ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಅಧಿವೇಶನ: ರೈತರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧ – ಸಿಎಂ ಡಿ.ಕೆ ಶಿವಕುಮಾರ್

ಸಕಲೇಶಪುರ : “ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಕೆ. ಕಸ್ತೂರಿರಂಗನ್ ಸಮಿತಿ ವರದಿ ಬಗ್ಗೆ ಚರ್ಚಿಸಲು ಕರೆದಿರುವ ವಿಶೇಷ ಅಧಿವೇಶನದಲ್ಲಿ ರೈತರಿಗೆ ಧಕ್ಕೆಯಾಗದಂತೆ ಸೂಕ್ತ ನಿರ್ಣಯ ಅಂಗೀಕರಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಭರವಸೆ ನೀಡಿದರು. ಸಕಲೇಶಪುರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ಅವರ ನಿವಾಸದ ಬಳಿ ಶಿವಕುಮಾರ್ ಅವರು ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. “ಕಳೆದ ಎರಡು ದಿನಗಳಿಂದ ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ […]

ಮಾಜಿ ಸಚಿವ ರಮಾನಾಥ ರೈಗೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಆಸ್ಪತ್ರೆಗೆ ದಾಖಲು

ದಕ್ಷಿಣ ಕನ್ನಡ: ಕರಾವಳಿಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ. ರಮಾನಾಥ ರೈ ಅವರಿದ್ದ ಕಾರು ಕಾರ್ಕಳ ಹಾಗೂ ಮೂಡುಬಿದಿರೆ ಸಂಪರ್ಕಿಸುವ ಹೆದ್ದಾರಿಯಲ್ಲಿ ರಸ್ತೆ ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ವಾಹನವು ತೀವ್ರವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ರಮಾನಾಥ ರೈ ಹಾಗೂ ಅವರ ಜತೆಗಿದ್ದ ಇತರ ಸಹಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಕ್ಷಣವೇ ನೆರೆದ ಸ್ಥಳೀಯ ಸಾರ್ವಜನಿಕರು, ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ತಕ್ಷಣವೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದಾರೆ. ಅಪಘಾತ ಸಂಭವಿಸಲು ಅತಿಯಾದ ವೇಗ ಕಾರಣವೇ ಅಥವಾ ಇತರ […]

ಒಂದು ವರ್ಷ ಜಿಯೋಹೋಮ್‌ ಬಳಕೆದಾರರಿಗೆ ಅಮೆಜಾನ್ ಪ್ರೈಮ್ ಲೈಟ್ ಉಚಿತ

ಮುಂಬೈ : ಜಿಯೋಹೋಮ್‌ನ 30 ಎಂಬಿಪಿಎಸ್ ಮತ್ತು 100 ಎಂಬಿಪಿಎಸ್ ಯೋಜನೆಗಳನ್ನು ಹೊಂದಿರುವ ಗ್ರಾಹಕರು ಈಗ ಅಮೆಜಾನ್ ಪ್ರೈಮ್ ಲೈಟ್ ಅನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಲಿದ್ದಾರೆ. ಈ ಪ್ರಯೋಜನವನ್ನು ಜಿಯೋಹೋಮ್‌ನ 3-ಇನ್-1( ಟಿವಿ + ಒಟಿಟಿ + ವೈ-ಫೈ) ಯೋಜನೆಯ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನೀಡಲಾಗುವುದು. ಜಿಯೋ 10 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಹೊಸ ಕೊಡುಗೆಯನ್ನು ನೀಡಲಾಗುತ್ತಿದೆ. ಒಂದು ವರ್ಷದ ಅಮೆಜಾನ್ ಪ್ರೈಮ್ ಲೈಟ್ ಸದಸ್ಯತ್ವದಲ್ಲಿ, ಗ್ರಾಹಕರು ಪ್ರೈಮ್ […]

ಅಕ್ಟೋಬರ್.1ರಿಂದ ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್ ಪಡೆಯಲು ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಕೇಂದ್ರ ಸರ್ಕಾರ ಮಹತ್ವದ ಆದೇಶ

