ಅಯೋಧ್ಯೆ ರಾಮಮಂದಿರ ನಿಧಿ ಅಕ್ರಮ ಪ್ರಕರಣದಲ್ಲಿ ಚಂಪತ್ ರಾಯ್, ಅನಿಲ್ ಮಿಶ್ರಾಗೆ ಎಸ್‌ಐಟಿ ಕ್ಲೀನ್‌ಚಿಟ್

ಉತ್ತರ ಪ್ರದೇಶ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಕಾಣಿಕೆ ಹಣದ ದುರುಪಯೋಗ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಟ್ರಸ್ಟ್‌ನ ಮಾಜಿ ಪದಾಧಿಕಾರಿಗಳಾದ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಅವರಿಗೆ ಉತ್ತರ ಪ್ರದೇಶದ ವಿಶೇಷ ತನಿಖಾ ದಳ (SIT) ದೋಷಮುಕ್ತ ಪ್ರಮಾಣಪತ್ರ ನೀಡಿದೆ. ಟ್ರಸ್ಟ್ ಕೈಸೇರಿದ ಅಂತಿಮ ತನಿಖಾ ವರದಿ ವಿಶೇಷ ತನಿಖಾ ದಳವು ಸಿದ್ಧಪಡಿಸಿದ ಸಮಗ್ರ ವರದಿಯನ್ನು ಉತ್ತರ ಪ್ರದೇಶದ ಗೃಹ ಇಲಾಖೆಯು ರಾಮ ಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಿದೆ. ಪರಿಶೀಲನೆಯ ಬಳಿಕ ಇಬ್ಬರೂ […]

​’ಸಾಯಿ ಸಿಂಫೋನಿ’ ಭಾರತದ ಹೆಮ್ಮೆ: ರಿಕಿ ಕೇಜ್

ಬೆಂಗಳೂರು: ದೇಶದಲ್ಲೇ ತರಬೇತಿ ಪಡೆದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ‘ಸಾಯಿ ಸಿಂಫೋನಿ ಆರ್ಕೆಸ್ಟ್ರಾ’ ಜತೆಗೆ ಮುಂಬರುವ ದಿನಗಳಲ್ಲಿ ವಿನೂತನ ಸಂಗೀತ ಪ್ರಯೋಗಗಳನ್ನು ನಡೆಸುವುದಾಗಿ ಖ್ಯಾತ ಸಂಗೀತ ಮಾಂತ್ರಿಕ, ಗ್ರ್ಯಾಮಿ ಪುರಸ್ಕೃತ ರಿಕಿ ಕೇಜ್ ಪ್ರಕಟಿಸಿದ್ದಾರೆ. ​ಸದ್ಗುರುಗಳ ನೇತೃತ್ವದಲ್ಲಿ ಬೆಳೆದುಬಂದಿರುವ ಈ ತಂಡವನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಅವರು, ಭಾರತದ ಅನನ್ಯ ಸಂಸ್ಕೃತಿ ಮತ್ತು ಸಿಂಫೋನಿ ಕಲೆಯ ನಡುವೆ ಇರುವ ಆಳವಾದ ನಂಟನ್ನು ಬಿಡಿಸಿಟ್ಟರು. ​ವಾದ್ಯಗಳ ಮೇಳೈಸುವಿಕೆಯಲ್ಲಿ ಭಾರತದ ಪ್ರತಿಬಿಂಬ ​”ಜಾಗತಿಕ ಮಟ್ಟದ ಆರ್ಕೆಸ್ಟ್ರಾಗಳ ಜತೆ ಕಾರ್ಯನಿರ್ವಹಿಸುವಾಗಲೆಲ್ಲ ನನಗೆ […]

ಜೆಡಿಎಸ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಸಮೃದ್ಧ ಭಾರತ ನಿರ್ಮಾಣಕ್ಕೆ ಹೆಚ್.ಎಂ.ರಮೇಶ್ ಗೌಡ ಕರೆ

ಬೆಂಗಳೂರು: ಸ್ವಾತಂತ್ರ್ಯ ಬಂದು ಎಂಟು ದಶಕಗಳು ಆಗಿರುವ ಈ ಸುಸಂದರ್ಭದಲ್ಲಿ ನಾವೆಲ್ಲರೂ ಭ್ರಷ್ಟಾಚಾರ ಮುಕ್ತ, ಸ್ವಚ್ಛ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಜಾತಿ, ಮತ, ಧರ್ಮದ ಭೇದ ಮರೆತು ಒಂದಾಗಬೇಕಿದೆ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಅತ್ಯಂತ ಮುಖ್ಯವಾಗಿದೆ ಎಂದು ಜೆಡಿಎಸ್ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಹೇಳಿದರು. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದ ಅವರು; ಕಳೆದ ಎಂಟು ದಶಕಗಳಲ್ಲಿ ನಮ್ಮ […]

80ನೇ ಸ್ವಾತಂತ್ರ್ಯೋತ್ಸವ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಡಿಕೆಶಿ ಮಹತ್ವದ ಘೋಷಣೆಗಳು; 72 ಸಾವಿರ ಉದ್ಯೋಗ, AI ವಿವಿ ಸ್ಥಾಪನೆ

ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ, ಶಿಕ್ಷಣ ಸುಧಾರಣೆ ಹಾಗೂ ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಬೃಹತ್ ಗುರಿಯೊಂದಿಗೆ ನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಉದ್ಯೋಗ ಸೃಷ್ಟಿ ಮತ್ತು ಯುವಜನತೆಗೆ ಪ್ರೋತ್ಸಾಹ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿರುವ ಸರ್ಕಾರ, ಮುಂದಿನ ಆರು ತಿಂಗಳೊಳಗೆ 72,000 […]

‘ಆಪರೇಷನ್ ಸಿಂಧೂರ್’ ಮತ್ತು ಸೇನಾ ಸಾಮರ್ಥ್ಯ ಶ್ಲಾಘಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದು, ಭಾರತದ ಭದ್ರತೆ, ರಾಜತಾಂತ್ರಿಕ ನಿರ್ಧಾರಗಳು, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಸುಧಾರಣೆಗಳ ಕುರಿತು ಸಮಗ್ರ ಸಂದೇಶ ನೀಡಿದ್ದಾರೆ. ಭಯೋತ್ಪಾದನೆ ವಿರುದ್ಧ ಸೇನೆಯ ನಿಖರ ದಾಳಿ: ‘ಆಪರೇಷನ್ ಸಿಂಧೂರ್’ ಶ್ಲಾಘನೆ ಭಯೋತ್ಪಾದನಾ ನೆಲೆಗಳ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಿಖರ ಮತ್ತು ಪರಿಣಾಮಕಾರಿ ದಾಳಿಯ ಸಾಮರ್ಥ್ಯವನ್ನು ‘ಆಪರೇಷನ್ ಸಿಂಧೂರ್’ ಜಗತ್ತಿಗೆ ಸಾಬೀತುಪಡಿಸಿದೆ ಎಂದು ರಾಷ್ಟ್ರಪತಿಗಳು ಹೆಮ್ಮೆ ವ್ಯಕ್ತಪಡಿಸಿದರು. ಇದರೊಂದಿಗೆ, ಭಯೋತ್ಪಾದನೆಗೆ […]

ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆಗೆ ತಾತ್ಕಾಲಿಕ ಬ್ರೇಕ್: ಬಡ ಕುಟುಂಬಗಳಿಗೆ ಸಚಿವ ರಿಜ್ವಾನ್ ಅರ್ಷದ್ ಭರವಸೆ

ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (BPL) ಪಡಿತರ ಚೀಟಿಗಳ ರದ್ದತಿ ಭೀತಿಯಲ್ಲಿದ್ದ ಲಕ್ಷಾಂತರ ಬಡ ಕುಟುಂಬಗಳಿಗೆ ರಾಜ್ಯ ಸರ್ಕಾರ ಭಾರಿ ನೆಮ್ಮದಿಯ ಸುದ್ದಿ ನೀಡಿದೆ. ಪಡಿತರ ಚೀಟಿಗಳ ತಪಾಸಣೆ ಮತ್ತು ಪರಿಷ್ಕರಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ಪೂರ್ಣವಾಗಿ ತಡೆಹಿಡಿಯುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ತ್ವರಿತ ಕ್ರಮ ಅನುಮಾನಾಸ್ಪದ ಪಡಿತರ ಚೀಟಿಗಳನ್ನು ಗುರುತಿಸಿ, ಅವುಗಳನ್ನು ಏಕಾಏಕಿ ರದ್ದುಗೊಳಿಸಲು ಇಲಾಖೆಯು ಮುಂದಾಗಿದ್ದರಿಂದ […]

ರಾಜಕಾರಣ ಹೊರಗೆ ಮಾಡೋಣ. ಇಲ್ಲಿ ಜನ ಸೇವೆ ಮಾಡೋಣ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು : “ನನಗೆ ರಾಜ್ಯದ ಜನರ ಸೇವೆ ಮಾಡಲು ಅನೇಕ ಕನಸುಗಳಿವೆ. ಈ ಕನಸುಗಳನ್ನು ಈಡೇರಿಸಲು ನೀವೆಲ್ಲರೂ ಸಹಕಾರ ನೀಡಿ. ರಾಜಕಾರಣ ಹೊರಗೆ ಮಾಡೋಣ. ಇಲ್ಲಿ ಸೇವೆ ಮಾಡೋಣ. ರಾಜ್ಯದ ಯಶಸ್ಸಿಗೆ ಒಟ್ಟಾಗಿ ನಡೆಯೋಣ. ಜನರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳೋಣ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು. ಸಿಎಂ‌ ಡಿ ಕೆ ಶಿವಕುಮಾರ್ ಅವರು ವಿಧಾನಪರಿಷತ್ ನಲ್ಲಿ ಶುಕ್ರವಾರ ಮಾತನಾಡಿದರು. “ಈ ಹಿಂದೆ ಆಡಳಿತ ನಡೆಸಿದ ಅನೇಕರ ಸಾಕ್ಷಿಗುಡ್ಡೆಗಳನ್ನು ಅಳಿಸಲು ಆಗುತ್ತದೆಯೇ? ಎಲ್ಲರೂ ಸೇರಿ […]