ಪ್ರಧಾನಿ ಮೋದಿಗೆ ಮದುವೆಯೇ ಆಗಿಲ್ಲ, ತ್ರಿಪಲ್ ತಲಾಕ್ ಅಂತೆ ಇವನಿಗೆ ಯಾಕೆ ಬೇಕು? : ಬಿಕೆ ಹರಿಪ್ರಸಾದ್

ಬೆಂಗಳೂರು: ಪ್ರಧಾನಿ ಮೋದಿಗೆ ಮದುವೆಯೇ ಆಗಿಲ್ಲ, ತ್ರಿಪಲ್ ತಲಾಕ್ ಅಂತೆ ಇವನಿಗೆ ಯಾಕೆ ಬೇಕು? ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, ‘ತ್ರಿಪಲ್ ತಲಾಕ್ ಅಂತೆ, ಇವನಿಗೆ ಯಾಕೆ ಬೇಕು? ಮದುವೆಯೇ ಆಗಿಲ್ಲ ಎಂದು
ಟಾಂಗ್‌ ಕೊಟ್ಟಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ ಅವರು, ಪಂಡಿತ್ ಜವಾಹರ್ ಲಾಲ್ ನೆಹರು ಅವರಿಂದ ಹಿಡಿದು ನರಸಿಂಹರಾಯರವರೆಗೂ ಸಾರ್ವಜನಿಕ ಉದ್ಯಮ ಮಾಡಿದ್ದು ಕಾಂಗ್ರೆಸ್. ನಾನು ಗುಜರಾತ್‌ನಲ್ಲಿ 4.5 ವರ್ಷ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದೇನೆ ಎಂದರು.

ಅಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮ ಮಾಡಲಿಲ್ಲ.ಈಗ ಏನಿದ್ರೂ ಅದಾನಿ, ಅಂಬಾನಿ ಒಂದಷ್ಟು ಜನ ಬಂಡವಾಳ ಶಾಹಿಗಳು ಇದ್ದಾರೆ. ಎಲ್ಲವನ್ನೂ ಖರೀದಿ ಮಾಡುತ್ತಾರೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ನಮ್ಮಲ್ಲಿ ಮಹಾಮಾನವರೊಬ್ಬರು ಪ್ರಧಾನಿ ಆಗಿ ಬಿಟ್ಟಿದ್ದಾರೆ. ಮನ್ ಕಿ ಬಾತ್ ಅಂತ ಮಾತನಾಡುತ್ತಾರೆ. 12 ವರ್ಷ ಆಯ್ತು, ಧಾರ್ಮಿಕತೆ ಬಗ್ಗೆ 12 ನಿಮಿಷ ಮಾತನಾಡಿದ್ದು ನೋಡಿದ್ದೀರಾ ಎಂದು ಪ್ರಶ್ನಿಸಿದರು.

ಮೋದಿ ಒಬ್ಬ ಮೋಡಿಗಾರ ಬಾಯಿಗೆ ಬಂದತೆ ಮಾತನಾಡುತ್ತಾರೆ ಅವರಿಗೆ ಬುದ್ಧಿ ಮಟ್ಟ ತೀರಾ ಕಡಿಮೆ ಇದೆ ಎಂದಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸಾರ್ವಜನಿಕ ಉದ್ಯಮಗಳು ಇವೆ. ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಕಾಂಗ್ರೆಸ್ ಸ್ಥಾಪನೆ ಮಾಡಿದೆ. ಆದರೆ ಮಹಾಮಾನವ ಪದೇ ಪದೇ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಇವ್ರು 26 ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿದ್ದಾರೆ. ಯಾರು ಮಾಡಿದ್ದು ಎಂದು ಕೇಳಿ ನೋಡಿ ಎಂದು ಪ್ರಶ್ನೆ ಮಾಡಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others