ನವದೆಹಲಿ: ದೇಶದಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಬ್ಸಿಡಿ ವಿತರಣೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಲು ಹಾಗೂ ಅನರ್ಹ ಫಲಾನುಭವಿಗಳನ್ನು ಹೊರಗಿಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ನಿಯಂತ್ರಿತ ಚಿಲ್ಲರೆ ಮಾರಾಟ ದರದಲ್ಲಿ (RSP) ಸಬ್ಸಿಡಿ ಸಹಿತ ಸಿಲಿಂಡರ್ ಪಡೆಯುವ ಪ್ರತಿಯೊಬ್ಬ ಗ್ರಾಹಕರಿಗೂ 2026ರ ಅಕ್ಟೋಬರ್ 1 ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು (BAA) ಕಡ್ಡಾಯಗೊಳಿಸಲಾಗಿದೆ. ವಾಣಿಜ್ಯ ಉದ್ದೇಶಗಳಿಗೆ ಸಿಲಿಂಡರ್‌ಗಳ ಅಕ್ರಮ ವರ್ಗಾವಣೆ, ನಕಲಿ ಗ್ಯಾಸ್ ಸಂಪರ್ಕಗಳ ಹಾವಳಿ ತಪ್ಪಿಸಿ, ಸರ್ಕಾರದ ಸಬ್ಸಿಡಿ ಹಣವು ನೇರವಾಗಿ ಅರ್ಹ ಕುಟುಂಬಗಳಿಗೆ ಮಾತ್ರ ತಲುಪುವಂತೆ ಮಾಡುವುದು […]

ಕಸ್ತೂರಿ ರಂಗನ್ ವರದಿ ಸೇರಿದಂತೆ ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ.ಕೆ ಶಿವಕುಮಾರ್

ಬಾಳೆಹೊನ್ನೂರು : “ಕಸ್ತೂರಿ ರಂಗನ್ ವರದಿ ಸೇರಿದಂತೆ ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಪರಿಸರ ಸೂಕ್ಷ್ಮ ವಲಯ ಸೇರಿದಂತೆ ಈ ಭಾಗದ ರೈತರ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದೀರಿ, ನನ್ನ ಕೈಲಾದ ಮಟ್ಟಿಗೆ ನಾನು ನಿಮಗೆ ಸಹಾಯ ಮಾಡುವೆ. ರಾಜ್ಯದ ಹಿತಕ್ಕಾಗಿ ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡುವ ಪ್ರಯತ್ನ ಮಾಡುವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಶನಿವಾರ ನಡೆದ ಕಸ್ತೂರಿ ರಂಗನ್ ವರದಿ ಕುರಿತ […]

ವಾಟ್ಸಾಪ್‌ನಲ್ಲೇ KSRTC ಟಿಕೆಟ್ ಬುಕ್ಕಿಂಗ್ ಮತ್ತು ಕ್ಯಾನ್ಸಲೇಶನ್: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು: ಸರ್ಕಾರಿ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಇನ್ನು ಮುಂದೆ ಕೇವಲ ಒಂದು ವಾಟ್ಸಾಪ್ (WhatsApp) ಸಂದೇಶದ ಮೂಲಕವೇ ಕ್ಷಣಾರ್ಧದಲ್ಲಿ ಬಸ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಆರಂಭಿಸಿವೆ. ಕೆಎಸ್‌ಆರ್‌ಟಿಸಿ (KSRTC), ವಾಯವ್ಯ ಸಾರಿಗೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ (KKRTC) ಸಂಸ್ಥೆಗಳ ಬಸ್‌ಗಳಿಗೆ ಈ ಸೇವೆ ಲಭ್ಯವಿದ್ದು, ಪ್ರಯಾಣಿಕರಿಗೆ ಸರಳ, ತ್ವರಿತ ಹಾಗೂ ನಂಬಿಕಾರ್ಹ ಪ್ರಯಾಣದ ಅನುಭವವನ್ನು ಒದಗಿಸಲಿದೆ. ಟಿಕೆಟ್ ಪಡೆಯುವ ಹಂತಗಳು ಪ್ರಯಾಣಿಕರು […]

ಕರಾವಳಿ ಮೂಲಸೌಕರ್ಯಕ್ಕೆ ಸಚಿವ ಸಂಪುಟದ ಬಲ: ನೂರಾರು ಕೋಟಿ ರೂ. ಯೋಜನೆಗಳಿಗೆ ಅನುಮೋದನೆ

ಮಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಬಂದರು, ಸಾರಿಗೆ, ಮೂಲಸೌಕರ್ಯ ಹಾಗೂ ರಾಜ್ಯದಾದ್ಯಂತ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಮೊತ್ತದ ಅನುಮೋದನೆ ದೊರೆತಿದೆ. ಜತೆಗೆ ಮುಂಬರುವ ಪಂಚಾಯತ್ ರಾಜ್ ಚುನಾವಣೆ ಹಾಗೂ ಅರಣ್ಯ ಇಲಾಖೆ ನೇಮಕಾತಿಯಲ್ಲಿ ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿ ವಿಸ್ತರಿಸುವ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮೀನುಗಾರಿಕೆ, ಬಂದರು ಮತ್ತು ಬೃಹತ್ ಹಡಗು ನಿರ್ಮಾಣ ಯೋಜನೆಗಳು ಕರಾವಳಿಯ ಮೀನುಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರು ಮೀನುಗಾರಿಕಾ ಬಂದರಿನ ಅಳಿವೆ ಬಾಗಿಲಿನಿಂದ ಕೋಟೆಪುರದವರೆಗೆ ಹೂಳೆತ್ತುವ […]

