ಸಾಫ್ಟ್ ವೇರ್ ಅಳವಡಿಕೆ: ಬೆಸ್ಕಾಂನ 20 ಪಟ್ಟಣಗಳಲ್ಲಿ 2 ದಿನ ಆನ್ ಲೈನ್ ಸೇವೆ ಅಲಭ್ಯ

ಬೆಂಗಳೂರು: ಸಮಗ್ರ ವಿದ್ಯುತ್ ಅಭಿವೃದ್ದಿ ಯೋಜನೆಯ (ಐಪಿಡಿಎಸ್) ಹಂತ-2 ರ ಅಡಿಯಲ್ಲಿ ಬೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಪಟ್ಟಣ ಪ್ರದೇಶಗಳಲ್ಲಿ ದಿನಾಂಕ 15.09.2026 ರ ಮಧ್ಯ ರಾತ್ರಿಯಿಂದ 17.09.2026 ರ ಮಧ್ಯ ರಾತ್ರಿವರೆಗೆ ಬೆಸ್ಕಾಂನ ಆನ್ ಲೈನ್ ಸೇವೆಗಳು ಲಭ್ಯ ವಿರುವುದಿಲ್ಲ. ಪ್ರಸುತ ಚಾಲ್ತಿಯಲ್ಲಿರುವ ಸಾಫ್ಟ್ ವೇರ್ ಅನ್ನು ಉನ್ನುತಿಕರಿಸುವ ಸಲುವಾಗಿ 2 […]

ಕರ್ನಾಟಕಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ: ಮುಂದಿನ ವರ್ಷದಿಂದ ಇಂಜಿನಿಯರ್ ಡೇ ಸರ್ಕಾರದಿಂದ ಆಚರಣೆ; ಸಿಎಂ ಡಿಕೆಶಿ

ಬೆಂಗಳೂರು : “ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಇಂಜಿನಿಯರ್ ಗಳ ದಿನ ಆಚರಣೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕೆ ಆರ್ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಶಿವಕುಮಾರ್ ಅವರು ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. “ಸರ್ಕಾರ ವತಿಯಿಂದ ಇಂಜಿನಿಯರ್ ದಿನ ಆಚರಿಸುವ ಪ್ರಸ್ತಾವನೆ ನೀಡಿದ್ದು, ನಾನು ಅದಕ್ಕೆ ಸಮ್ಮತಿ ಸೂಚಿಸಿದ್ದೇನೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ತಯಾರು ಮಾಡುತ್ತಿದೆ. ಭಾರತದಲ್ಲಿ […]

1 ಬಿಲಿಯನ್ ಡಾಲರ್ ಗಡಿ ದಾಟಿದ ಅಮೆಜಾನ್ ನೌ ವಾರ್ಷಿಕ ಮಾರಾಟದ ವಹಿವಾಟು

ಬೆಂಗಳೂರು: ಅಮೆಜಾನ್‌ನ ಅತಿ ವೇಗದ ವಿತರಣಾ ಸೇವೆ ‘ಅಮೆಜಾನ್ ನೌ’ ಭಾರತದಲ್ಲಿ ಕಳೆದ ಮೂರು ತಿಂಗಳ ಅವಧಿಯ ಆಧಾರದ ಮೇಲೆ ವಾರ್ಷಿಕೀಕೃತ ಒಟ್ಟು ಮಾರಾಟದಲ್ಲಿ 1 ಬಿಲಿಯನ್ ಡಾಲರ್ ಗಡಿ ದಾಟಿದೆ. ಸೇವೆ ಆರಂಭವಾದಾಗಿನಿಂದ ಪ್ರತಿ ತ್ರೈಮಾಸಿಕದಲ್ಲೂ ಆರ್ಡರ್‌ಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಅಮೆಜಾನ್ ಇಂಡಿಯಾದ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಘಟಕವಾಗಿ ‘ಅಮೆಜಾನ್ ನೌ’ ಹೊರಹೊಮ್ಮಿದೆ. ಕೇವಲ 10 ವಾರಗಳಲ್ಲಿ ಸೇವೆಯನ್ನು 4 ಪಟ್ಟು ಹೆಚ್ಚು ನಗರಗಳಿಗೆ ವಿಸ್ತರಿಸಲಾಗಿದ್ದು, ದೇಶದ 60ಕ್ಕೂ ಅಧಿಕ ನಗರಗಳು ಹಾಗೂ […]

