ಗೊಡ್ಡು ಬೆದರಿಕೆಗೆಲ್ಲಾ ಡಿ ಕೆ ಶಿವಕುಮಾರ್ ಹೆದರುವುದಿಲ್ಲ

ನವದೆಹಲಿ : “ಹೌದು, ಇಂದಿನ ಮೌಲ್ಯದಲ್ಲಿ ನನ್ನ ಬಳಿ 1,400 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶಾರಾಗಿ ಈ ರೀತಿ ಮಾತನಾಡುತ್ತಿದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು. ನವದೆಹಲಿಯಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, “ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಲ್ಲಿ […]
ಇನ್ಮುಂದೆ ಪಾಸ್ಬುಕ್, ಬ್ಯಾಲೆನ್ಸ್ಗಾಗಿ ಫುಲ್ ಲಾಗಿನ್ ಬೇಕಿಲ್ಲ: ಎಸ್ಬಿಐ ಗ್ರಾಹಕರಿಗಿದೋ ಗುಡ್ ನ್ಯೂಸ್!

ಬೆಂಗಳೂರು: ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ಸುಲಭಗೊಳಿಸಿದೆ. ಎಸ್ಬಿಐನ ಜನಪ್ರಿಯ ‘ಯೋನೊ’ (YONO) ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ಈಗ ಪೂರ್ಣ ಪ್ರಮಾಣದ ಲಾಗಿನ್ ಪ್ರಕ್ರಿಯೆ ಇಲ್ಲದೆಯೇ ತಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಹಾಗೂ ವಹಿವಾಟಿನ ವಿವರಗಳನ್ನು (m-Passbook) ನೋಡಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕಿಂಗ್, ಹೂಡಿಕೆ ಹಾಗೂ ಶಾಪಿಂಗ್ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತಿರುವ ಯೋನೊ […]
UPSC ಪರೀಕ್ಷೆಯೊಂದೇ ದಾರಿಯಲ್ಲ: IAS ಆಗಲು ಹೀಗೂ ದಾರಿಯಿದೆ!

ನವದೆಹಲಿ: ದೇಶದ ಲಕ್ಷಾಂತರ ಯುವಜನತೆಯ ಪಾಲಿಗೆ ಐಎಎಸ್ (IAS) ಅಧಿಕಾರಿಯಾಗುವುದು ಒಂದು ದೊಡ್ಡ ಕನಸು. ಈ ಗುರಿ ಮುಟ್ಟಲು ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ ನಾಗರಿಕ ಸೇವಾ ಪರೀಕ್ಷೆಯೇ ಮುಖ್ಯ ದಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಯುಪಿಎಸ್ಸಿ ಪರೀಕ್ಷೆ ಬರೆಯುವುದರ ಹೊರತಾಗಿಯೂ ಒಬ್ಬ ವ್ಯಕ್ತಿ ಐಎಎಸ್ ಅಧಿಕಾರಿಯಾಗಲು ಕೆಲವೊಂದು ನಿರ್ದಿಷ್ಟ ಮಾರ್ಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ಕುರಿತ ವಿವರವಾದ ವರದಿ ಇಲ್ಲಿದೆ. ಮುಖ್ಯ ದ್ವಾರ: ಯುಪಿಎಸ್ಸಿ ಸಿವಿಲ್ ಸರ್ವಿಸಸ್ ಪರೀಕ್ಷೆ ಐಎಎಸ್ […]
ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ. ಸುರೇಶ್, ತಾಯಿ ಗೌರಮ್ಮ ಹೆಸರಿನಲ್ಲಿ ನೈಸ್ ಆಸ್ತಿಗಳು: HDK ಗಂಭೀರ ಆರೋಪ

ಬೆಂಗಳೂರು: ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಯ ನೆಪದಲ್ಲಿ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಯೋಜನೆಯ ಗುತ್ತಿಗೆದಾರ ಅಶೋಕ್ ಖೇಣಿ ಇಬ್ಬರೂ ಕುಮ್ಮಕ್ಕಾಗಿ ಅಪಾರ ಪ್ರಮಾಣದ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದಾಖಲೆಗಳ ಸಮೇತ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಕಿಕ್ಕಿರಿದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಡಿಕೆ (ಡಿ.ಕೆ. ಶಿವಕುಮಾರ್) ಮತ್ತು ಎಕೆ (ಅಶೋಕ್ ಖೇಣಿ) ಸೇರಿ ಯೋಜನೆಗಾಗಿ ಮುಗ್ಧ ಜನರಿಂದ ಸ್ವಾಧೀನ ಪಡೆಸಿಕೊಳ್ಳಲಾಗಿದ್ದ ಭೂಮಿಯನ್ನು ಅಪಾರ ಪ್ರಮಾಣದಲ್ಲಿ ಲೂಟಿ […]
ವಾಟ್ಸ್ಆ್ಯಪ್ ಬಿಸಿನೆಸ್ ಮೆಸೇಜ್ ಉಚಿತವಲ್ಲ: ತೆರಬೇಕು ಶುಲ್ಕ