ಚಿಕಾಗೋ ನ್ಯೂಮ್ಯಾಟಿಕ್‌ನಿಂದ ‘ಸಿಪಿಎಸ್ 950-300’ ವಾಯು ಸಂಕುಚಕ ಬಿಡುಗಡೆ

ಬೆಂಗಳೂರು: ನೀರಿನ ಬಾವಿ ತೋಡಿಕೆ, ಗಣಿಗಾರಿಕೆ ಮತ್ತು ಸೌರ ವಿದ್ಯುತ್ ಯೋಜನೆಗಳ ಅಡಿಪಾಯ ತೋಡಿಕೆಗಾಗಿ ಚಿಕಾಗೋ ನ್ಯೂಮ್ಯಾಟಿಕ್ ಇಂಡಿಯಾ ಹೊಸ ‘ಸಿಪಿಎಸ್ 950-300’ ಸಂಚಾರಿ ವಾಯು ಸಂಕುಚಕವನ್ನು ಬಿಡುಗಡೆ ಮಾಡಿದೆ. ಆಳವಾದ ತೋಡಿಕೆ, ಕಠಿಣ ಭೂಗರ್ಭ ಪರಿಸ್ಥಿತಿ, ಕುಸಿಯುತ್ತಿರುವ ಭೂಗರ್ಭಜಲ ಮಟ್ಟ, ಹೆಚ್ಚುತ್ತಿರುವ ಇಂಧನ ವೆಚ್ಚ ಹಾಗೂ ಕಡಿಮೆ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.ಸಿಪಿಎಸ್ 950-300 ಯಂತ್ರವು 300 ಪಿಎಸ್‌ಐಜಿ ಒತ್ತಡದಲ್ಲಿ 950 ಸಿಎಫ್‌ಎಂ ಗಾಳಿಯ ಹರಿವು […]

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಸಿಎಂ ಡಿ.ಕೆ. ಶಿವಕುಮಾರ್‌ಗೆ ವಕೀಲರ ನಿಯೋಗದಿಂದ ಮನವಿ ಸಲ್ಲಿಕೆ

ಮಂಗಳೂರು: ಕರಾವಳಿ ಕರ್ನಾಟಕದ ಜನರಿಗೆ ನ್ಯಾಯದ ಲಭ್ಯತೆ ಸುಲಭವಾಗುವಂತೆ ಧಾರವಾಡ ಮತ್ತು ಕಲಬುರಗಿ ಮಾದರಿಯಲ್ಲಿ ಮಂಗಳೂರಿನಲ್ಲೂ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಅಥವಾ ಶಾಶ್ವತ ಪೀಠ ಸ್ಥಾಪಿಸಬೇಕು ಎಂದು ಮಂಗಳೂರಿನ ವಕೀಲರ ನಿಯೋಗ ಆಗ್ರಹಿಸಿದೆ. ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ಸಂದರ್ಭದಲ್ಲಿ (ಶುಕ್ರವಾರ) ವಕೀಲರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿತು. ಪೀಠ ಸ್ಥಾಪನೆಗೆ ಸಂಪುಟದ […]

ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಅನಾಥ ವಾಹನಗಳ ತೆರವು ಕಾರ್ಯಕ್ಕೆ ವೇಗ ನೀಡಿ – ಸಚಿವ ಕೃಷ್ಣಬೈರೇಗೌಡ

ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳಿಂದ ಪಾದಚಾರಿ ಮಾರ್ಗಗಳು ಮರು ಒತ್ತುವರಿಯಾಗದಂತೆ ನಿರಂತರವಾಗಿ ನಿಗಾ ವಹಿಸಬೇಕು, ಒಂದು ವೇಳೆ ವ್ಯಾಪಾರಿಗಳು ಒತ್ತುವರಿಗೆ ಮುಂದಾದರೆ ಅವರ ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ, ಅನಾಥ ವಾಹನಗಳ ತೆರವು ಮತ್ತು ನಿರಂತರ ಸ್ವಚ್ಛತಾ ಅಭಿಯಾನದ ಕುರಿತು ನಡೆದ ವರ್ಚುವಲ್ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ […]