್ಲಿನತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಅಂದರೆ ಮುಂಬರುವ ಸರಣಿ ಹಾಗೂ ಟೂರ್ನಿಗಳ ಮೂಲಕ ಸ್ಮೃತಿ 235 ರನ್ ಕಲೆಹಾಕಿದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ 5000 ರನ್​ ಕಲೆಹಾಕಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಒಟ್ಟಿನಲ್ಲಿ ಮಂಧಾನ ಅಬ್ಬರಕ್ಕೆ ವಿಶ್ವ ದಾಖಲೆಗಳು ಧೂಳೀಪಟವಾಗಿದ್ದು, ಸೂಜಿ ಬೇಟ್ಸ್, ಮೆಗ್ ಲ್ಯಾನಿಂಗ್ ದಾಖಲೆ ಉಡೀಸ್ ಮಾಡಿದ್ದಾರೆ.

Share it :

Leave a Reply

Your email address will not be published. Required fields are marked *