ನವದೆಹಲಿ: ದೇಶದಲ್ಲಿ ವ್ಯಾಪಾರ ವಹಿವಾಟು ನಡೆಸುವ ಸಂಸ್ಥೆಗಳು ಗ್ರಾಹಕರೊಂದಿಗೆ ಸಂವಹನ ನಡೆಸಲು ಬಳಸುವ ವಾಟ್ಸ್ಆ್ಯಪ್ ಬಿಸಿನೆಸ್ ಪ್ಲಾಟ್ಫಾರ್ಮ್ನ ದರಪಟ್ಟಿಯನ್ನು ಮೆಟಾ ಕಂಪನಿಯು ಪರಿಷ್ಕರಿಸಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ಹೊಸ ನಿಯಮಾವಳಿಗಳ ಅನ್ವಯ, ಈವರೆಗೆ ಉಚಿತವಾಗಿದ್ದ ಪ್ರಮುಖ ಸೇವೆಗಳು ಇನ್ಮುಂದೆ ಶುಲ್ಕದ ವ್ಯಾಪ್ತಿಗೆ ಬರಲಿವೆ. ವಿಶೇಷವಾಗಿ 24 ಗಂಟೆಗಳ ಒಳಗಾಗಿ ರವಾನೆಯಾಗುತ್ತಿದ್ದ ಆರ್ಡರ್ ಹಾಗೂ ಡೆಲಿವರಿ ಸಂಬಂಧಿತ ಸಂದೇಶಗಳಿಗೆ ಇನ್ಮುಂದೆ ಕಂಪನಿಗಳು ಹಣ ತೆರಬೇಕಾಗುತ್ತದೆ. ಈ ದರ ಬದಲಾವಣೆಯು ಕೇವಲ ಎಪಿಐ ಆಧಾರಿತ ‘ವಾಟ್ಸ್ಆ್ಯಪ್ […]
RC, DLಗೆ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು: ನಿಮ್ಮ ಬಳಿ ಚಾಲನಾ ಪರವಾನಗಿ (Driving Licence) ಅಥವಾ ಸ್ವಂತ ವಾಹನವಿದ್ದರೆ, ಸಾರಿಗೆ ಇಲಾಖೆಯ ಅಧಿಕೃತ ಪೋರ್ಟಲ್ಗಳಲ್ಲಿ ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈಗ ಅತ್ಯಗತ್ಯವಾಗಿದೆ. ಡೇಟಾಬೇಸ್ನಲ್ಲಿ ನಿಖರ ಸಂಪರ್ಕ ವಿವರಗಳನ್ನು ಕಾಪಾಡಿಕೊಳ್ಳಲು ವಾಹನ ಸವಾರರು ಹಾಗೂ ಮಾಲೀಕರು ತಮ್ಮ ಮೊಬೈಲ್ ಸಂಖ್ಯೆಯನ್ನು ವಾಹನ್ ಮತ್ತು ಸಾರಥಿ ಜಾಲತಾಣಗಳಲ್ಲಿ ಕೂಡಲೇ ಅಪ್ಡೇಟ್ ಮಾಡಿಕೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಸಾರ್ವಜನಿಕರಿಗೆ ಸಲಹೆ ನೀಡಿದೆ. ಹಲವು ವರ್ಷಗಳ ಹಿಂದೆ […]
ಮಕ್ಕಳು ಅಥವಾ ವೃದ್ಧರು ಎಲ್ಲಿದ್ದಾರೆ? ಫೋನಿನ ಬ್ಯಾಟರಿ ಎಷ್ಟು ಇದೆ ಅನ್ನೋದನ್ನು ತಿಳಿಯಲು ಜಿಯೋಶೀಲ್ಡ್ ಆಪ್ ಬಿಡುಗಡೆ