ರೂ.2,000ವರೆಗೆ UPI ಪಾವತಿಗೆ ಶುಲ್ಕವಿಲ್ಲ, ರೂಪೇ ಡೆಬಿಟ್ ಕಾರ್ಡ್‌ ವಹಿವಾಟಿಗೂ ಶುಲ್ಕ ವಿಧಿಸುವಂತಿಲ್ಲ: ಕೇಂದ್ರ ಹಣಕಾಸು ಸಚಿವಾಲಯ

ನವದೆಹಲಿ: ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ₹2,000 ವರೆಗಿನ ಯಾವುದೇ ಯುಪಿಐ (UPI) ಹಾಗೂ ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಬ್ಯಾಂಕ್‌ಗಳಾಗಲಿ ಅಥವಾ ಪಾವತಿ ಸೇವಾ ಪೂರೈಕೆದಾರರಾಗಲಿ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಕಾಯ್ದೆ ತಿದ್ದುಪಡಿ ಮೂಲಕ ಅಧಿಕೃತ ಅಧಿಸೂಚನೆ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007ರ (Payment and Settlement […]

ಉಗ್ರ ಮಸೂದ್ ಅಜರ್ ಸುಳಿವು ನೀಡಿದವರಿಗೆ 24 ಲಕ್ಷ ಬಹುಮಾನ ಘೋಷಿಸಿದ ಪಾಕಿಸ್ತಾನ

ಇಸ್ಲಾಮಾಬಾದ್: ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಮತ್ತೊಮ್ಮೆ ಹಳೇ ಕಳ್ಳಾಟಕ್ಕೆ ಮುಂದಾಗಿದೆ. ಭಾರತದಲ್ಲಿ ನಡೆದ ಹಲವು ಭೀಕರ ವಿಧ್ವಂಸಕ ಕೃತ್ಯಗಳ ರೂವಾರಿ, ಜೈಶ್-ಎ-ಮೊಹಮ್ಮದ್ (JeM) ಮುಖ್ಯಸ್ಥ ಹಾಗೂ ಅಂತಾರಾಷ್ಟ್ರೀಯ ಉಗ್ರ ಮೌಲಾನಾ ಮಸೂದ್ ಅಜರ್ ಸುಳಿವು ನೀಡಿದವರಿಗೆ ಬರೋಬ್ಬರಿ 70 ಲಕ್ಷ ಪಾಕಿಸ್ತಾನಿ ರೂಪಾಯಿ (ಭಾರತೀಯ ಮೌಲ್ಯದಲ್ಲಿ ಸುಮಾರು ₹24.09 ಲಕ್ಷ) ಬಹುಮಾನ ನೀಡುವುದಾಗಿ ಪಾಕ್‌ನ ಫೆಡರಲ್ ತನಿಖಾ ಸಂಸ್ಥೆ (FIA) ಅಧಿಕೃತವಾಗಿ ಪ್ರಕಟಿಸಿದೆ. ಎಫ್‌ಎಟಿಎಫ್ ಸಭೆ ಬೆನ್ನಲ್ಲೇ ಗಿಮಿಕ್ ಪ್ಯಾರಿಸ್‌ನಲ್ಲಿ ಅಕ್ಟೋಬರ್ […]

ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ, ನಟ ಓಂ ಪ್ರಕಾಶ್ ರಾವ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬೆಂಗಳೂರು: ‘ಬಿಗ್ ಬಾಸ್ ಕನ್ನಡ 13’ ಆರಂಭವಾದ ಕೆಲವೇ ದಿನಗಳಲ್ಲಿ ರಿಯಾಲಿಟಿ ಶೋ ಅಂಗಳದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಸ್ಪರ್ಧಿಯಾಗಿ ಅಖಾಡಕ್ಕಿಳಿದಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಹಠಾತ್ ಎದುರಾದ ಆರೋಗ್ಯ ಸಮಸ್ಯೆಯಿಂದಾಗಿ ತುರ್ತಾಗಿ ಆಸ್ಪತ್ರೆ ಪಾಲಾಗಿದ್ದಾರೆ. ದೈಹಿಕ ಒತ್ತಡಕ್ಕೆ ಉಲ್ಬಣಿಸಿದ ನೋವು ಹಿಂದೊಮ್ಮೆ ಭೀಕರ ಅಪಘಾತದಲ್ಲಿ ಸಿಲುಕಿದ್ದ ಓಂ ಪ್ರಕಾಶ್ ರಾವ್ ಅವರ ಕಾಲು ತೀವ್ರವಾಗಿ ಜಖಂಗೊಂಡಿತ್ತು. ದೊಡ್ಮನೆಯ ಕಠಿಣ ನಿಯಮಗಳು ಮತ್ತು ಸತತವಾಗಿ ನಡೆಯುತ್ತಿದ್ದ ದೈಹಿಕ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪರಿಣಾಮ, […]

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಏನಾಗುತ್ತೆ?: ಅಸಲಿ ಸತ್ಯ ಬಿಚ್ಚಿಟ್ಟ ತಜ್ಞರು!

ನವದೆಹಲಿ: ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುವುದು ಆರೋಗ್ಯಕ್ಕೆ ಅತ್ಯುತ್ತಮ ಎಂಬ ನಂಬಿಕೆ ಬಹುತೇಕರಲ್ಲಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ತಿಂದರಷ್ಟೇ ಇದರ ಪೌಷ್ಟಿಕಾಂಶಗಳು ಮೈಗೂಡುತ್ತವೆ ಎಂಬುದಕ್ಕೆ ಯಾವುದೇ ದೃಢ ವೈದ್ಯಕೀಯ ಸಾಕ್ಷ್ಯಾಧಾರಗಳಿಲ್ಲ. ಆದಾಗ್ಯೂ, ಪಪ್ಪಾಯಿ ಅತ್ಯಂತ ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡ ಹಣ್ಣಾಗಿದ್ದು, ಇದನ್ನು ದಿನದ ಯಾವುದೇ ಸಮಯದಲ್ಲಿ ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೂ ದೇಹಕ್ಕೆ ಹತ್ತಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಆಹಾರ ತಜ್ಞರು ಸ್ಪಷ್ಟಪಡಿಸಿದ್ದಾರೆ. ಜೀರ್ಣಕ್ರಿಯೆ ಸುಧಾರಣೆ ಹಾಗೂ ಜಲಾಂಶ ವೃದ್ಧಿ […]

ಬೆಳಗ್ಗಿನ ತಿಂಡಿಗೆ ಬ್ರೆಡ್ ಬೇಡವೇ ಬೇಡ: ಇಲ್ಲಿದೆ 5 ಪವರ್‌ಫುಲ್ ಹೆಲ್ತಿ ಬ್ರೇಕ್‌ಫಾಸ್ಟ್!

