ಖಾನಾಪುರ ನಿವಾಸಕ್ಕೆ ವಿಘ್ನ ವಿನಾಶಕ ಶ್ರೀ ಮಹಾಗಣಪತಿಯನ್ನು ಬರಮಾಡಿಕೊಂಡ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಖಾನಾಪುರ: ಗಣೇಶ ಚತುರ್ಥಿಯ ಸಡಗರದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಖಾನಾಪುರ ಪಟ್ಟಣದಲ್ಲಿರುವ ತಮ್ಮ ಸ್ವಗೃಹದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಘ್ನಹರ್ತ ಶ್ರೀ ಗಣಪತಿಯನ್ನು ಪ್ರತಿಷ್ಠಾಪಿಸಿ, ಭಕ್ತಿಪೂರ್ವಕ ನಮನ ಸಲ್ಲಿಸಿದರು. ಕುಟುಂಬಸ್ಥರೊಂದಿಗೆ ವಿಶೇಷ ಮಂಗಳಾರತಿ ಮನೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಪುತ್ರ ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಸೊಸೆ ಡಾ. ಹಿತಾ ಹೆಬ್ಬಾಳಕರ್ ಮತ್ತು ಆಪ್ತ ಕುಟುಂಬ ವರ್ಗದವರೊಂದಿಗೆ ಸಚಿವರು ದೇವರಿಗೆ ಅರ್ಚನೆ, ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ನೆರವೇರಿಸಿದರು. […]
EPFO ವಾಟ್ಸಾಪ್ ಚಾನೆಲ್ ಆರಂಭ: ಪಿಎಫ್ (PF) ಸದಸ್ಯರು ಇತ್ತೀಚಿನ ಮಾಹಿತಿಗಳನ್ನು ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಮತ್ತು ನಿವೃತ್ತ ಪಿಂಚಣಿದಾರರಿಗೆ ಭವಿಷ್ಯ ನಿಧಿಗೆ (PF) ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವ ಸಲುವಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಧಿಕೃತ ವಾಟ್ಸಾಪ್ ಚಾನೆಲ್ ಆರಂಭಿಸಿದೆ. ತನ್ನ ಡಿಜಿಟಲ್ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಲಭ ಮತ್ತು ಜನಸ್ನೇಹಿಯಾಗಿಸಲು ಸಂಸ್ಥೆ ಈ ಹೆಜ್ಜೆಯಿಟ್ಟಿದೆ. ವಾಟ್ಸಾಪ್ ಚಾನೆಲ್ನಲ್ಲಿ ಏನೆಲ್ಲಾ ಸಿಗಲಿದೆ? ಇಪಿಎಫ್ಒ ಬಿಡುಗಡೆ ಮಾಡಿರುವ ಈ ನೂತನ ಚಾನೆಲ್ ಮೂಲಕ ಸಂಸ್ಥೆಯ ಪ್ರಮುಖ ಪ್ರಕಟಣೆಗಳು, ಸೇವಾ ನವೀಕರಣಗಳು, ನಿಯಮಾವಳಿಗಳ ಬದಲಾವಣೆ ಹಾಗೂ ಪಿಂಚಣಿದಾರರಿಗೆ […]
200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ, ಕೇಂದ್ರದ ನಿಯಮಾನುಸಾರ ಘೋಷಣೆ: ಸಿಎಂ ಡಿ ಕೆ ಶಿವಕುಮಾರ್

ಕನಕಪುರ : “ಈ ಬಾರಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಗೆ ಸಿಲುಕಿವೆ. ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕನಕಪುರದ ನಿವಾಸದಲ್ಲಿ ಶಿವಕುಮಾರ್ ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಕರ್ನಾಟಕ ರಾಜ್ಯದ ಜನತೆಗೆ ಸರ್ಕಾರ ಹಾಗೂ ವೈಯಕ್ತಿಕವಾಗಿ ಗೌರಿ ಹಾಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಾನು ಅನೇಕ ಕಡೆ ಭೇಟಿ ನೀಡಿ ಬರ ಪರಿಶೀಲನೆ ಮಾಡಿದ್ದು, […]
ಬ್ಯಾಂಕ್ ಎಫ್ಡಿಗಿಂತ ಪೋಸ್ಟ್ ಆಫೀಸ್ ಡೆಪಾಸಿಟ್ ಉತ್ತಮವೇ?: ಇಲ್ಲಿದೆ ಬಡ್ಡಿ ದರ ಹಾಗೂ ಲಾಕ್-ಇನ್ ನಡುವಿನ ಅಸಲಿ ವ್ಯತ್ಯಾಸ!

