ಎವರೆಸ್ಟ್ ಜೀರಿಗೆ ಪುಡಿ ಹಿಂಪಡೆಯಲು FSSAI ಖಡಕ್ ಆದೇಶ

ನವದೆಹಲಿ: ಮುಂಬರುವ ಹಬ್ಬದ ಋತುವಿನಲ್ಲಿ ( Festive Season ) ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮಾರಾಟಕ್ಕೆ ಕಡಿವಾಣ ಹಾಕಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬೃಹತ್ ಕಾರ್ಯಾಚರಣೆ ಆರಂಭಿಸಿದೆ. ಈ ಹಿನ್ನಲೆಯಲ್ಲಿ ಎವರೆಸ್ಟ್‌ನ ಜೀರಿಗೆ ಪುಡಿಯ ( Everest Cumin Powder ) ನಿರ್ದಿಷ್ಟ ಬ್ಯಾಚ್ ಅನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯಲು ಆದೇಶಿಸಿದೆ. ಗ್ರಾಹಕರ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ದೇಶಾದ್ಯಂತ ತಪಾಸಣೆ ತೀವ್ರಗೊಳಿಸಿರುವ ಪ್ರಾಧಿಕಾರ, ಪ್ರಮುಖ ಆಹಾರ […]

‘ಸುಂಟರಗಾಳಿ’ ಖ್ಯಾತಿಯ ಹಿರಿಯ ಸ್ಯಾಂಡಲ್ ವುಡ್ ನಟಿ ಲಲಿತಮ್ಮ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗ (Kannada Film Industry), ಕಿರುತೆರೆ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದೆ ಲಲಿತಮ್ಮ (65) ( Veteran artist Lalithamma ) ಅವರು ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ಪಾರ್ಶ್ವವಾಯು (ಸ್ಟ್ರೋಕ್) ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅನಾಥ ಸ್ಥಿತಿಯಲ್ಲಿದ್ದ ಕಲಾವಿದೆಗೆ ಆಸರೆಯಾಗಿದ್ದ ಟ್ರಸ್ಟ್ ಜೀವನದ ಸಂಧ್ಯಾಕಾಲದಲ್ಲಿ ಅನಾರೋಗ್ಯದ ಜೊತೆಗೆ ಆರೈಕೆ ಮಾಡುವವರಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಲಲಿತಮ್ಮ […]

ಜಾತಿ, ಧರ್ಮ ಬೇಧವಿಲ್ಲದೆ ಸ್ವಾಮೀಜಿಗಳು, ಧರ್ಮ ಗುರುಗಳಿಗೆ ಮೈಸೂರು ದಸರಾಗೆ ಆಹ್ವಾನ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರು: “ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ಮೈಸೂರು ದಸರಾ ನಡೆಯಬೇಕು. ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರಲು ಧನಂಜಯ, ಏಕಲವ್ಯ ಸೇರಿ ಐದು ಆನೆಗಳಿಗೆ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ತರಬೇತಿ ನೀಡಲುಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಶನಿವಾರ ಮಾತನಾಡಿದರು. “ರಾಜ ವಂಶಸ್ಥರಿಗೂ ಗೌರವ ಪೂರ್ವಕ ಆಹ್ವಾನ ನೀಡಬೇಕು. ಯಾರ ಸ್ಥಾನ, ಸ್ವಾಭಿಮಾನಕ್ಕೂ ಧಕ್ಕೆ ತರುವ […]

Asian Games 2026: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ

ನಗೋಯಾ: ಜಪಾನ್‌ನಲ್ಲಿ ಜರುಗುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್‌ನ ಪುರುಷರ ಹಾಕಿ ವಿಭಾಗದಲ್ಲಿ ಭಾರತದ ದಿಗ್ವಿಜಯ ಮುಂದುವರಿದಿದೆ. ಪ್ರಶಸ್ತಿ ಸುತ್ತಿನ ಅತ್ಯಂತ ಮಹತ್ವದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಪಡೆ, ಮಲೇಷ್ಯಾ ತಂಡವನ್ನು 5-1 ಗೋಲುಗಳಿಂದ ಬಗ್ಗುಬಡಿದು ಸತತ ಎರಡನೇ ಬಾರಿಗೆ ಸ್ವರ್ಣ ಪದಕವನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಂತಾಗಿದೆ. ಆರಂಭಿಕ ತಿರುಗೇಟು ಮತ್ತು ಭಾರತದ ಪಾರಮ್ಯ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲೇ ಭಾರತಕ್ಕೆ […]

ಏಷ್ಯನ್ ಗೇಮ್ಸ್ 2026: ಕುಸ್ತಿಯಲ್ಲಿ ಭಾರತದ ಅಮನ್ ಸೆಹ್ರಾವತ್ ಗೆ ಚಿನ್ನದ ಪದಕ!

ಜಪಾನ್: ಭಾರತದ ಯುವ ಕುಸ್ತಿ ತಾರೆ, ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ ಅವರು ಏಷ್ಯನ್ ಗೇಮ್ಸ್‌ನಲ್ಲಿ ಪದಕದ ಬಣ್ಣ ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗೋಯಾದಲ್ಲಿ ನಡೆದ ಪುರುಷರ 57 ಕೆಜಿ ವಿಭಾಗದ ರೋಚಕ ಫೈನಲ್ ಹಣಾಹಣಿಯಲ್ಲಿ ಉತ್ತರ ಕೊರಿಯಾದ ಹಾಲಿ ವಿಶ್ವ ಚಾಂಪಿಯನ್ ಚೊಂಗ್ ಸಾಂಗ್ ಹಾನ್ ಅವರನ್ನು 11-7 ಅಂಕಗಳ ಅಂತರದಿಂದ ಮಣಿಸಿ ಐತಿಹಾಸಿಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಅಮನ್, ಈ ಬಾರಿ ಅಸಾಧಾರಣ […]

ಯುಜಿ‌ ನೀಟ್: 3ನೇ ಸುತ್ತಿನ‌ ತಾತ್ಕಾಲಿಕ ಫಲಿತಾಂಶ ಪ್ರಕಟ

ಬೆಂಗಳೂರು: ಯುಜಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ. ಎಂಸಿಸಿ ಮತ್ತು ಕೆಇಎ- ಎರಡೂ ಕಡೆ ಸೀಟು ಪಡೆದು, ಮೂರನೇ ಸುತ್ತಿನಲ್ಲಿ ಎಂಸಿಸಿ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅ.5ರಂದು ಮಧ್ಯಾಹ್ನ 12 ಗಂಟೆಯೊಳಗೆ ವೆಬ್ ಸೈಟ್ ನ‌ ಲಿಂಕ್ ನಲ್ಲಿ ಚಾಯ್ಸ್- 4 ಹಾಕಿ ಕೌನ್ಸೆಲಿಂಗ್ ನಿಂದ‌ ಉಚಿತವಾಗಿ ಹೊರ ಹೋಗಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ […]

44 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ

ಐಚಿ-ನಗೋಯಾ: ಏಷ್ಯನ್ ಕ್ರೀಡಾಕೂಟದ ಮಹಿಳಾ ಹಾಕಿ ವಿಭಾಗದಲ್ಲಿ ಭಾರತದ ವನಿತೆಯರು ಹೊಸ ಇತಿಹಾಸ ಬರೆದಿದ್ದಾರೆ. ಪ್ರಶಸ್ತಿಗಾಗಿ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಪ್ರಬಲ ಚೀನಾ ತಂಡದ ವಿರುದ್ಧ 1-0 ಗೋಲುಗಳ ಅಂತರದ ರೋಚಕ ಜಯ ಸಾಧಿಸಿದ ಭಾರತ ತಂಡವು ಬರೋಬ್ಬರಿ 44 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. 1982ರ ನವದೆಹಲಿ ಕೂಟದ ಬಳಿಕ ಭಾರತ ಮಹಿಳಾ ತಂಡಕ್ಕೆ ಏಷ್ಯಾಡ್‌ನಲ್ಲಿ ಒಲಿದ ಎರಡನೇ ಸ್ವರ್ಣ ಪದಕ ಇದಾಗಿದೆ. ಈ ಮಹತ್ವದ ಜಯದ ಫಲವಾಗಿ ಭಾರತೀಯ […]