ಮುಂಬೈ : ಮಕ್ಕಳು ಮನೆಯಿಂದ ಹೊರಗಡೆ ಇರಲಿ ಅಥವಾ ವೃದ್ಧರು ಏಕಾಂಗಿಯಾಗಿರಲಿ, ಅಗತ್ಯವಿರುವ ಸಮಯದಲ್ಲಿ ಎಸ್ಒಎಸ್ ಅಲರ್ಟ್ ನೀಡುವ ಜಿಯೋ ಶಿಲ್ಡ್ ಅನ್ನು ಜಿಯೋ ಬಿಡುಗಡೆ ಮಾಡಿದೆ. ಸ್ಥಳ ಟ್ರ್ಯಾಕಿಂಗ್, ಎಸ್ಒಎಸ್ ಎಚ್ಚರಿಕೆಗಳು, ಸ್ಕ್ರೀನ್ ಟೈಮ್ ಮತ್ತು ಅಪ್ಲಿಕೇಶನ್-ಸಂಪರ್ಕ ನಿಯಂತ್ರಣದಂತಹ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಜಿಯೋಶೀಲ್ಡ್ ಮೂಲಕ, ಪೋಷಕರು ಮಗುವಿನ ಸ್ಥಳವನ್ನು ನೋಡಲು ಮತ್ತು ಅಗತ್ಯವಾದ ಸುರಕ್ಷತಾ ಎಚ್ಚರಿಕೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಫೋನ್ ಬ್ಯಾಟರಿ ಕಡಿಮೆಯಿದ್ದರೆ ಆ ಕುರಿತು ಎಚ್ಚರಿಕೆಯನ್ನೂ ನೀಡುತ್ತದೆ. ಮಕ್ಕಳ ವಿಷಯದಲ್ಲಿ, ಅವರು ಯಾವ […]
ಅಕ್ಟೋಬರ್ ಮೊದಲ ವಾರದಲ್ಲಿ ಕೇಂದ್ರಕ್ಕೆ ಅಂತಿಮ ಮೆಮೊರಾಂಡಂ ಸಲ್ಲಿಕೆ: ಡಿಸಿಎಂ ಡಾ.ಜಿ ಪರಮೇಶ್ವರ್

ಬೆಂಗಳೂರು : ರಾಜ್ಯ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೂರು ತಂಡಗಳು ಕರ್ನಾಟಕಕ್ಕೆ ಆಗಮಿಸಿ ಬರ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಲಿವೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಒಂದು ತಂಡ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೊಂದು ತಂಡ ಹಾಗೂ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಮೈಸೂರು ಭಾಗದಲ್ಲಿ ಮೂರನೇ ತಂಡ ಅಧ್ಯಯನ ನಡೆಸಲಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದ […]
ಇನ್ಮುಂದೆ ಮೊಬೈಲ್ ರೀಚಾರ್ಜ್ ಮತ್ತಷ್ಟು ಅಗ್ಗ

ನವದೆಹಲಿ: ದೇಶದ ಮೊಬೈಲ್ ಬಳಕೆದಾರರ ಹಿತದೃಷ್ಟಿಯಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ಹೆಜ್ಜೆಯಿಟ್ಟಿದೆ. ಇಂಟರ್ನೆಟ್ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗಾಗಿ ಕೇವಲ ಕರೆ ಮತ್ತು ಎಸ್ಎಂಎಸ್ ಸೌಲಭ್ಯವಿರುವ ಅಗ್ಗದ ರೀಚಾರ್ಜ್ ಆಯ್ಕೆಗಳನ್ನು ಕಡ್ಡಾಯವಾಗಿ ನೀಡುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಬಳಕೆದಾರರು ಇನ್ಮುಂದೆ ತಮಗೆ ಬೇಕಾದ ಕಡಿಮೆ ಬೆಲೆಯ ಪ್ಲಾನ್ಗಳನ್ನು ಆಯ್ಕೆ ಮಾಡಿಕೊಳ್ಳಲು ಈ ತಿದ್ದುಪಡಿ ನೆರವಾಗಲಿದೆ. ಡೇಟಾ ರಹಿತ ಅಗ್ಗದ ಪ್ಲಾನ್ಗಳು ಕಡ್ಡಾಯ ಹೊಸ ನಿಯಮಾವಳಿಗಳ ಪ್ರಕಾರ, […]
ನಾಳೆಯಿಂದ ಮೂರು ದಿನ ದೇಶಾದ್ಯಂತ ಬ್ಯಾಂಕ್ ಮುಷ್ಕರ: ಯಾವ ಸೇವೆ ಲಭ್ಯ? ಯಾವುದು ಇರಲ್ಲ? ಇಲ್ಲಿದೆ ಡೀಟೆಲ್ಸ್

ನವದೆಹಲಿ: ವಾರಕ್ಕೆ ಐದು ದಿನಗಳ ಕೆಲಸದ ದಿನ ನಿಗದಿಪಡಿಸುವುದು ಸೇರಿದಂತೆ ಹಲವು ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘಟನೆಗಳು ಸೋಮವಾರದಿಂದ ಮೂರು ದಿನಗಳ ಕಾಲ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರದಿಂದಾಗಿ ಶಾಖೆಗಳಲ್ಲಿ ಚೆಕ್ ಕ್ಲಿಯರೆನ್ಸ್, ನಗದು ಠೇವಣಿ ಹಾಗೂ ಹಣ ಹಿಂಪಡೆಯುವಿಕೆ ಸೇರಿದಂತೆ ಪ್ರಮುಖ ದೈನಂದಿನ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ತಿಳಿಸಿದೆ. ಸಾರ್ವಜನಿಕ ಬ್ಯಾಂಕುಗಳ ಮೇಲೆ ಗರಿಷ್ಠ ಪರಿಣಾಮ ಈ ಮುಷ್ಕರದ ಬಿಸಿ ಮುಖ್ಯವಾಗಿ ಸಾರ್ವಜನಿಕ ವಲಯದ […]