ನವದೆಹಲಿ: ಸಾಮಾನ್ಯವಾಗಿ ಸ್ಥಿರ ಠೇವಣಿ (FD) ಹೂಡಿಕೆ ಮಾಡುವ ಬಹುತೇಕ ಗ್ರಾಹಕರು ತಾವು ಈಗಾಗಲೇ ಖಾತೆ ಹೊಂದಿರುವ ಬ್ಯಾಂಕ್ಗಳನ್ನೇ ನೆಚ್ಚಿಕೊಳ್ಳುತ್ತಾರೆ. ಆದರೆ ಕೇವಲ ಬ್ಯಾಂಕ್ಗಳಲ್ಲಷ್ಟೇ ಅಲ್ಲದೆ, ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳಲ್ಲೂ ಉತ್ತಮ ಲಾಭ ಗಳಿಸಲು ಸಾಧ್ಯವೇ ಎಂಬ ಚರ್ಚೆಯನ್ನು ‘ಎಂಬಿಎ ಚಾಯ್ವಾಲಾ’ ಸಂಸ್ಥಾಪಕ ಪ್ರಫುಲ್ ಬಿಲ್ಲೋರ್ ಮುನ್ನೆಲೆಗೆ ತಂದಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅವರು ಎಸ್ಬಿಐ ಎಫ್ಡಿ, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಹೋಲಿಸಿ ವಿಶ್ಲೇಷಣೆ […]
ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂನಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡಲಿರುವ ಆಯೋಜಕರು, ಸಂಘ-ಸಂಸ್ಥೆಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿಕೆ ಹಾಗೂ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅಗತ್ಯ ಸರಕ್ಷತಾ ಕ್ರಮಗಳನ್ನು ಪಾಲಿಸಲು ಕ್ಷೇತ್ರಾಧಿಕಾರಿಗಳಿಗೆ ಬೆಸ್ಕಾಂ ಸೂಚನೆ ನೀಡಿದೆ. ಬೆಸ್ಕಾಂ ಉಪ ವಿಭಾಗಾಧಿಕಾರಿಗಳು ಸ್ಥಳೀಯ ಪ್ರಾಧಿಕಾರಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾವುದೇ ವಿಳಂಬ ಅನುಸರಿಸದೆ ಸುರಕ್ಷತಾ ಕ್ರಮಗಳನ್ನು ಖಾತರಿಪಡಿಸಿಕೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ. ಬೆಸ್ಕಾಂ ಮಾರ್ಗಸೂಚಿ ಸಂಬಂಧಪಟ್ಟ […]
ರಾತ್ರಿ ಪಾಳಿ ಮುಗಿಸಿ ಮನೆಗೆ ಮರಳಿದ್ದ ಡಿಎಆರ್ ಪೊಲೀಸ್ ಪೇದೆ ಹೃದಯಾಘಾತದಿಂದ ನಿಧನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ (DAR) ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಮುಂಜಾನೆ ಸಂಭವಿಸಿದ ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ಕೊನೆಯುಸಿರೆಳೆದಿದ್ದಾರೆ. ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಬಡಾವಣೆ ನಿವಾಸಿ ಐರಾಜು (40) ಮೃತ ದುರ್ದೈವಿ. ಕರ್ತವ್ಯನಿಷ್ಠ ಅಧಿಕಾರಿಯೊಬ್ಬರು ಅತಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದು ಪೊಲೀಸ್ ಇಲಾಖೆ ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ. ಕರ್ತವ್ಯ ಮುಗಿಸಿ ಬಂದ ಬೆನ್ನಲ್ಲೇ ದುರಂತ: ನಿನ್ನೆ ರಾತ್ರಿಯ ಪಾಳಿ ಕರ್ತವ್ಯವನ್ನು ಅಚ್ಚುಕಟ್ಟಾಗಿ ಪೂರೈಸಿದ್ದ ಐರಾಜು, ಎಂದಿನಂತೆ ಚಿಂತಾಮಣಿಯ ತಮ್ಮ ಮನೆಗೆ […]
ಆರ್ಎಸ್ಎಸ್ ವ್ಯವಸ್ಥೆಯನ್ನೇ ಕಬಳಿಸುತ್ತಿರುವ ಆಕ್ಟೋಪಸ್; ಸುಳ್ಳು ಹರಡುವುದೇ ಅವರ ತರಬೇತಿ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಿದ್ಧಾಂತ ಹಾಗೂ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಮತ್ತೊಮ್ಮೆ ತೀವ್ರ ವಾಕ್ಪ್ರಹಾರ ನಡೆಸಿದ್ದಾರೆ. ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಸಂಸ್ಥೆಯನ್ನು ಸರ್ವವ್ಯಾಪಿ ‘ಆಕ್ಟೋಪಸ್’ಗೆ ಹೋಲಿಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ‘ಆಕ್ಟೋಪಸ್ನಂತೆ ಎಲ್ಲಾ ರಂಗಗಳಿಗೂ ಲಗ್ಗೆ’: ಆರ್ಎಸ್ಎಸ್ ಅನ್ನು ಕಬಂಧಬಾಹುಗಳ ಆಕ್ಟೋಪಸ್ಗೆ ಹೋಲಿಸಿದ ಹರಿಪ್ರಸಾದ್, “ಈ ಸಂಘಟನೆಯು ಕೇವಲ ಸಾರ್ವಜನಿಕ ರಂಗಕ್ಕೆ ಸೀಮಿತವಾಗಿರದೆ ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಕ್ಷೇತ್ರಗಳಲ್ಲೂ ಆಳವಾಗಿ ಬೇರೂರಿದೆ. […]
ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿಕೆಶಿ ಕಿಡಿಕಿಡಿ