ನವದೆಹಲಿ: ಬೆಳಗಿನ ಜಾವದ ಅವಸರದಲ್ಲಿ ಬಹುತೇಕರ ಮನೆಗಳಲ್ಲಿ ಬ್ರೆಡ್-ಬಟರ್ ಅಥವಾ ಬ್ರೆಡ್ ಟೋಸ್ಟ್ ಸಾಮಾನ್ಯ ಉಪಾಹಾರವಾಗಿಬಿಟ್ಟಿದೆ. ಆದರೆ ಮೈದಾ ಹಾಗೂ ಸಂಸ್ಕರಿಸಿದ ಹಿಟ್ಟಿನಿಂದ ತಯಾರಾಗುವ ಬಿಳಿ ಬ್ರೆಡ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುವುದರ ಜೊತೆಗೆ ಕೆಲವೇ ಗಂಟೆಗಳಲ್ಲಿ ಮತ್ತೆ ಹಸಿವು ಹಾಗೂ ಸುಸ್ತು ಉಂಟುಮಾಡುತ್ತದೆ. ಹೀಗಾಗಿ ಬ್ರೆಡ್ ಬದಲಿಗೆ ದಿನವಿಡೀ ದೇಹದಲ್ಲಿ ಸಮತೋಲಿತ ಶಕ್ತಿ ಕಾಯ್ದುಕೊಳ್ಳಲು ನೆರವಾಗುವ 5 ಆರೋಗ್ಯಕರ ಹಾಗೂ ಸಾಂಪ್ರದಾಯಿಕ ಉಪಾಹಾರ ಆಯ್ಕೆಗಳನ್ನು ಆಹಾರ ತಜ್ಞರು ಶಿಫಾರಸು ಮಾಡಿದ್ದಾರೆ. ಪೋಷಕಾಂಶಗಳ ಗಣಿ ರಾಗಿ […]

ಆಗಸ್ಟ್‌ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 4.82ಕ್ಕೆ ಏರಿಕೆ, ಜನಸಾಮಾನ್ಯರಿಗೆ ದರ ಏರಿಕೆ ಶಾಕ್!

ನವದೆಹಲಿ: ಅಡುಗೆಮನೆಯ ದಿನನಿತ್ಯದ ಅಗತ್ಯ ವಸ್ತುಗಳು ಹಾಗೂ ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಸತತ ಮೂರನೇ ತಿಂಗಳೂ ಮೇಲ್ಮುಖ ಚಲನೆ ಮುಂದುವರಿಸಿದೆ. ಜುಲೈ ತಿಂಗಳಲ್ಲಿದ್ದ ಶೇಕಡಾ 4.45 ರ ಮಟ್ಟದಿಂದ ಆಗಸ್ಟ್ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಶೇಕಡಾ 4.82ಕ್ಕೆ ಜಿಗಿದಿದೆ ಎಂದು ಕೇಂದ್ರ ಸಾಂಖ್ಯಿಕ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಿದೆ. ಪಟ್ಟಣಗಳಿಗಿಂತ ಹಳ್ಳಿಗಳಲ್ಲೇ ಬೆಲೆ ಏರಿಕೆಯ ಹೊಡೆತ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಹಣದುಬ್ಬರ ಶೇ. […]

ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್: ಶಾಲಾ ಸಮಯ ಬದಲಾವಣೆಗೆ ಚಿಂತನೆ

ಬೆಂಗಳೂರು: ರಾಜಧಾನಿಯ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ. ನಗರದ ಸರ್ಕಾರಿ ಶಾಲೆಗಳ ಆರಂಭದ ಸಮಯವನ್ನು ಪ್ರಸ್ತುತ ವೇಳಾಪಟ್ಟಿಗಿಂತ ಅರ್ಧ ಗಂಟೆಯಿಂದ ಒಂದು ಗಂಟೆ ಮುಂಚಿತವಾಗಿ ಆರಂಭಿಸುವ ಕುರಿತು ಸರ್ಕಾರ ಮತ್ತೊಮ್ಮೆ ಗಂಭೀರ ಚಿಂತನೆ ನಡೆಸಿದೆ. ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಗಳ ಕಾರ್ಯಾರಂಭ? ಪ್ರಸ್ತುತ ಬೆಂಗಳೂರಿನ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳಗ್ಗೆ 8:30 ರಿಂದ ಮಧ್ಯಾಹ್ನ 3:30 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಸರ್ಕಾರಿ […]