ಯುವ ಕಾಂಗ್ರೆಸ್‌ನ ‘ಸಿಎಂ ಕಪ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಷ್ಟ್ರನಾಯಕರಿಗೆ ಗೌರವ ನಮನ

ಬೆಂಗಳೂರು : ಕ್ರೀಡಾ ಮನೋಭಾವದೊಂದಿಗೆ ರಾಷ್ಟ್ರನಾಯಕರ ಆದರ್ಶಗಳನ್ನು ಯುವಜನತೆಯಲ್ಲಿ ಬಿತ್ತುವ ಆಶಯದೊಂದಿಗೆ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾಲಕ್ಷ್ಮೀ ಲೇಔಟ್‌ನ ಕೆ.ಜಿ. ಗ್ರೌಂಡ್‌ನಲ್ಲಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ ‘ಸಿಎಂ ಕಪ್’ನಲ್ಲಿ ಶುಕ್ರವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ, “ಗಾಂಧೀಜಿ ಅವರ ಸತ್ಯ, ಅಹಿಂಸೆ ಮತ್ತು ಸರಳತೆಯ ತತ್ವಗಳು ಹಾಗೂ […]

ಫ್ಲೈದುಬೈ ಹೀರೋ ಪೈಲಟ್‌ಗೆ ಮೋದಿ ಕರೆ: ಹನುಮಾನ್ ಚಾಲೀಸಾ ನೆನೆದು ಭಾವುಕರಾದ ಕ್ಯಾಪ್ಟನ್ ಸ್ಮಿತ್

ನವದೆಹಲಿ: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಸಂಭವಿಸಬಹುದಾಗಿದ್ದ ಭೀಕರ ಅನಾಹುತವನ್ನು ಹಿಮ್ಮೆಟ್ಟಿಸಿ, 170ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಕಾಪಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ನಡುಆಕಾಶದಲ್ಲಿ ಸಹ-ಪೈಲಟ್ ನಡೆಸಿದ ಹಠಾತ್ ದಾಳಿಯನ್ನು ಪ್ರತಿರೋಧಿಸಿ ಎಲ್ಲರನ್ನೂ ರಕ್ಷಿಸಿದ ಕ್ಯಾಪ್ಟನ್ ಸ್ಮಿತ್ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವೀಡಿಯೊ ಕರೆ ಮೂಲಕ ಮಾತುಕತೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲೇ ಭಾವುಕರಾದ ಕ್ಯಾಪ್ಟನ್: ‘ಮೋದಿಯವರೇ ನನ್ನ ದೊಡ್ಡ […]

ಏಷ್ಯನ್ ಗೇಮ್ಸ್ ಬಾಕ್ಸಿಂಗ್: ಚೈನೀಸ್ ತೈಪೆ ಎದುರಾಳಿ ಮಣಿಸಿ ಭಾರತಕ್ಕೆ ಚಿನ್ನ ತಂದ ಪರ್ವೀನ್

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಸುವರ್ಣ ಓಟ ಮುಂದುವರಿದಿದೆ. ಮಹಿಳೆಯರ 65 ಕೆಜಿ ತೂಕದ ಬಾಕ್ಸಿಂಗ್ ವಿಭಾಗದ ರೋಚಕ ಫೈನಲ್ ಹಣಾಹಣಿಯಲ್ಲಿ ಭಾರತದ ತಾರಾ ಬಾಕ್ಸರ್ ಪರ್ವೀನ್ ಹೂಡಾ ಅಮೋಘ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ, ಚೈನೀಸ್ ತೈಪೆಯ ಅನುಭವಿ ಆಟಗಾರ್ತಿ ಚೆನ್ ನಿಯೆನ್-ಚಿನ್ ವಿರುದ್ಧ ನಡೆದ ತುರುಸಿನ ಪಂದ್ಯದಲ್ಲಿ 3-2 ಅಂತರದ ರೋಚಕ ಜಯ ಸಾಧಿಸಿದ ಪರ್ವೀನ್, ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತದ ಖಾತೆಗೆ 13ನೇ ಬಂಗಾರದ […]