ಬೆಂಗಳೂರು : “ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ ಶಕ್ತಿಗಳ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಪೋಲೀಸರಿಗೆ ಸೂಚಿಸಿದ್ದೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು. ಗಣೇಶೋತ್ಸವ ಆಚರಣೆಗೆ ಸರ್ಕಾರ ಅನೇಕ ನಿರ್ಬಂಧ ಹೇರಿದೆ ಎಂಬ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈ ವಿಚಾರದಲ್ಲಿ ಕೋಮು ಪ್ರಚೋದನೆ […]
ಭಾರತೀಯರಿಗೆ ಉಜ್ಬೇಕಿಸ್ತಾನ್ ಬಂಪರ್ ಆಫರ್: ವೀಸಾ ಇಲ್ಲದೆ 30 ದಿನ ಪ್ರವಾಸ!

ನವದೆಹಲಿ: ವಿದೇಶ ಪ್ರವಾಸದ ಕನಸು ಕಾಣುತ್ತಿರುವ ಭಾರತೀಯ ಪ್ರವಾಸಿಗರಿಗೆ ಮಧ್ಯ ಏಷ್ಯಾದ ಸುಂದರ ದೇಶ ಉಜ್ಬೇಕಿಸ್ತಾನ್ ಸಿಹಿ ಸುದ್ದಿ ನೀಡಿದೆ. ಭಾರತೀಯ ಪಾಸ್ಪೋರ್ಟ್ ಹೊಂದಿರುವ ನಾಗರಿಕರಿಗೆ 30 ದಿನಗಳ ಕಾಲ ವೀಸಾ ರಹಿತ ಪ್ರವೇಶ (Visa-Free Regime) ಕಲ್ಪಿಸುವುದಾಗಿ ಉಜ್ಬೇಕಿಸ್ತಾನ್ ಅಧ್ಯಕ್ಷ ಶಾವ್ಕತ್ ಮಿರ್ಜಿಯೊಯೆವ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಷ್ಕೆಂಟ್ ಭೇಟಿಯ ವೇಳೆ ಉಭಯ ನಾಯಕರ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರವು […]
iPhone Duo: ಹೊಸ ಐಫೋನ್ ಬೆಲೆಗೆ ಜಗತ್ತನ್ನೇ ಸುತ್ತಿ ಬರಬಹುದು! ಹೌದಾ ಅಂತ ಅಚ್ಚರಿ ಪಡಬೇಡಿ ಈ ಸುದ್ದಿ ಓದಿ!

ಪ್ರತಿ ಬಾರಿಯೂ ಆಪಲ್ ಸಂಸ್ಥೆ ಹೊಸ ಐಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಒಂದು ಚಾಳಿ ಸಾಮಾನ್ಯ: ಜನರು ಅದರ ವೈಶಿಷ್ಟ್ಯಗಳಿಗಿಂತ ಹೆಚ್ಚಾಗಿ ನಿಗದಿಪಡಿಸಲಾದ ದುಬಾರಿ ಬೆಲೆಯನ್ನು ನೋಡಿ ಬೆಚ್ಚಿಬೀಳುತ್ತಾರೆ. ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ಕಿಡ್ನಿ ಮಾರುವ ಹಳೆಯ ಜೋಕುಗಳು, ಮೀಮ್ಗಳು ಮತ್ತು “ಅದೇ ದುಡ್ಡಿನಲ್ಲಿ ಬೇರೇನೇನು ಕೊಳ್ಳಬಹುದು?” ಎಂಬ ಲೆಕ್ಕಾಚಾರಗಳು ಬಿರುಸಿನಿಂದ ಶುರುವಾಗುತ್ತವೆ. ಆದರೆ ಈ ಬಾರಿ ಆಪಲ್ ಬಿಡುಗಡೆ ಮಾಡಿರುವ ‘ಐಫೋನ್ ಡ್ಯುಯೊ’ (iPhone Duo) ಫೋಲ್ಡೇಬಲ್ ಮೊಬೈಲ್ ಈ ಚರ್ಚೆಯನ್ನು ಮತ್ತೊಂದು ದುಬಾರಿ ಹಂತಕ್ಕೆ […]